ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಾವರ ಗ್ರಾಮದಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ನಾವರ ಗ್ರಾಮದ ಜಾಲ ಎಂಬಲ್ಲಿನ ವಸಂತ ಕೋಟ್ಯಾನ್ ಅವರ ಮನೆಯ ಬಾವಿಗೆ ಚಿರತೆಯೊಂದು ಬಿದ್ದಿತ್ತು. ಮೇಲೆ ಬರಲು ಚಿರತೆ ಒದ್ದಾಡುತ್ತಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ತಂಡ ಚಿರತೆಯನ್ನು ರಕ್ಷಿಸಿದೆ.
ಶ್ರವಣಬೆಳಗೊಳದ ವಿಂದ್ಯಗಿರಿ ತಪ್ಪಲಿನ ಹಿಂಭಾಗದಲ್ಲಿರುವ ನಾಗಯ್ಯನಕೊಪ್ಪಲು ಗ್ರಾಮದ, ಮಂಜೇಗೌಡ ಎಂಬುವವರ ಮನೆಯ ಬಳಿ ಮಧ್ಯರಾತ್ರಿ ಚಿರತೆ (Leopard) ಯೊಂದು ಆಹಾರಕ್ಕಾಗಿ ಹುಡುಕಿಕೊಂಡು ಬಂದಿದೆ. ಮನೆಯ ಮುಂದೆ ಚಿರತೆ ಬಂದ ಕೂಡಲೇ ಅದರೊಂದಿಗೆ ಸಾಕುನಾಯಿ ಕಾದಾಟಕ್ಕಿಳಿದಿದೆ.
ಸಾಕು ನಾಯಿಯೊಂದು ಚಿರತೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
Black Panther And Leopard Video: ಕಾಡು ಪ್ರಾಣಿಗಳ ಕಾದಾಟದ ಕೆಲವು ವೀಡಿಯೊಗಳನ್ನು ನಂಬಲು ಕಷ್ಟ. ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಪ್ಪು ಪ್ಯಾಂಥರ್ ಚಿರತೆಯನ್ನು ಬೇಟೆಯಾಡಲು ಮರವನ್ನು ಏರಿದೆ.
ಚಿರತೆಯು ತಮ್ಮ ಸಾಕು ಪ್ರಾಣಿಗಳನ್ನು ತಿಂದು ತೊಂದರೆ ಕೊಡುತ್ತಿರುವ ಬಗ್ಗೆ ಗುಬ್ಬಹಳ್ಳಿ ಗ್ರಾಮಸ್ಥರು ಕೆ.ಆರ್.ಪೇಟೆ ತಾಲೂಕು ವಲಯ ಅರಣ್ಯಾಧಿಕಾರಿ ಹೆಚ್.ಎಸ್.ಗಂಗಾಧರ ಅವರಿಗೆ ಮನವಿ ನೀಡಿ ಗ್ರಾಮದ ಹೊರ ವಲಯದಲ್ಲಿ ಬೋನನ್ನು ಇರಿಸಿ ಚಿರತೆಯನ್ನು ಬಂಧಿಸುವಂತೆ ಮನವಿ ಸಲ್ಲಿಸಿದ್ದರು.
ನಾಯಿ ಬೇಟೆಗೆ ಬಂದ ಹಸಿದ ಚಿರತೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಚಿರತೆಯ ಜೊತೆ ಕಾದಾಟ ನಡೆಸಿದ್ದು, ನಾಯಿ ಚಿರತೆಯ ಬೆವರಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.