ಮೊರಾದಾಬಾದ್ನ ಮತಗಟ್ಟೆ ಸಂಖ್ಯೆ 231 ರಲ್ಲಿ ಮತದಾನಕ್ಕೆಂದು ತೆರಳಿದ್ದ ವೇಳೆ ಓರ್ವ ಮಹಿಳೆ ಮತ ಹಾಕಲು ತೆರಳಿದ್ದ ವೇಳೆ, ಚುನಾವಣಾ ಅಧಿಕಾರಿ ಸ್ವತಃ ಸೈಕಲ್ ಬಟನ್ ಒತ್ತಿ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸಿರುವ ಗಾಂಧಿನಗರ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿರುವ ಕೇರಳದ ವಯನಾಡುವಿನಲ್ಲಿ ಇಂದು ಮತದಾನ.
ಕಾರ್ಯಕರ್ತರು ಹಾಗೂ ಮುಖಂಡರಿಂದ ಪಡೆದ ಸಮೀಕ್ಷೆ ವರದಿ ಪ್ರಕಾರ ಹಾಸನದಲ್ಲಿ 2.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
#RideForVote ವಿಶೇಷ ಅಭಿಯಾನವಾಗಿದ್ದು, ದ್ವಿಚಕ್ರ ವಾಹನ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಾಹನದ ಹಿಂದಿನ ಸೀಟನ್ನು ಮತದಾರರಿಗಾಗಿ ಮೀಸಲಿಟ್ಟು, ಮತದಾನದ ದಿನ ಮತಗಟ್ಟೆಗೆ ಅವರನ್ನು ಕರೆದೊಯ್ಯುವುದಾಗಿ ಪ್ರತಿಜ್ಞೆ ಮಾಡುವಂತೆ ಪ್ರೋತ್ಸಾಹಿಸುತ್ತದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡ್ ನಿಂದ ಸ್ಪರ್ಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಅಮೇಥಿಯಲ್ಲಿ ಸಲ್ಲಿಸಿದ್ದ ನಾಮಪತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಧ್ರುವಪಾಲ್ ಕೌಶಲ್ ಆಕ್ಷೇಪ ವ್ಯಕ್ತಪಡಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.