ಒಡಿಶಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ BJD, ಕಾಂಗ್ರೆಸ್-ಬಿಜೆಪಿಗೆ ತೀವ್ರ ಮುಖಭಂಗ

ಒಡಿಶಾ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ, 829 ಸ್ಥಾನಗಳಲ್ಲಿ 743 ಸ್ಥಾನಗಳನ್ನು ಗೆಲ್ಲುವ ಮೂಲಕ 87.20 ರಷ್ಟು ಜಿಲ್ಲಾ ಪರಿಷತ್ ವಲಯಗಳನ್ನು ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗ (ಎಸ್‌ಇಸಿ) ಮಂಗಳವಾರ ತಿಳಿಸಿದೆ.

Written by - Zee Kannada News Desk | Last Updated : Mar 1, 2022, 06:14 PM IST
  • ಒಡಿಶಾ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.
  • 829 ಸ್ಥಾನಗಳಲ್ಲಿ 743 ಸ್ಥಾನಗಳನ್ನು ಗೆಲ್ಲುವ ಮೂಲಕ 87.20 ರಷ್ಟು ಜಿಲ್ಲಾ ಪರಿಷತ್ ವಲಯಗಳನ್ನು ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗ (ಎಸ್‌ಇಸಿ) ಮಂಗಳವಾರ ತಿಳಿಸಿದೆ.
ಒಡಿಶಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ BJD, ಕಾಂಗ್ರೆಸ್-ಬಿಜೆಪಿಗೆ ತೀವ್ರ ಮುಖಭಂಗ   title=

ನವದೆಹಲಿ: ಒಡಿಶಾ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ, 829 ಸ್ಥಾನಗಳಲ್ಲಿ 743 ಸ್ಥಾನಗಳನ್ನು ಗೆಲ್ಲುವ ಮೂಲಕ 87.20 ರಷ್ಟು ಜಿಲ್ಲಾ ಪರಿಷತ್ ವಲಯಗಳನ್ನು ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗ (ಎಸ್‌ಇಸಿ) ಮಂಗಳವಾರ ತಿಳಿಸಿದೆ.

ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಅನ್ನೇ ಏಕೆ ಆಯ್ಕೆ ಮಾಡುತ್ತಾರೆ?

ರಾಜ್ಯದ ಒಟ್ಟು 852 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ 829 ಸ್ಥಾನಗಳ ಮತ ಎಣಿಕೆ ಕಾರ್ಯವನ್ನು ಆಯೋಗ ಪೂರ್ಣಗೊಳಿಸಿದ್ದು, ಉಳಿದ ಸ್ಥಾನಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಅಂತಿಮ ಫಲಿತಾಂಶ ಶೀಘ್ರದಲ್ಲೇ ಹೊರಬೀಳಲಿದೆ ಎಂದು ಎಸ್‌ಇಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಡಿ (BJD) 743 ಸ್ಥಾನಗಳನ್ನು ಗೆದ್ದಿದ್ದರೆ, ಪ್ರತಿಸ್ಪರ್ಧಿ ಬಿಜೆಪಿ ಕೇವಲ 42 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಕಾಂಗ್ರೆಸ್ 37 ಸ್ಥಾನಗಳನ್ನು ಪಡೆದುಕೊಂಡಿದೆ. ಮೂರು ಸ್ಥಾನಗಳನ್ನು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದರೆ, ಇತರರು ನಾಲ್ಕು ಸ್ಥಾನಗಳನ್ನು ಪಡೆದರು.

2017 ರ ಹಿಂದಿನ ಪಂಚಾಯತ್ ಚುನಾವಣೆಯಲ್ಲಿನ ಸಾಧನೆಗೆ ಹೋಲಿಸಿದರೆ ಇಲ್ಲಿಯವರೆಗೆ ಘೋಷಿಸಲಾದ ಫಲಿತಾಂಶಗಳಲ್ಲಿ ಬಿಜೆಡಿ 267 ಸ್ಥಾನಗಳನ್ನು ಗಳಿಸಿದೆ. 2022 ರಲ್ಲಿ ಬಿಜೆಪಿ 255 ಜಿಲ್ಲಾ ಪರಿಷತ್  ಸ್ಥಾನಗಳನ್ನು ಕಳೆದುಕೊಂಡಿತು. ಬಿಜೆಪಿಯು 2017 ರ ಚುನಾವಣೆಯಲ್ಲಿ 297 ಜಿಲ್ಲಾ ಪರಿಷತ್ ಸ್ಥಾನಗಳನ್ನು ಪಡೆದುಕೊಂಡಿತ್ತು. ಈಗ ಅದರ ಸಂಖ್ಯೆ 42ಕ್ಕೆ ಇಳಿದಿದೆ.

ಇದನ್ನೂ ಓದಿ: ರಷ್ಯಾದ ಕ್ಷಿಪಣಿ ದಾಳಿಗೆ ಹೊತ್ತಿ ಉರಿದ ಉಕ್ರೇನ್ ಸರ್ಕಾರದ ಮುಖ್ಯಕಚೇರಿ

2017 ರಲ್ಲಿ 60 ಜಿಪಂ ಸ್ಥಾನ ಪಡೆದಿದ್ದ ಕಾಂಗ್ರೆಸ್ ಈಗ ಕೇವಲ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹಿಂದಿನ ಚುನಾವಣೆಯಲ್ಲಿ 17 ಇದ್ದ ಪಕ್ಷೇತರರು ಮತ್ತು ಇತರರು ಗೆದ್ದಿದ್ದ ಸ್ಥಾನಗಳು ಈ ಚುನಾವಣೆಯಲ್ಲಿ ಏಳಕ್ಕೆ ಕುಸಿದಿವೆ.ಆಡಳಿತಾರೂಢ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಇದೀಗ ರಾಜ್ಯದ 30 ಜಿಲ್ಲೆಗಳಲ್ಲೂ ಪರಿಷತ್ ರಚನೆಗೆ ಸಜ್ಜಾಗಿದೆ. ಬಿಜೆಪಿ ಕಳೆದ ಬಾರಿ ಎಂಟು ಜಿಲ್ಲೆಗಳಲ್ಲಿ ಪರಿಷತ್ ರಚಿಸಿತ್ತು.ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ 10 ಜಿಲ್ಲೆಗಳಲ್ಲಿ ಯಾವುದೇ ಜಿಪಂ ಸ್ಥಾನವನ್ನು ಗೆಲ್ಲಲು ವಿಫಲವಾದರೆ, ಕಾಂಗ್ರೆಸ್ 18 ಜಿಲ್ಲೆಗಳಲ್ಲಿ ತನ್ನ ಖಾತೆಯನ್ನು ತೆರೆಯಲು ವಿಫಲವಾಗಿದೆ.

ಭದ್ರಕ್, ದಿಯೋಗರ್, ಜಗತ್‌ಸಿಂಗ್‌ಪುರ, ಜಾಜ್‌ಪುರ, ಜರ್ಸುಗೌಡ, ಕೊರಾಪುಟ್, ಮಲ್ಕಾನ್‌ಗಿರಿ, ಮಯೂರ್‌ಭಂಜ್, ನಬ್ಬರಂಗ್‌ಪುರ ಮತ್ತು ರಾಯಗಡ ಜಿಲ್ಲೆಗಳಲ್ಲಿ ಬಿಜೆಪಿ ಯಾವುದೇ ಜಿಲ್ಲಾ ಪರಿಷತ್ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅದೇ ರೀತಿ ಅಂಗುಲ್, ಬರ್ಗಢ್, ಭದ್ರಕ್, ಬೌಧ್, ಕಟಕ್, ದಿಯೋಗರ್, ಧೆಂಕನಲ್, ಗಂಜಾಂ, ಜಾಜ್‌ಪುರ್, ಝಾರ್ಸುಗುಡ, ಕೇಂದ್ರಪಾರ, ಕಿಯೋಂಜಾರ್, ಖುರ್ದಾ, ಮಯೂರ್‌ಭಂಜ್, ನಯಾಗಢ್, ಪುರಿ, ಸಂಬಲ್‌ಪುರ್ ಮತ್ತು ಸುಂದರ್‌ಗಢ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ - COVID-19: ಕರ್ತ್ಯವ್ಯದಲ್ಲಿದ್ದ ಮಹಿಳಾ ವೈದ್ಯರ ಮೇಲಿನ ದಾಳಿ ಶಿಕ್ಷಾರ್ಹ ಅಪರಾಧ

ಮೂರು ಹಂತದ ಪಂಚಾಯತಿ ಚುನಾವಣೆ ಫೆ.16, 18, 20, 22 ಮತ್ತು 24 ರಂದು ಐದು ಹಂತಗಳಲ್ಲಿ ನಡೆದಿದ್ದು, ಫೆ.26, 27 ಮತ್ತು 28 ರಂದು ಮತ ಎಣಿಕೆ ನಡೆದಿದ್ದು, ಕೆಲವೆಡೆ ಮರು ಎಣಿಕೆ ನಡೆಯುತ್ತಿದ್ದು, ಮತ ಎಣಿಕೆ ಇನ್ನೂ ನಡೆಯುತ್ತಿದೆ ರಾಜ್ಯ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ  ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News