ನಿವೃತ್ತಿಯ ನಂತರ ನಿಯಮಿತ ಮಾಸಿಕ ಆದಾಯವನ್ನು ಪಡೆಯುವುದು ಸುಲಭವಲ್ಲ. ಆದರೆ ನಿಮ್ಮ ಕೆಲಸದ ವರ್ಷಗಳಲ್ಲಿ ನೀವು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಇದು ಸಾಧ್ಯವಾಗಬಹುದು. ನೀವು ಸರಿಯಾದ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿವೃತ್ತಿಯ ನಂತರವೂ ನೀವು ಮಾಸಿಕ ಆದಾಯವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ಅಡಿಯಲ್ಲಿ ಹಿರಿಯ ನಾಗರಿಕ ಉಳಿತಾಯ ಯೋಜನೆ (Senior Citizen Savings Scheme) ಒಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ನಿಮ್ಮ ನಿವೃತ್ತಿಯ ನಂತರದ ಯೋಜನೆಗೆ ಇದು ಉತ್ತಮ ಆಯ್ಕೆಯಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Savings Scheme)ಯ ಪ್ರಯೋಜನಗಳು
ಈ ಸರ್ಕಾರಿ ಯೋಜನೆಯಲ್ಲಿ, ಪತಿ ಮತ್ತು ಪತ್ನಿ ಜಂಟಿ ಖಾತೆಯನ್ನು ತೆರೆಯಬಹುದು. ಒಮ್ಮೆ ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಿದರೆ, ಪ್ರತಿ ತಿಂಗಳು ನಿಮ್ಮ ಖಾತೆಗೆ ನಿಗದಿತ ಮೊತ್ತ ಬರುತ್ತದೆ.
Monthly Income Plan: ಇಂದು ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಲಿದ್ದು, ಈ ಆಯ್ಕೆಗಳಲ್ಲಿ ನೀವು ಒಮ್ಮ ಮಾತ್ರ ಹಣ ಹೂಡಿಕೆ ಮಾಡಿ ನಿಯಮಿತ ಆದಾಯವನ್ನು ಪಡೆಯಬಹುದು. ಹಣಕಾಸಿನ ತುರ್ತು ಸಂದರ್ಭದಲ್ಲಿ ಈ ಆಯ್ಕೆಗಳು ತುಂಬಾ ಉಪಯುಕ್ತವಾಗಿವೆ. ಇದೇ ವೇಳೆ, ನಿವೃತ್ತಿಯ ಸಂದರ್ಭಗಳಲ್ಲಿಯೂ ಕೂಡ , ಈ ಆಯ್ಕೆಗಳು ದೊಡ್ಡ ಸಹಾಯ ಒದಗಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.