Most Popular Chief Ministers of India: ಮಾಧ್ಯಮ ವರದಿಗಳ ಪ್ರಕಾರ, ಸಮೀಕ್ಷಾ ವರದಿಯಲ್ಲಿ ನೀಡಲಾದ ಪಟ್ಟಿಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮೊದಲ ಸ್ಥಾನದಲ್ಲಿದ್ದಾರೆ. 52.7 ರಷ್ಟು ರೇಟಿಂಗ್ ಪಡೆದಿದ್ದು ಅಗ್ರಸ್ಥಾನದಲ್ಲಿದ್ದಾರೆ, ಇನ್ನು ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದು, 51.3 ಶೇಕಡಾ ರೇಟಿಂಗ್ ಪಡೆದಿದ್ದಾರೆ.
ಒಡಿಶಾ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ, 829 ಸ್ಥಾನಗಳಲ್ಲಿ 743 ಸ್ಥಾನಗಳನ್ನು ಗೆಲ್ಲುವ ಮೂಲಕ 87.20 ರಷ್ಟು ಜಿಲ್ಲಾ ಪರಿಷತ್ ವಲಯಗಳನ್ನು ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗ (ಎಸ್ಇಸಿ) ಮಂಗಳವಾರ ತಿಳಿಸಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ (ಫೆಬ್ರವರಿ 20, 2021) ದೇಶವು ಚುನಾವಣಾ ಕ್ರಮದಿಂದ ಹೊರಬರಬೇಕಾದ ಸಮಯ ಬಂದಿದೆ ಎಂದು ಹೇಳಿದರು. ನೀತಿ ಆಯೋಗದ 6 ನೇ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ನವೀನ್ ಪಟ್ನಾಯಕ್, ಚುನಾವಣೆಗಳು ಪ್ರಜಾಪ್ರಭುತ್ವದ ಅತ್ಯಗತ್ಯ ಲಕ್ಷಣವಾಗಿದೆ ಎಂದು ಹೇಳಿದರು.
ಲಾಕ್ಡೌನ್ (Lockdown) ಮುಂದುವರೆಸಿದ ಮೊದಲ ರಾಜ್ಯ ಒರಿಸ್ಸಾ ಆಗಿದ್ದು ಸಿಎಂ ನವೀನ್ ಪಟ್ನಾಯಕ್ ಲಾಕ್ಡೌನ್ ಮುಂದುವರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ.
ಫೋನಿ ಚಂಡಮಾರುತದ ಪರಿಣಾಮವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಒಡಿಸ್ಸಾ ರಾಜ್ಯಕ್ಕೆ ಕೇಂದ್ರದ ವಿಶೇಷ ಆರ್ಥಿಕ ಸ್ಥಾನಮಾನ ನೀಡಬೇಕೆಂದು ಸಿಎಂ ನವೀನ ಪಟ್ನಾಯಕ್ ಆಗ್ರಹಿಸಿದ್ದಾರೆ.ಓಡಿಸ್ಸಾ ಪ್ರತಿವರ್ಷ ಒಂದಿಲ್ಲೊಂದು ನೈಸರ್ಗಿಕ ವಿಕೋಪವನ್ನು ಎದುರಿಸುತ್ತಲೇ ಇರುವುದರಿಂದ ಕೇಂದ್ರ ಸರ್ಕಾರವು ರಾಜ್ಯಕ್ಕೆ ಶಾಶ್ವತ ನೆರವು ನೀಡುವ ನಿಟ್ಟಿನಲ್ಲಿ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.
ಇಂದು ಬೆಳಗ್ಗೆ ಬಿಜು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ, ಚಂಡಮಾರುತಪೀಡಿತ ಪ್ರದೇಶಗಳಾದ ಪುರಿ, ಖುರ್ದಾ, ಕಟಕ್, ಜಗತ್ಸಿಂಗ್ಪುರ್, ಜಾಜ್ಪುರ್, ಕೇಂದ್ರಪಾರಾ, ಭದ್ರಾಕ್ ಹಾಗೂ ಬಾಲಾಸೋರ್ನಲ್ಲಿ ಜಿಲ್ಲೆಗಳ ಸಮೀಕ್ಷೆ ನಡೆಸಿದರು.
ಯಾವುದೇ ಕಾರಣಕ್ಕೂ ಬಿಜೆಡಿ ಮಹಾಘಟಬಂಧನ್ ಗೆ ಸೇರುವುದಿಲ್ಲ. ನಮ್ಮ ಪಕ್ಷದ ತತ್ವ ಮತ್ತು ಸಿದ್ಧಾಂತಗಳಿಗೆ ನಾವು ಬದ್ಧರಾಗಿದ್ದು, ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳಲಿದೆ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.