ನಾಡದ್ರೋಹಿ MES ಕರಾಳ ದಿನಾಚರಣೆಗೆ ಶಿವಸೇನೆ ಬೆಂಬಲ
ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ
ಬೆಳಗಾವಿ ಜಿಲ್ಲಾಡಳಿತ ನಿಷೇಧದ ಮಧ್ಯೆಯೂ MES ತಯಾರಿ
ಶಿವಸೇನೆ ಉದ್ಧವ್ ಠಾಕ್ರೆ ಬಣದಿಂದ ಬೆಳಗಾವಿ ಚಲೋಗೆ ಕರೆ
ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಳಗಾವಿ ಚಲೋಗೆ ಕರೆ
ಎಂಇಎಸ್ ಮಹಾಮೇಳಾವ್ಗೆ ಬಿತ್ತು ಬ್ರೇಕ್. ಮಹಾಮೇಳಾವ್ಗೆ ಅನುಮತಿ ನೀಡದ ಬೆಳಗಾವಿ ಜಿಲ್ಲಾಡಳಿತ. ನಾಡದ್ರೋಹಿ ಎಂಇಎಸ್ಗೆ ತೀವ್ರ ಮುಖಭಂಗ. ವೇದಿಕೆ ಹಾಕಲು ಬಂದವರಿಗೆ ಪೊಲೀಸರ ವಾರ್ನಿಂಗ್. ಎಂಇಎಸ್ ಪುಂಡರಿಂದಲೇ ವೇದಿಕೆ ತೆರವು.
ಎಂಇಎಸ್ ಪುಂಡಾಟಿಕೆ ಬಗ್ಗೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಎಂಇಎಸ್ ಪುಂಡಾಟಿಕೆ ಹೇಗೆ ಹದ್ದುಬಸ್ತಿನಲ್ಲಿ ಇಡಬೇಕೆಂದು ಸರ್ಕಾರಕ್ಕೆ ಗೊತ್ತಿದೆ ಎಂದಿದ್ದಾರೆ.
ನೆಲೆ, ಜಲ, ಭಾಷಾ ವಿಷಯದಲ್ಲಿ ರಾಜಕಾರಣಿಗಳೆಲ್ಲ ಒಂದೇ. ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಬಿಡಬೇಕು. ನಾವು ಯಾರು ಇಲ್ಲಿ ಬಳೆ ಹಾಕಿಲ್ಲ.. ಎಲ್ಲರೂ ಗಂಡಸರಿದ್ದೀವಿ ಎಂದು MES ಕಾರ್ಯಕರ್ತರಿಗೆ ಲಕ್ಷ್ಮಣ್ ಸವದಿ ಎಚ್ಚರಿಕೆ ನೀಡಿದ್ದಾರೆ.
ನಾಡದ್ರೋಹಿ ಎಂಇಎಸ್ ಮತ್ತೆ ಪುಂಡಾಟ ಮೆರೆದಿದೆ. ಪ್ರತಿವರ್ಷದಂತೆ ಕನ್ನಡಿಗರ ಹೆಮ್ಮೆಯ ಹಬ್ಬ ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನಾಚರಣೆ ಮಾಡಲು ಹೊರಟಿದೆ. ಅಲ್ಲದೆ, ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ನಡೆಯಲು ತಯಾರಿ ನಡೆಸಿದೆ.
ವಿಕೃತಿ ಮನಸ್ಸಿನವರು ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.. ಎಂಇಎಸ್ ಪ್ರತಿಭಟನೆ ವಿಚಾರ ಬೆಳಗಾವಿಯಲ್ಲಿ ಮಾತನಾಡಿದ ಕಾರಜೋಳ, ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಮರಾಠಿಯಲ್ಲಿ ದಾಖಲೆ ನೀಡಲು ಆಗ್ರಹಿಸಿ ಎಂಇಎಸ್ ಪ್ರತಿಭಟನೆ ನಡೆಸೋದ್ರಲ್ಲಿ ಅರ್ಥವಿಲ್ಲ. ಅವರೇನು ಪಾಕಿಸ್ತಾನದವರಲ್ಲ ಅಂತಾ ತಿರುಗೇಟು ಕೊಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿರುವುದು ಮೂರಾಬಟ್ಟೆ ಸರ್ಕಾರ ಎಂದು ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.. ಕಾಂಗ್ರೆಸ್ ಮತ್ತು ಶಿವಸೇನೆ ಎಂದೂ ಹೊಂದಾಣಿಕೆ ಆಗಲು ಸಾಧ್ಯವಿಲ್ಲ. ನೀರಿಗೆ ಎಣ್ಣೆ ಸೇರಿಸಿದ ಹಾಗೆ ಆಗಿದೆ. ನೀರು ಎಣ್ಣೆ ಪ್ರತ್ಯೇಕ ಇರುತ್ತವೆ. ಶಿವಸೇನೆ ಹುಟ್ಟಿದ್ದು ಹಿಂದುತ್ವದ ಆಧಾರದ ಮೇಲೆ. ಅಧಿಕಾರದ ಆಸೆಗಾಗಿ ಉದ್ಧವ್ ಠಾಕ್ರೆ ತತ್ವ ಸಿದ್ಧಾಂತ ಇಲ್ಲದ ಪಕ್ಷದ ಜತೆಗೆ ಕೈಜೋಡಿಸಿ ಸರ್ಕಾರ ಮಾಡಿದ್ದೇ ಮಹಾ ಅಪರಾಧ ಎಂದಿದ್ದಾರೆ..
KARNATAKA BANDH:ಡಿ.31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರ್ವಜನಿಕರು ಸಹಕಾರ ಕೊಡಬೇಕೆಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ನಾಡು ನುಡಿಯ ವಿಷಯದಲ್ಲಿ ರಾಜ್ಯ ಸರಕಾರ ಅಲಕ್ಷ್ಯ ಮಾಡಲೇಬಾರದು. ಕನ್ನಡವನ್ನು ಅಪಮಾನಿಸುವ ಈ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.