ಝೀ ನೆಟ್‌ವರ್ಕ್‌ನ ಮಹತ್ವದ ಹೆಜ್ಜೆ; #RideForVote ಅಭಿಯಾನಕ್ಕೆ ಕ್ಯಾಸ್ಟ್ರೋಲ್, ಮೈಂಡ್ ಶೇರ್ ಜೊತೆ ಸಹಭಾಗಿತ್ವ!

#RideForVote ವಿಶೇಷ ಅಭಿಯಾನವಾಗಿದ್ದು, ದ್ವಿಚಕ್ರ ವಾಹನ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಾಹನದ ಹಿಂದಿನ ಸೀಟನ್ನು ಮತದಾರರಿಗಾಗಿ ಮೀಸಲಿಟ್ಟು, ಮತದಾನದ ದಿನ ಮತಗಟ್ಟೆಗೆ ಅವರನ್ನು ಕರೆದೊಯ್ಯುವುದಾಗಿ ಪ್ರತಿಜ್ಞೆ ಮಾಡುವಂತೆ ಪ್ರೋತ್ಸಾಹಿಸುತ್ತದೆ.   

Last Updated : Apr 22, 2019, 05:53 PM IST
ಝೀ ನೆಟ್‌ವರ್ಕ್‌ನ ಮಹತ್ವದ ಹೆಜ್ಜೆ; #RideForVote ಅಭಿಯಾನಕ್ಕೆ ಕ್ಯಾಸ್ಟ್ರೋಲ್, ಮೈಂಡ್ ಶೇರ್ ಜೊತೆ ಸಹಭಾಗಿತ್ವ! title=

ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನದಲ್ಲಿ ಕ್ಯಾಸ್ಟ್ರೋಲ್ ಮತ್ತು ಮೈಂಡ್ ಶೇರ್ ಜೊತೆಗೂಡಿ ಝೀ ನೆಟ್ವರ್ಕ್ #RideForVote ಅಭಿಯಾನ ಆರಂಭಿಸಿದೆ. 

#RideForVote ವಿಶೇಷ ಅಭಿಯಾನವಾಗಿದ್ದು, ದ್ವಿಚಕ್ರ ವಾಹನ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಾಹನದ ಹಿಂದಿನ ಸೀಟನ್ನು ಮತದಾರರಿಗಾಗಿ ಮೀಸಲಿಟ್ಟು, ಮತದಾನದ ದಿನ ಮತಗಟ್ಟೆಗೆ ಅವರನ್ನು ಕರೆದೊಯ್ಯುವುದಾಗಿ ಪ್ರತಿಜ್ಞೆ ಮಾಡುವಂತೆ ಪ್ರೋತ್ಸಾಹಿಸುತ್ತದೆ. 

"ಕ್ಯಾಸ್ಟ್ರೋಲ್ ಕಂಪನಿ ಈ ಅಭಿಯಾನ ಆರಂಭಿಸುವ ಬಗ್ಗೆ ನಮಗೆ ತಿಳಿದ ಕೂಡಲೇ, ಈ ಅಭಿಯಾನಕ್ಕೆ ಬ್ರ್ಯಾಂಡ್ ಝೀ ಮಾಧ್ಯಮ ಸಾಥ್ ನೀಡಿದರೆ ಮತ್ತಷ್ಟು ಪರಿಣಾಮಕಾರಿ ಆಗಬಲ್ಲದು ಎನಿಸಿತು. ಹಾಗಾಗಿ ಒಂದು ಮಾಧ್ಯಮ ಸಂಸ್ಥೆಯಾಗಿ ಇಡೀ ದೇಶದ ಅಭಿವೃದ್ಧಿಗೆ ನಮ್ಮಿಂದಾಗುವ ಅಲ್ಪಮಟ್ಟದ ಕಾರ್ಯವನ್ನು ಮಾಡುವ ಉದ್ದೇಶದಿಂದ ಈ ಅಭಿಯಾನದಲ್ಲಿ ನಾವೂ ಒಂದಾಗಿದ್ದೇವೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ #NonStopDemocracyಯನ್ನು ಈ ಅಭಿಯಾನದ ಮೂಲಕ ಸಾಧ್ಯವಾಗಿಸಲು ಝೀ, ಕ್ಯಾಸ್ಟ್ರೋಲ್ ಮತ್ತು ಮೈಂಡ್ ಶೇರ್ ಸಂತೋಷ ವ್ಯಕ್ತಪಡಿಸಿವೆ" ಎಂದು ZEEL ಸಿಜಿಒ ಆಶಿಶ್ ಸೆಹಗಲ್ ಹೇಳಿದ್ದಾರೆ. 

ಗ್ರಾಹಕರಿಗೆ ಮೊದಲ ಆದ್ಯತೆ ಎಂಬ ಮೌಲ್ಯದೊಂದಿಗೆ ಕಾರ್ಯ ನಿರ್ವಹಿಸುವ ಝೀ "Extraordinary Together" ಎಂಬ ತತ್ವದಲ್ಲಿ ಬಹಳ ನಂಬಿಕೆಯಿಟ್ಟಿದೆ. ಅದರ ವಿಷಯಾಧಾರಿತ ಮುನ್ನಡೆಗಳು ವೀಕ್ಷಕರನ್ನು ತೊಡಗಿಸಿಕೊಳ್ಳುವಂತೆ ಮಾಡಿ ಅದರ ಪಾಲುದಾರ ಬ್ರ್ಯಾಂಡ್ಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುವ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಸಾಧಿಸಲು ಕ್ಯಾಸ್ಟ್ರೋಲ್ ಸಹಭಾಗಿತ್ವದ #RideForVote ಅಭಿಯಾನ ಮತ್ತೊಂದು ಹೆಜ್ಜೆಯಾಗಿದೆ ಎಂದು ಸೆಹಗಲ್ ಹೇಳಿದ್ದಾರೆ.

ಕ್ಯಾಸ್ಟ್ರೋಲ್ ಇಂಡಿಯಾದ ಮಾರ್ಕೆಟಿಂಗ್ ಉಪಾಧ್ಯಕ್ಷರಾದ ಕೇದಾರ್ ಆಪ್ಟೆ ಮಾತನಾಡಿ, "ಇಂದಿನ ಯುವಜನತೆ ಸ್ವಯಂ ಅರಿವು ಮತ್ತು ಜವಾಬ್ದಾರಿ ಹೊಂದಿದ್ದಾರೆ. ಈ ಅಭಿಯಾನವು ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಬಯಸುವ ಯುವಜನರನ್ನು ಸ್ವಾಗತಿಸುತ್ತದೆ. ಈ ಪ್ರಯಾಣದಲ್ಲಿ, ಕ್ಯಾಸ್ಟ್ರೋಲ್ ಆಕ್ಟಿವ್ ವಿಶ್ವಾಸಾರ್ಹ ಪಾಲುದಾರ ಎಂದು ನಾವು ಭಾವಿಸುತ್ತೇವೆ. ಯುವ ಪೀಳಿಗೆಯ ಆಲೋಚನೆಗಳನ್ನು ರೂಪಿಸಿ, ಅವರು ಇಷ್ಟಪಡುವುದನ್ನು ರಕ್ಷಿಸಿಕೊಳ್ಳಲು ನಾವು ಪ್ರೋತ್ಸಾಹಿಸುತ್ತೇವೆ.  ಈ ನಿಟ್ಟಿನಲ್ಲಿ ಈ ಅಭಿಯಾನವನ್ನು ಬೃಹತ್ ವೀಕ್ಷಕ ವರ್ಗಕ್ಕೆ ತಲುಪಿಸಲು ಝೀ ನಮಗೆ ಸಹಾಯ ಮಾಡಲು ಮುಂದಾಗಿರುವುದು ನಿಜಕ್ಕೂ ಸಂತೋಷವಾಗಿದೆ" ಎಂದಿದ್ದಾರೆ.

ಅಭಿಯಾನದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಮೈಂಡ್ ಶೇರ್ ದಕ್ಷಿಣ ಏಷ್ಯಾ ಸಿಇಒ ಅಮಿನ್, "ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ತಡೆರಹಿತ ಪ್ರಜಾಪ್ರಭುತ್ವಕ್ಕೆ ಬಲವಾದ ಯುವಶಕ್ತಿಯ ಅಗತ್ಯವಿದೆ. ಅದನ್ನು ಮುನ್ನಡೆಸಲು ಮೈಂಡ್ ಶೇರ್ ಹೆಮ್ಮೆ ಪಡುತ್ತದೆ ಎಂದಿದ್ದಾರೆ. 

ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಹೊಂದಿರುವ ಎಲ್ಲರೂ https://www.nonstopdemocracy.com/ನಲ್ಲಿ #VoteForRide ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ಈ ಅಭಿಯಾನವನ್ನು ಬೆಂಬಲಿಸಿ, ಅವರ ಪ್ರದೇಶಗಳಲ್ಲಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಝೀ, ಕ್ಯಾಸ್ಟ್ರೋಲ್ ಮತ್ತು ಮೈಂಡ್ ಶೇರ್  ಕರೆ ನೀಡಿವೆ.

Trending News