ಬೆಂಗಳೂರು :ಬೆಳ್ಳಿ ಶಿವನ ಕಣ್ಣುಗಳಿಂದ ಹುಟ್ಟಿಕೊಂಡ ಲೋಹ ಎಂದು ಹೇಳಲಾಗುತ್ತದೆ. ಹಾಗಾಗಿ ಧಾರ್ಮಿಕ ದೃಷ್ಟಿಯಿಂದ ಬೆಳ್ಳಿಯು ಅತ್ಯಂತ ಪವಿತ್ರ ಮತ್ತು ಸಾತ್ವಿಕ ಲೋಹ. ಜ್ಯೋತಿಷ್ಯದಲ್ಲಿಯೂ ಬೆಳ್ಳಿಗೆ ವಿಶೇಷ ಮಹತ್ವವಿದೆ. ಇದು ಸಂಪತ್ತಿನ ಅಂಶವಾದ ಶುಕ್ರ ಮತ್ತು ಮನಸ್ಸಿನ ಅಂಶವಾದ ಚಂದ್ರನಿಗೆ ಸಂಬಂಧಿಸಿದ ಲೋಹ.
ಧನ ಲಾಭಕ್ಕಾಗಿ ಬೆಳ್ಳಿ ಬಳಕೆ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಮನಸ್ಸನ್ನು ಸದೃಢಗೊಳಿಸುವುದರ ಜೊತೆಗೆ, ಮನಸ್ಸನ್ನು ಚುರುಕುಗೊಳಿಸುತ್ತದೆ. ಚಂದ್ರನ ಅಶುಭ ಪರಿಣಾಮಗಳನ್ನು ತೊಡೆದುಹಾಕಲು ಬೆಳ್ಳಿ ಪ್ರಯೋಜನಕಾರಿಯಾಗಿದೆ. ಇದಲ್ಲದೆ ಬೆಳ್ಳಿಯು ಶುಕ್ರನ ಸ್ಥಾನವನ್ನು ಬಲಪಡಿಸುತ್ತದೆ.
ಇದನ್ನೂ ಓದಿ : ಎಲ್ಲಾದರೂ ಶುಭ ಕಾರ್ಯಕ್ಕೆ ಹೊರಡುವಾಗ ಬೆಕ್ಕು ಅಡ್ಡ ಬಂದ್ರೆ ಕೆಟ್ಟದ್ದಾ? ಇದರ ಹಿಂದಿರುವ ನಿಜವಾದ ಅರ್ಥ ಏನು ಗೊತ್ತಾ?
ಧನ ಪ್ರಾಪ್ತಿಗಾಗಿ ಬೆಳ್ಳಿಯ ಬಳಕೆ :
ಕಿರು ಬೆರಳಿಗೆ ಶುದ್ಧ ಬೆಳ್ಳಿಯ ಉಂಗುರವನ್ನು ಧರಿಸುವುದು ಉತ್ತಮ. ಅದರ ಪ್ರಭಾವದಿಂದ, ಅಶುಭ ಚಂದ್ರನು ಶುಭ ಪರಿಣಾಮಗಳನ್ನು ನೀಡಲು ಪ್ರಾರಂಭಿಸುತ್ತಾನೆ. ಇದರೊಂದಿಗೆ, ಮನಸ್ಸಿನ ಸಮತೋಲನವು ಉತ್ತಮವಾಗಲು ಪ್ರಾರಂಭಿಸುತ್ತದೆ ಮತ್ತು ಧನಲಾಭಾವೂ ಆಗುತ್ತದೆ.
ದೈಹಿಕ ಆರೋಗ್ಯಕ್ಕಾಗಿ ಬೆಳ್ಳಿ :
ಶುದ್ಧ ಬೆಳ್ಳಿಯಿಂದ ಮಾಡಿದ ಖಡವನ್ನು ಕೈಗೆ ಧರಿಸುವುದರಿಂದ ಕಫ, ಪಿತ್ತ ಮತ್ತು ವಾತದ ಸಮಸ್ಯೆಯನ್ನು ನಿಯಂತ್ರಿಸಬಹುದು. ಇದರಿಂದಾಗಿ ದೇಹವು ಆರೋಗ್ಯಕರವಾಗಿರುತ್ತದೆ. ಆರೋಗ್ಯ ಸಮಸ್ಯೆ ಅಷ್ಟಾಗಿ ನಿಮ್ಮನ್ನು ಬಾಧಿಸುವುದಿಲ್ಲ.
ದುಷ್ಟ ಗ್ರಹಗಳ ಪ್ರಭಾವ ಕಡಿಮೆಯಾಗುತ್ತದೆ :
ಶುದ್ಧ ಬೆಳ್ಳಿಯ ಸರವನ್ನು ಗಂಗಾಜಲದಿಂದ ಶುದ್ಧೀಕರಿಸಿ ಕೊರಳಲ್ಲಿ ಧರಿಸಿದರೆ ಮಾತಿನಲ್ಲಿ ಪ್ರಖರತೆ ಇರುತ್ತದೆ. ಜೊತೆಗೆ, ಹಾರ್ಮೋನುಗಳು ಸಹ ಸಮತೋಲನದಲ್ಲಿರುತ್ತವೆ. ಇದಲ್ಲದೇ ಮನಸ್ಸು ಏಕಾಗ್ರತೆಯಿಂದ ಕೂಡಿರುತ್ತದೆ.
ಇದನ್ನೂ ಓದಿ : ಮೈ ಕೊರೆಯುವ ಚಳಿ, ಬೆತ್ತಲೆಯಾಗಿಯೇ ಸಂಚಾರ..! "ನಾಗ ಸಾಧು"ಗಳ ದೇಹ ಕಬ್ಬಿಣದಂತಿರಲು "ಶಿವ"ನ ಆ ವಸ್ತುವೇ ಕಾರಣ...
ಬೆಳ್ಳಿಯ ಬಳಕೆ ವೇಳೆ ಎಚ್ಚರವಿರಲಿ :
ಬೆಳ್ಳಿ ಶುದ್ಧವಾದಷ್ಟೂ ಅದರ ಪರಿಣಾಮ ಉತ್ತಮವಾಗಿರುತ್ತದೆ. ಭಾವನಾತ್ಮಕ ಸಮಸ್ಯೆ ಇರುವವರು ಬೆಳ್ಳಿ ಧರಿಸುಬಾರದು. ವೃಶ್ಚಿಕ, ಮೀನ ಮತ್ತು ಕರ್ಕಾಟಕ ರಾಶಿಯವರು ಬೆಳ್ಳಿ ಧರಿಸಿದರೆ ಅವರಿಗೆ ಶುಭ ಫಲ ಸಿಗಲಿದೆ. ಆದರೆ ಸಿಂಹ, ಧನು ರಾಶಿ ಮತ್ತು ಮೇಷ ರಾಶಿಯವರಿಗೆ ಬೆಳ್ಳಿ ಅಶುಭ. ಅಂದರೆ ಬೆಳ್ಳಿಯಿಂದ ಈ ರಾಶಿಯವರು ದೂರವೇ ಇದ್ದರೆ ಒಳ್ಳೆಯದು.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.