Paris Olympic 2024: ಟೇಬಲ್ ಟೆನಿಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ

Paris Olympic 2024: ಟೇಬಲ್ ಟೆನಿಸ್‌ಗೆ ಸಂಬಂಧಿಸಿದಂತೆ ಭಾರತಕ್ಕೆ ಡಬಲ್ ಗುಡ್ ನ್ಯೂಸ್ ಬಂದಿದೆ. ಇದೇ ಮೊದಲ ಬಾರಿಗೆ ಭಾರತದ ಪುರುಷ ಮತ್ತು ಮಹಿಳೆಯರ ಟೇಬಲ್ ಟೆನಿಸ್ ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು,  ಈ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ತಮ್ಮ ಚಮತ್ಕಾರ ತೋರಲು ಸಜ್ಜಾಗಿವೆ. 

Written by - Yashaswini V | Last Updated : Mar 5, 2024, 08:52 AM IST
  • ಇತ್ತೀಚಿನ TT ಮಾರ್ಚ್ ವಿಶ್ವ ತಂಡದ ಶ್ರೇಯಾಂಕಗಳು ಪುರುಷರ ತಂಡವು WR15 ನಲ್ಲಿ ಸ್ಥಿರವಾಗಿದೆ ಎಂದು ಬಹಿರಂಗಪಡಿಸುತ್ತದೆ.
  • ಇದೇ ವೇಳೆ, ಮಹಿಳಾ ತಂಡವು WR13 ಗೆ ಗಮನಾರ್ಹ ಜಿಗಿತವನ್ನು ಕಂಡಿದೆ.
Paris Olympic 2024: ಟೇಬಲ್ ಟೆನಿಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ  title=

Paris Olympic 2024: ಭಾರತದ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನಿಸ್ ತಂಡಗಳು ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿವೆ. ಸೋಮವಾರ(ಮಾರ್ಚ್ 04)  ವಿಶ್ವ ರ್ಯಾಂಕಿಂಗ್ ಆಧಾರದ ಮೇಲೆ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಈ ಮೂಲಕ ಮುಂಬರುವ ಒಲಿಂಪಿಕ್ಸ್‌ನಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ. 

ಕಳೆದ ತಿಂಗಳು ಬುಸಾನ್‌ನಲ್ಲಿ ನಡೆದ ಐಟಿಟಿಎಫ್ ವಿಶ್ವ ಟೇಬಲ್ ಟೆನಿಸ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಹಿನ್ನಡೆಯನ್ನು ಎದುರಿಸಿದ್ದ ಭಾರತೀಯ ತಂಡಗಳು ವಿಶ್ವ ರ‍್ಯಾಂಕಿಂಗ್ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಇದೀಗ, ವಿಶ್ವ ರ್ಯಾಂಕಿಂಗ್ ಆಧಾರದ ಮೇಲೆ ಭಾರತದ ಉಭಯ ತಂಡಗಳು ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿವೆ. ಈ ಸುದ್ದಿ ಭಾರತೀಯ ಕ್ರೀಡಾ ಉತ್ಸಾಹಿಗಳಲ್ಲಿ ಹರ್ಷವುಂಟುಮಾಡಿದೆ.  

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಐ‌ಐ‌ಟಿ‌ಎಫ್, 'ಇತ್ತೀಚಿನ ವಿಶ್ವ ತಂಡದ ಶ್ರೇಯಾಂಕದಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗದ ಅಗ್ರ ಶ್ರೇಯಾಂಕದ ತಂಡಗಳು ಪ್ಯಾರಿಸ್ ಒಲಿಂಪಿಕ್ಸ್‌ 2024ಕ್ಕೆ ತಮ್ಮ ಟಿಕೆಟ್‌ಗಳನ್ನು ಪಡೆದುಕೊಂಡಿವೆ'. ಮಹಿಳೆಯರಲ್ಲಿ ಭಾರತ 13ನೇ ಸ್ಥಾನದಲ್ಲಿದೆ. ಭಾರತವು ಪೋಲೆಂಡ್ (12), ಸ್ವೀಡನ್ (15) ಮತ್ತು ಥಾಯ್ಲೆಂಡ್ ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದೆ. ಇದೇ ವೇಳೆ ಪುರುಷರ ತಂಡದಲ್ಲಿ ಭಾರತದೊಂದಿಗೆ ಕ್ರೊವೇಷಿಯಾ (12) ಮತ್ತು ಸ್ಲೊವೇನಿಯಾ (11) ಕೂಡ ಪ್ಯಾರಿಸ್ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದಿವೆ. ಎಂದು ತಿಳಿಸಿದೆ. 

ಇದನ್ನೂ ಓದಿ- ಅನಂತ್ ಅಂಬಾನಿ-ರಾಧಿಕಾ ಪ್ರಿ-ವೆಡ್ಡಿಂಗ್’ನಲ್ಲಿ ಧೋನಿ ಡ್ಯಾನ್ಸ್; ಸಾಥ್ ಕೊಟ್ಟ ಪತ್ನಿ ಸಾಕ್ಷಿ, ಕ್ರಿಕೆಟಿಗ ಡ್ವೇನ್ ಬ್ರಾವೋ

ಇತ್ತೀಚಿನ TT ಮಾರ್ಚ್ ವಿಶ್ವ ತಂಡದ ಶ್ರೇಯಾಂಕಗಳು ಪುರುಷರ ತಂಡವು WR15 ನಲ್ಲಿ ಸ್ಥಿರವಾಗಿದೆ ಎಂದು ಬಹಿರಂಗಪಡಿಸುತ್ತದೆ. ಇದೇ ವೇಳೆ,  ಮಹಿಳಾ ತಂಡವು WR13 ಗೆ ಗಮನಾರ್ಹ ಜಿಗಿತವನ್ನು ಕಂಡಿದೆ. ಈ ಸಾಧನೆಯು ಒಲಂಪಿಕ್ಸ್‌ಗೆ ತಂಡದ ಕೋಟಾಗಳನ್ನು ಭದ್ರಪಡಿಸುವುದು ಮಾತ್ರವಲ್ಲದೆ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳಿಗೆ (ಎನ್‌ಒಸಿ) ಎರಡು ವೈಯಕ್ತಿಕ ಸಿಂಗಲ್ಸ್ ಕೋಟಾಗಳನ್ನು ಖಾತರಿಪಡಿಸುತ್ತದೆ. 

ಇದನ್ನೂ ಓದಿ- WTC Point Table: ಆಸ್ಟ್ರೇಲಿಯಾಗೆ ಗೆಲುವು, ನ್ಯೂಜಿಲೆಂಡ್’ಗೆ ಸೋಲು, ಆದ್ರೆ ಅಗ್ರಸ್ಥಾನಕ್ಕೇರಿದ್ದು ಭಾರತ: ಹೀಗಿದೆ ನೋಡಿ WTC ಅಂಕಪಟ್ಟಿ

ಭಾರತದ ಅನುಭವಿ ಆಟಗಾರ ಶರತ್ ಕಮಲ್ ಈ ಕುರಿತಂತೆ ಎಕ್ಸ್ ನಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದು, 'ಭಾರತವು ಅಂತಿಮವಾಗಿ ಒಲಿಂಪಿಕ್ಸ್‌ನ ತಂಡ ಸ್ಪರ್ಧೆಗೆ ಅರ್ಹತೆ ಗಳಿಸಿದೆ. ನಾನು ಇದನ್ನು ಬಹಳ ದಿನಗಳಿಂದ ನೋಡಬೇಕೆಂದು ಬಯಸಿದ್ದೆ. ಐದನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡಿದ್ದರೂ, ಇದು ತುಂಬಾ ವಿಶೇಷವಾಗಿದೆ. ಐತಿಹಾಸಿಕ ಕೋಟಾ ಸಾಧನೆ ಮಾಡಿದ ಮಹಿಳಾ ತಂಡಕ್ಕೂ ಅಭಿನಂದನೆಗಳು' ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News