ಆರ್ಡರ್ ಮಾಡಿ ಫುಡ್ ತಿನ್ನೋವಾಗ ಹುಷಾರ್..!! ನಿನ್ನೆ ಐಸ್ ಕ್ರೀಮ್ ನಲ್ಲಿ ಬೆರಳು, ಇಂದು ಬಿರಿಯಾನಿಯಲ್ಲಿ ಹಲ್ಲಿ..! 

Lizard found in Biriyani : ಕಳೆದ ಕೆಲವು ದಿನಗಳ ಹಿಂದೆ ಐಸ್ ಕ್ರೀಂನಲ್ಲಿ ಬೆರಳು ಕಂಡು ಬಂದರೆ ಇಂದು ಬಿರಿಯಾನಿಯಲ್ಲಿ ಹಲ್ಲಿ ಕಾಣಿಸಿಕೊಂಡಿದೆ.. ಘಟನೆ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jun 14, 2024, 10:28 PM IST
    • ಇತ್ತೀಚಿಗೆ ಐಸ್ ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು.
    • ಇದೀಗ ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾದ ಘಟನೆ ನಡೆದಿದೆ.
    • ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌.
ಆರ್ಡರ್ ಮಾಡಿ ಫುಡ್ ತಿನ್ನೋವಾಗ ಹುಷಾರ್..!! ನಿನ್ನೆ ಐಸ್ ಕ್ರೀಮ್ ನಲ್ಲಿ ಬೆರಳು, ಇಂದು ಬಿರಿಯಾನಿಯಲ್ಲಿ ಹಲ್ಲಿ..!  title=

Lizard in Biriyani : ಆಹಾರ ಪದಾರ್ಥಗಳಲ್ಲಿ ಮಾನವರು, ಪ್ರಾಣಿಗಳು ಅವಶೇಷಗಳು ಪತ್ತೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.. ಕಳೆದ ಕೆಲವು ದಿನಗಳ ಹಿಂದೆ ಐಸ್ ಕ್ರೀಂನಲ್ಲಿ ಬೆರಳು ಕಂಡು ಬಂದರೆ ಇಂದು ಬಿರಿಯಾನಿಯಲ್ಲಿ ಹಲ್ಲಿ ಕಾಣಿಸಿಕೊಂಡಿದೆ.. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ಹೋಟೆಲ್‌ನವರು ಬದಲಾಗುತ್ತಿಲ್ಲ. ಅನೈರ್ಮಲ್ಯದಿಂದ ಅಡುಗೆ ಮಾಡಿ ಬಡಿಸುವುದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಆಹಾರ ಸೇವಿಸಿ ಜನ ಅಸ್ವಸ್ಥರಾಗುತ್ತಿರುವ ಘಟನೆಗಳು ದೇಶದಲ್ಲಿ ನಿತ್ಯ ನಡೆಯುತ್ತಿವೆ. ಕೆಲವೆಡೆ ಜೀವಹಾನಿಯಾಗುತ್ತಿದೆ. ಆದರೆ, ಹೋಟೆಲ್ ನಿರ್ವಾಹಕರು ತಮಗೇನೂ ನಷ್ಟವಿಲ್ಲ ಎಂಬಂತೆ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಸಧ್ಯ ಬಿರಿಯಾನಿಯಲ್ಲಿ ಹಲ್ಲಿ ಕಾಣಿಸಿಕೊಂಡಿದ್ದು, ಆರ್ಡರ್‌ ಮಾಡಿ ಫುಡ್‌ ತಿನ್ನುವವರನ್ನು ಚಿಂತಿಸುವಂತೆ ಮಾಡಿದೆ..

ಇದನ್ನೂ ಓದಿ:Daily GK Quiz: ಗಾಯವನ್ನು ಗುಣಪಡಿಸಲು ಯಾವ ವಿಟಮಿನ್ ಸಹಾಯ ಮಾಡುತ್ತದೆ?

ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುಂಟೂರು ಪಟ್ಟಣದ ಅರುಂಡಲಪೇಟೆಯಲ್ಲಿ ಬಿರಿಯಾನಿ ಪಾಯಿಂಟ್ ಇದೆ. ಅಲ್ಲಿಗೆ ಒಬ್ಬ ವ್ಯಕ್ತಿ ಬಂದು ಬಿರಿಯಾನಿ ಪಾರ್ಸೆಲ್ ತೆಗೆದುಕೊಂಡು ಮನೆಗೆ ಹೋಗಿದ್ದಾನೆ. ಬಿರಿಯಾನಿ ತಿನ್ನಲು ಪ್ರಾರಂಭಿಸಿದಾಗ ಅಲ್ಲಿ ಕಂಡು ಆಘಾತಕ್ಕೊಳಗಾಗಿದ್ದಾನೆ.  

ತಕ್ಷಣ ಸಿಟ್ಟಿನಿಂದ ಬಿರಿಯಾನಿ ಪಾಯಿಂಟ್‌ಗೆ ಹೋದ ವ್ಯಕ್ತಿ ದೂರಿದ್ದಾನೆ, ಆದರೆ, ಹೊಟೇಲ್‌ನವರು ವ್ಯಕ್ತಿಯ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ವಿಷಯ ಸುತ್ತಮುತ್ತಲಿನವರಿಗೆ ಗೊತ್ತಾಗುತ್ತದೆ ಎಂಬ ಭಯದಿಂದ ವ್ಯವಸ್ಥಾಪಕರು ಅಂಗಡಿ ಮುಚ್ಚಿಸಿದ್ದಾರೆ. ಸಧ್ಯ ಘಟನೆ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ..

ಇದನ್ನೂ ಓದಿ:Viral video : ಐಸ್ ಕ್ರೀಮ್‌ನಲ್ಲಿ ಮಾನವನ ಬೆರಳು ಪತ್ತೆ..! ವಿಡಿಯೋ ವೈರಲ್‌

ಸಧ್ಯ ಘಟನೆ ಬೆಳಕಿಗೆ ಬರುತ್ತಿದ್ದಂತೆ, ತೆಲಂಗಾಣದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಚಾಟ್ ಭಂಡಾರ್, ಫಾಸ್ಟ್ ಫುಡ್ ಕೇಂದ್ರಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ಘಟನೆಯ ಬಿಸಿ ಪಕ್ಕದ ರಾಷ್ಟ್ರ ಆಂಧ್ರಪ್ರದೇಶಕ್ಕೂ ತಟ್ಟಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಆರಂಭಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News