ನಂಜನಗೂಡು: ಮನೆಯೊಳಗೆ ನುಗ್ಗಿದ ಚಿರತೆ.! ಮುಂದೇನಾಯ್ತು?

ಮನೆಯೊಳಗೆ ಚಿರತೆ (Leopard) ನುಗ್ಗಿದ ಘಟನೆ ನಂಜನಗೂಡು ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಜರುಗಿದೆ. 

Written by - Zee Kannada News Desk | Last Updated : Feb 27, 2022, 06:54 PM IST
  • ಮನೆಯೊಳಗೆ ನುಗ್ಗಿದ ಚಿರತೆ
  • ನಂಜನಗೂಡು ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಘಟನೆ
ನಂಜನಗೂಡು: ಮನೆಯೊಳಗೆ ನುಗ್ಗಿದ ಚಿರತೆ.! ಮುಂದೇನಾಯ್ತು? title=
ಚಿರತೆ

ನಂಜನಗೂಡು: ಮನೆಯೊಳಗೆ ಚಿರತೆ (Leopard) ನುಗ್ಗಿದ ಘಟನೆ ನಂಜನಗೂಡು ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಜರುಗಿದೆ.

ಎರಡು ವರ್ಷದ ಹೆಣ್ಣು ಚಿರತೆಯನ್ನು ಕಂಡು ಗ್ರಾಮಸ್ಥರು  ಬೆಚ್ಚಿ ಬಿದ್ದಿದ್ದಾರೆ. ಚನ್ನಪ್ಪ ಎಂಬುವವರ ಮನೆಗೆ 7 ಗಂಟೆಯ ಸಮಯದಲ್ಲಿ ಚಿರತೆ ನುಗ್ಗಿದೆ.  

ಇದನ್ನೂ ಓದಿ: BS Yediyurappa : 'ವಿಧಾನಸಭೆ ಅಧಿವೇಶನ ಬಳಿಕ ರಾಜ್ಯ ಪ್ರವಾಸ ಆರಂಭ ಮಾಡ್ತೇನೆ'

ಮನೆಯೊಳಗೆ ರಾಜಾರೋಷವಾಗಿ ತಿರುಗಾಡಿಕೊಂಡಿದ್ದ ಚಿರತೆಯನ್ನು ಕಂಡ ಚೆನ್ನಪ್ಪ ಮನೆಯ ಬಾಗಿಲನ್ನು ಹಾಕಿ ಮನೆಯೊಳಗೆ ಲಾಕ್ ಮಾಡಿದ್ದಾರೆ. ಮನೆಯೊಳಗಿದ್ದ ತನ್ನ ತಾಯಿಯನ್ನು ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. 

Leopard

ಬಳಿಕ ಅರಣ್ಯ ಇಲಾಖೆಯ (Forest) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು, ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಮತ್ತು ಬರುವ ಔಷಧಿ ನೀಡಿ ಚಿರತೆ ಸೆರೆಹಿಡಿಡಿದ್ದಾರೆ.

ಇದನ್ನೂ ಓದಿ: Operation Ganga: ಯುದ್ಧಪೀಡಿತ ಉಕ್ರೇನ್‌ನಿಂದ ಬೆಂಗಳೂರಿಗೆ ಆಗಮಿಸಿದ 12 ಜನ ವಿದ್ಯಾರ್ಥಿಗಳು

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ (Forest Officer) ರಕ್ಷಿತ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ಉಪ ವಲಯ ಅರಣ್ಯಾಧಿಕಾರಿ ಜನಾರ್ದನ್, ಅರಣ್ಯ ರಕ್ಷಕ ಮಂಜುನಾಥ್ ಸಿಬ್ಬಂದಿಗಳು ಹಾಜರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News