ರಾಜಕೀಯ ಜಂಜಾಟ ಬಿಟ್ಟು ಕ್ರಿಕೆಟ್ ಆಡಿದ ಮಾಜಿ ಶಾಸಕ ರೇಣುಕಾಚಾರ್ಯ..!

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಂಕನಹಳ್ಳಿ ಹಾಗೂ ಕೊಡಚಗೊಂಡನಹಳ್ಳಿಯಲ್ಲಿ ಮಕ್ಕಳ ಅಪೇಕ್ಷೆ ಮೇರೆಗೆ ಕ್ರಿಕೆಟ್ ಆಟವಾಡಿ ಖುಷಿ ಪಟ್ಟರು. ಸದಾ ರಾಜಕೀಯ ಜಂಜಾಟದಲ್ಲಿಯೇ ಇರುವ ರೇಣುಕಾಚಾರ್ಯ ಊರುಗಳಿಗೆ ಭೇಟಿ ನೀಡುತ್ತಾರೆ.

Written by - Krishna N K | Last Updated : Jun 1, 2023, 08:59 PM IST
  • ಮಕ್ಕಳ ಅಪೇಕ್ಷೆ ಮೇರೆಗೆ ಕ್ರಿಕೆಟ್ ಆಟವಾಡಿ ಖುಷಿ ಪಟ್ಟ ಎಂಪಿ ರೇಣುಕಾಚಾರ್ಯ.
  • ಕೈಯಲ್ಲಿ ಬ್ಯಾಟ್‌ ಹಿಡಿದು ಬೌಂಡರಿ ಬಾರಿಸಿದ ಮಾಜಿ ಶಾಸಕ.
  • ರಾಜಕೀಯ ಜಂಜಾಟ ಬಿಟ್ಟು ಕ್ರಿಕೆಟ್ ಆಡಿ ರೇಣುಕಾಚಾರ್ಯ ಖುಷಿ ಪಟ್ಟರು.
ರಾಜಕೀಯ ಜಂಜಾಟ ಬಿಟ್ಟು ಕ್ರಿಕೆಟ್ ಆಡಿದ ಮಾಜಿ ಶಾಸಕ ರೇಣುಕಾಚಾರ್ಯ..! title=

ಹೊನ್ನಾಳಿ : ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮಕ್ಕಳೊಂದಿಗೆ ಕ್ರಿಕೆಟ್ ಆಟವನ್ನು ಆಡುವ ಮೂಲಕ ಮಕ್ಕಳ ಜೊತೆ ಮಕ್ಕಳಾಗಿ ಸಮಯ ಕಳೆದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಂಕನಹಳ್ಳಿ ಹಾಗೂ ಕೊಡಚಗೊಂಡನಹಳ್ಳಿಯಲ್ಲಿ ಮಕ್ಕಳ ಅಪೇಕ್ಷೆ ಮೇರೆಗೆ ಕ್ರಿಕೆಟ್ ಆಟವಾಡಿ ಖುಷಿ ಪಟ್ಟರು.

ಸದಾ ರಾಜಕೀಯ ಜಂಜಾಟದ ನಡುವೆಯೇ ಇರುವ ರೇಣುಕಾಚಾರ್ಯ ಊರುಗಳಿಗೆ ಭೇಟಿ ನೀಡುತ್ತಾರೆ. ಅದರ ಮಧ್ಯೆ ಕಂಕನಹಳ್ಳಿ ಹೊರಭಾಗದ ಮೈದಾನ ಹಾಗೂ ಕೊಡಚಗೊಂಡನಹಳ್ಳಿ ಶಾಲೆ ಆವರಣದಲ್ಲಿ ತೆರಳುತ್ತಿದ್ದಾಗ ಮೈದಾನದಲ್ಲಿ ಆಟವಾಡುತ್ತಿದ್ದ ಹುಡುಗರು ರೇಣುಕಾಚಾರ್ಯನನ್ನ ಆಟಕ್ಕೆ ಆಹ್ವಾನಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮಾಡಿದ ಎಲ್ಲಾ ಅನ್ಯಾಯ, ಅವಾಂತರ ಸರಿಪಡಿಸಲು ನಮ್ಮ ಸರ್ಕಾರ ಬದ್ಧ: ಕಾಂಗ್ರೆಸ್

ಈ ವೇಳೆ ಖುಷಿಯಿಂದಲೇ ಮೈದಾನಕ್ಕೆ ತೆರಳಿದ ರೇಣುಕಾಚಾರ್ಯ, ಮಕ್ಕಳೊಂದಿಗೆ ಮಕ್ಕಳಾದರು. ಅಲ್ಲದೇ, ಈ ವೇಳೆ ಮಕ್ಕಳು ಎಸೆದ ಬಾಲ್ ಗಳಿಗೆ ಬ್ಯಾಟ್ ಬೀಸಿದರು. ಬಾಲ್‌ನ್ನ ಬೌಂಡರಿಗೆ ಕಳಿಸುವ ಮೂಲಕ ತಾನು ಮೊದಲು ಕ್ರಿಕೆಟ್ ಆಡುತ್ತಿದ್ದೆ ಎಂದು ತೋರಿಸಿದ್ದಾರೆ. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಂ.ಪಿ. ರೇಣುಕಾಚಾರ್ಯ ಅವರು, ಕಾಂಗ್ರೆಸ್‌ನ ಡಿ.ಜಿ. ಶಾಂತನಗೌಡ ವಿರುದ್ಧ ಸೋಲು ಕಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News