Commonwealth ಬಳಿಕ ಇದೀಗ Olympics ನಲ್ಲಿಯೂ ಕೂಡ ಕ್ರಿಕೆಟ್ ಮರುಪ್ರವೇಶ!

Cricket In Olympics: ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ನ ಬಹುನಿರೀಕ್ಷಿತ ಮರುಪ್ರವೇಶದ ಸಾಧ್ಯತೆ ಹೆಚ್ಚಾಗತೊಡಗಿದೆ. ಏಕೆಂದರೆ ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ (IOC) ಯುಎಸ್ಎಯ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಂಪಿಕ್ಸ್ನಲ್ಲಿ ಸೇರ್ಪಡೆಗೊಳ್ಳಲು ಬಯಸುವ 9 ಇತರ ಆಟಗಳ ವಿಮರ್ಶೆಯ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಇರಿಸಿದೆ.

Written by - Nitin Tabib | Last Updated : Aug 4, 2022, 04:11 PM IST
  • ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ನ ಬಹುನಿರೀಕ್ಷಿತ ಮರುಪ್ರವೇಶದ ಸಾಧ್ಯತೆ ಹೆಚ್ಚಾಗತೊಡಗಿದೆ.
  • ಏಕೆಂದರೆ ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ (IOC) ಯುಎಸ್ಎಯ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಂಪಿಕ್ಸ್ನಲ್ಲಿ
  • ಸೇರ್ಪಡೆಗೊಳ್ಳಲು ಬಯಸುವ 9 ಇತರ ಆಟಗಳ ವಿಮರ್ಶೆಯ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಇರಿಸಿದೆ.
Commonwealth ಬಳಿಕ ಇದೀಗ Olympics ನಲ್ಲಿಯೂ ಕೂಡ ಕ್ರಿಕೆಟ್ ಮರುಪ್ರವೇಶ! title=
Cricket In Olympics

Cricket In Olympics:  ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ನ ಬಹುನಿರೀಕ್ಷಿತ ಮರುಪ್ರವೇಶದ ಸಾಧ್ಯತೆ ಹೆಚ್ಚಾಗತೊಡಗಿದೆ. ಏಕೆಂದರೆ ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ (IOC) ಯುಎಸ್ಎಯ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಂಪಿಕ್ಸ್ನಲ್ಲಿ ಸೇರ್ಪಡೆಗೊಳ್ಳಲು ಬಯಸುವ 9 ಇತರ ಆಟಗಳ ವಿಮರ್ಶೆಯ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಇರಿಸಿದೆ. ಕ್ರಿಕೆಟ್‌ಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಸಿಕ್ಕಿದ್ದು ಒಂದೇ ಬಾರಿ ಎಂಬುದು ಇಲ್ಲಿ ಉಲ್ಲೇಖನೀಯ. 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಆಟಗಳಲ್ಲಿ ಕ್ರಿಕೆಟ್ ಕೂಡ ಒಂದಾಗಿತ್ತು. ಆಗ ಬ್ರಿಟನ್ ಮತ್ತು ಆತಿಥೇಯ ಫ್ರಾನ್ಸ್ ಮಾತ್ರ ಇದರಲ್ಲಿ ಭಾಗವಹಿಸಿದ್ದವು.

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಯೋಜನೆ
ESPNcricinfo ನಲ್ಲಿ ಪ್ರಕಟಗೊಂಡ ಪ್ರಕಾರ, ಲಾಸ್ ಏಂಜಲೀಸ್ ಕ್ರೀಡಾಕೂಟದ ಸಂಘಟನಾ ಸಮಿತಿ ಮತ್ತು IOC ತಮ್ಮ ಪ್ರಸ್ತುತಿಯನ್ನು ಸಾದರುಪಡಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು (ICC) ಆಹ್ವಾನಿಸಿದ ಒಂದು ದಿನದ ನಂತರ ವಿಮರ್ಶೆ ಕ್ರೀಡೆಗಳ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಸೇರಿಸುವ ನಿರ್ಧಾರವು ಪ್ರಕಟಗೊಂಡಿದೆ. ಆದರೆ, ಈ ಬಗ್ಗೆ ಅಂತಿಮ ನಿರ್ಧಾರವನ್ನು ಮುಂಬೈನಲ್ಲಿ 2023 ರಲ್ಲಿ ನಡೆಯಬೇಕಿರುವ ಐಒಸಿ ಅಧಿವೇಶನದ ಮೊದಲು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸಿಂಗ್, ಕರಾಟೆ, ಕಿಕ್‌ಬಾಕ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್‌ಸ್ಪೋರ್ಟ್‌ಗಳನ್ನು ಪ್ರಸ್ತುತ ವಿಮರ್ಶಾ ಪಟ್ಟಿಯಲ್ಲಿ ಇರಿಸಲಾಗಿದೆ.

2028ರಲ್ಲಿ ಕ್ರಿಕೆಟ್ ಒಲಿಂಪಿಕ್ ಗೆ ಸೇರ್ಪಡೆಯಾಗುವ ಸಾಧ್ಯತೆ!
2028ರ ಒಲಿಂಪಿಕ್ಸ್‌ನಲ್ಲಿ ಒಟ್ಟು 28 ಕ್ರೀಡೆಗಳನ್ನು ಸೇರಿಸಲಾಗುವುದು ಎಂದು IOC ಈ ವರ್ಷದ ಆರಂಭದಲ್ಲಿ ಹೇಳಿತ್ತು. ಇದರೊಂದಿಗೆ ಯುವಕರ ಮೇಲೆ ಗಮನವನ್ನು ಕೇಂದ್ರೀಕರಿಸಿ, ಹೊಸ ಹೊಸ ಕ್ರೀಡೆಗಳ ಸೇರ್ಪಡೆಯನ್ನು ಪರಿಗಣಿಸಿ ಎಂದೂ ಕೂಡ ಅದು ಹೇಳಿತ್ತು.  IOC ಪ್ರಕಾರ, ಒಲಿಂಪಿಕ್ಸ್‌ನಲ್ಲಿ ಯಾವುದೇ ಒಂದು ಕ್ರೀಡೆಯನ್ನು ಸೇರಿಸಲು, ಆ ಕ್ರೀಡೆ ಕೆಲವು ಮಾನದಂಡಗಳನ್ನು ಪೂರೈಸಬೇಕು. ಇವುಗಳಲ್ಲಿ ವೆಚ್ಚ ಮತ್ತು ಸಂಕೀರ್ಣತೆಯನ್ನು ಕಡಿಮೆ ಮಾಡುವುದು, ಸುರಕ್ಷತೆ ಮತ್ತು ಆರೋಗ್ಯದೊಂದಿಗೆ ಉತ್ತಮ ಆಟಗಾರರ ಲಭ್ಯತೆಯಲ್ಲಿ ಕ್ರೀಡೆಗೆ ಪ್ರಥಮ ಸ್ಥಾನ ನೀಡುವುದು, ಜಾಗತಿಕ ಆಕರ್ಷಣೆ, ಆತಿಥೇಯ ದೇಶದ ಆಸಕ್ತಿ, ಲಿಂಗ ಸಮಾನತೆ, ಯುವ ಪ್ರಸ್ತುತತೆ, ದೀರ್ಘಾವಧಿಯ ಸುಸ್ಥಿರತೆ ಇತ್ಯಾದಿಗಳು ಶಾಮೀಲಾಗಿವೆ.

ಇದನ್ನೂ ಓದಿ-IND vs WI : ಟೀಂ ಇಂಡಿಯಾ ಟಿ20 ಪಂದ್ಯಕ್ಕೆ ಎದುರಾಗಿದ್ದ ವೀಸಾ ಸಮಸ್ಯೆ ಕ್ಲಿಯರ್!

ಪ್ರಸ್ತುತ ಕಾಮನ್‌ವೆಲ್ತ್‌ನಲ್ಲೂ ಕ್ರಿಕೆಟ್ ಆಡಲಾಗುತ್ತಿದೆ
ಪ್ರಸ್ತುತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಲಾಗಿದೆ ಆದರೆ ಮಹಿಳಾ ಕ್ರಿಕೆಟಿಗರು ಮಾತ್ರ ಅದರಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಇದರಲ್ಲಿ ಒಟ್ಟು ಎಂಟು ದೇಶಗಳು ಟಿ20 ಮಾದರಿಯ ಕ್ರಿಕೆಟ್ ಅನ್ನು ಆಡುತ್ತಿವೆ. ಆದರೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರೀಡೆಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸೇರಿಸುವುದು ಅವಶ್ಯಕವಾಗಿದೆ. ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ವಿಶೇಷ ಆಕರ್ಷಣೆಯಾಗಿ ಮುಂದುವರಿಯುತ್ತಿರುವ ಬಗ್ಗೆ ತಮಗೆ ಭಾರಿ ಸಂತಸವಾಗಿದೆ ಎಂದು ಐಸಿಸಿ ಸಿಇಒ ಜಿಯೋಫ್ ಅಲ್ಲಾರ್ಡೈಸ್ ಹೇಳಿದ್ದಾರೆ.

ಇದನ್ನೂ ಓದಿ-ಸ್ಕ್ವಾಷ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಸೌರವ್ ಘೋಸಾಲ್

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಲ್ಲಾರ್ಡೈಸ್, "ವಿಶ್ವದ ಅತ್ಯುತ್ತಮ ಆಟಗಾರರು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಮುಂದೆ ಹೇಗೆ ಆಡುತ್ತಿದ್ದಾರೆ ಎಂಬುದನ್ನು ನಾವು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೋಡಿದ್ದೇವೆ ಮತ್ತು ಟಿವಿಯಲ್ಲಿ ಬಹಳಷ್ಟು ವೀಕ್ಷಕರು ವೀಕ್ಷಿಸುತ್ತಾರೆ ಎಂಬುದು ನನಗೆ ಖಾತ್ರಿಯಿದೆ." ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News