Monthly Income Plan: ಪ್ರತಿ ತಿಂಗಳು ನಿಮ್ಮ ಖಾತೆಗೆ ಆದಾಯ ಹರಿದು ಬರಬೇಕೆ? ಇಲ್ಲಿವೆ ನಾಲ್ಕು ಉತ್ತಮ ಆಯ್ಕೆಗಳು

Monthly Income Plan:  ಇಂದು ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಲಿದ್ದು, ಈ ಆಯ್ಕೆಗಳಲ್ಲಿ ನೀವು ಒಮ್ಮ ಮಾತ್ರ ಹಣ ಹೂಡಿಕೆ ಮಾಡಿ ನಿಯಮಿತ ಆದಾಯವನ್ನು ಪಡೆಯಬಹುದು. ಹಣಕಾಸಿನ ತುರ್ತು ಸಂದರ್ಭದಲ್ಲಿ ಈ ಆಯ್ಕೆಗಳು ತುಂಬಾ ಉಪಯುಕ್ತವಾಗಿವೆ. ಇದೇ ವೇಳೆ, ನಿವೃತ್ತಿಯ ಸಂದರ್ಭಗಳಲ್ಲಿಯೂ ಕೂಡ , ಈ ಆಯ್ಕೆಗಳು ದೊಡ್ಡ ಸಹಾಯ ಒದಗಿಸುತ್ತವೆ.

Monthly Income Plan:  ಇಂದು ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಲಿದ್ದು, ಈ ಆಯ್ಕೆಗಳಲ್ಲಿ ನೀವು ಒಮ್ಮ ಮಾತ್ರ ಹಣ ಹೂಡಿಕೆ ಮಾಡಿ ನಿಯಮಿತ ಆದಾಯವನ್ನು ಪಡೆಯಬಹುದು (Earn Money). ಹಣಕಾಸಿನ ತುರ್ತು ಸಂದರ್ಭದಲ್ಲಿ ಈ ಆಯ್ಕೆಗಳು ತುಂಬಾ ಉಪಯುಕ್ತವಾಗಿವೆ. ಇದೇ ವೇಳೆ, ನಿವೃತ್ತಿಯ ಸಂದರ್ಭಗಳಲ್ಲಿಯೂ ಕೂಡ , ಈ ಆಯ್ಕೆಗಳು ದೊಡ್ಡ ಸಹಾಯ ಒದಗಿಸುತ್ತವೆ. ಸಾಮಾನ್ಯವಾಗಿ, ಅನೇಕ ಹೂಡಿಕೆದಾರರು ಇಂತಹ  ಯೋಜನೆಗಳ ಹುಡುಕಾಟದಲ್ಲಿರುತ್ತಾರೆ. ಈ ಯೋಜನೆಗಳಲ್ಲಿ ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡುವ ಮೂಲಕ ಜನರು ಆದಾಯವನ್ನು ಗಳಿಸುತ್ತಿದ್ದಾರೆ. ನಿಯಮಿತ ಆದಾಯಕ್ಕಾಗಿ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದು ಇದಕ್ಕೆ ಒಂದು ಉತ್ತಮ ಮಾರ್ಗವಾಗಿದೆ. ಮತ್ತೊಂದು ಮಾರ್ಗ ಎಂದರೆ ಬೇರೆ ಬೇರೆ ಆಯ್ಕೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಬರುವ ಯಾವುದೇ ಅಪಾಯದಿಂದ ಪಾರಾಗಿ ಆದಾಯಗಳಿಸುವುದು. ಅಂತಹ ನಾಲ್ಕು ಯೋಜನೆಗಳ ಕುರಿತು ಇಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ.

 

ಇದನ್ನೂ ಓದಿ-Huge Discount On Cheapest Car: ದೇಶದ ಅತ್ಯಂತ ಅಗ್ಗದ ಕಾರ್ ಮೇಲೆ ಸಿಗುತ್ತಿದೆ ಭಾರಿ ಡಿಸ್ಕೌಂಟ್, ಬೆಲೆ 3 ಲಕ್ಷಕ್ಕೂ ಕಮ್ಮಿ, 22 ಕಿ.ಮೀ ಮೈಲೇಜ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. Post Office MIS - ಪೋಸ್ಟ ಆಫೀಸ್ ನ ಮಂಥಲಿ ಇನ್ಕಂ ಸ್ಕೀಮ್ ಅಡಿ ಸಿಂಗಲ್ ಅಕೌಂಟ್ ಮೂಲಕ ರೂ.4.5ಲಕ್ಷ ಹಾಗೂ ಜಂಟಿ ಖಾತೆಯ ಮೂಲಕ 9 ಲಕ್ಷ ರೂ.ಗಳ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಶೇ.6.6 ರಷ್ಟು ವಾರ್ಷಿಕ ಬಡ್ಡಿ ಲಭಿಸುತ್ತದೆ. ಈ ಬಡ್ಡಿದರವನ್ನು ಒಟ್ಟು 12 ಭಾಗಗಳಾಗಿ ವಿಂಗಡಿಸಿ ಪ್ರತಿ ತಿಂಗಳು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.

2 /4

2. SBI Annuity Deposit Scheme - SBI Annuity Deposit Scheme ನಲ್ಲಿ ಪ್ರತಿ ತಿಂಗಳು ಪ್ರಿನ್ಸಿಪಲ್ ಅಮೌಂಟ್ ಜೊತೆಗೆ ಬಡ್ಡಿ ಸಿಗುತ್ತದೆ. ಈ ಯೋಜನೆಗಳಲ್ಲಿ 36, 60, 84 ಅಥವಾ 120 ತಿಂಗಳ ಅವಧಿಗಾಗಿ ಡಿಪಾಸಿಟ್ ಮಾಡಬಹುದು. ಅತ್ಯಂತ ಕನಿಷ್ಠ ಅನ್ಯೂಟಿ ಅಂದರೆ 1000 ರೂ. ಪ್ರತಿ ತಿಂಗಳು ಆಗಿದೆ. ಇದರಲ್ಲಿ ಟರ್ಮ್ ಡಿಪಾಸಿಟ್ ರೀತಿಯಲ್ಲಿಯೇ ಬಡ್ಡಿ ಸಿಗುತ್ತದೆ. 

3 /4

3. Systematic Withdrawal Plan - SWP ನಲ್ಲಿ ಹೂಡಿಕೆದಾರರು ತಾವು ಮಾಡಿರುವ ಮ್ಯೂಚವಲ್ ಫಂಡ್ ನಲ್ಲಿನ ಹೂಡಿಕೆಯ ಮೇಲೆ ತಿಂಗಳಿಗೆ ನಿಶ್ಚಿತ ಆದಾಯ ಪಡೆಯಬಹುದು. ಇದು ರೆಗ್ಯೂಲರ್ ಇನ್ಕಂಮ್ ಒಂದು ಉತ್ತಮ ಆಯ್ಕೆಯಾಗಿದೆ. ಇಲ್ಲಿ ತಿಂಗಳಿಗಷ್ಟೇ ಅಲ್ಲ, ನಿತ್ಯ, ವಾರಕ್ಕೊಮ್ಮೆ, ಮೂರು ತಿಂಗಳಿಗೊಮ್ಮೆ ಅಥವಾ ವಾರ್ಷಿಕ ಆದಾರದ ಮೇಲೆ ಹಣವನ್ನು ಹಿಂಪಡೆಯಬಹುದು.

4 /4

4. Dividend Option - ಮಂಥಲಿ ಇನ್ಕಮ್ ಅವಶ್ಯಕತೆ ಇದ್ದರೆ ಡಿವಿಡೆಂಡ್ ಆಪ್ಶನ್ ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಈ ಯೋಜನೆ FDಗಿಂತ ಉತ್ತಮ ಆದಾಯ ನೀಡಬಲ್ಲದು. ಇದರಲ್ಲಿ ಒಂದು ನಿಶ್ಚಿತ ಪ್ರಮಾಣದ ಕಾರ್ಪಸ್ ಫಂಡ್ ಸಿದ್ಧಪಡಿಸಿ ತಿಂಗಳಿಗೆ ಇನ್ಕಮ್ ಪಡೆಯಬಹುದು.