ಏಟಿಗೆ ಎದಿರೇಟು ನೀಡುತ್ತಾ ಬಣ ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಬಿಜೆಪಿಯೊಳಗೆ ಬಲ ಪ್ರದರ್ಶನ ಶುರುವಾಗಿದೆ. ಅತ್ತ ಯತ್ನಾಳ್ ಟೀಂ ವಕ್ಫ್ ವಿಚಾರ ಮುಂದಿಟ್ಟು ಹೋರಾಟ ನಡೆಸುತ್ತಾ ಹೈಕಮಾಂಡ್ ಅಂಗಳಕ್ಕೆ ಹೋಗಲು ಸಜ್ಜಾಗಿದ್ದರೆ, ಇತ್ತ ವಿಜಯೇಂದ್ರ ಬೆಂಬಲಿಗರು ಸಭೆ ಸೇರಿ ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸಿದ್ದಾರೆ. ಅದೇನ್ ದಾಖಲೆ ಇದೆ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ಸಹ ಸವಾಲು ಹಾಕಿದ್ದಾರೆ.