Karnataka Assembly Election 2023: ದುರಾಡಳಿತ, ಭ್ರಷ್ಟಾಚಾರದಿಂದ ಮಡುಗಟ್ಟಿದ್ದ ಜನಾಕ್ರೋಶ ಈಗ ಹೊರಬರುತ್ತಿದೆ. ಬಿಜೆಪಿ ಮುಕ್ತ ಮಾಡಲು ಕನ್ನಡಿಗರೇ ಶಪಥ ಮಾಡಿಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
Karnataka Assembly Election 2023: ಸಿಂಧನೂರು ತಹಶೀಲ್ದಾರರ ಕಚೇರಿಯಲ್ಲಿ ಇಬ್ಬರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಬಂದ ಜೋಡಿಗೆ ಅದ್ದೂರಿ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಜೋಡಿ ಅಭ್ಯರ್ಥಿಗಳಿಗೆ ಹೂಮಳೆ ಸಹ ಸುರಿಸಲಾಗಿದೆ.
Karnataka Assembly Election 2023: ಬಿಜೆಪಿಯ ಈ ಎಲ್ಲಾ ಬೆಳವಣಿಗೆಗೆ ಬಿ.ಎಲ್.ಸಂತೋಷ್ ನೇರ ಕಾರಣ. ಜಗದೀಶ್ ಶೆಟ್ಟರ್ ಅವರು ಬಿ.ಎಲ್.ಸಂತೋಷ ಮೇಲೆ ಮಾಡಿರುವ ಆರೋಪಗಳು ಸರಿ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Karnataka Assembly Election 2023: ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ವರುಣಗೆ ಒಂದೇ ಒಂದು ಮನೆ ಕೊಟ್ಟಿದ್ದನಾ? ಈಗ ಬಂದು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
Karnataka Assembly Election 2023: ಹಾಬಲಕಟ್ಟಿ ಗ್ರಾಮದ ಭೋವಿ ಸಮುದಾಯದವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಈ ಹಿಂದೆ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಧರಣಿ ನಡೆಸಿದ್ದರು. ಇದಲ್ಲದೇ ಕುಷ್ಟಗಿ ತಹಶೀಲ್ದಾರ್ ಕಚೇರಿ ಮುಂಭಾಗ ಬರೋಬ್ಬರಿ 101 ದಿನಗಳ ಕಾಲ ಹೋರಾಟವನ್ನೂ ಕೈಗೊಳ್ಳಲಾಗಿತ್ತು.
ಚುನಾವಣೆಯ ವೇಳೆ ರಾಜೀನಾಮೆ ಪರ್ವ ಮುಂದುವರೆದಿದ್ದು,ಈಗ ಇದಕ್ಕೆ ಪೂರಕ ಎನ್ನುವಂತೆ ಕೂಡ್ಲಿಗಿಯ ಕೋಡಿಹಳ್ಳಿ ಭೀಮಣ್ಣ,ಹಗರಿಬೊಮ್ಮನ ಹಳ್ಳಿಯ ನೇಮಿರಾಜ್ ನಾಯ್ಕ್ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮಾಡಿರುವ ಎರಡು ಪೋಸ್ಟ್ ಗಳು ಒಗಟಿನಿಂದ ಕೂಡಿದ್ದರು ಸಹ ಅವು ಪರೋಕ್ಷವಾಗಿ ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಕನ್ನಡಿ ಹಿಡಿಯುತ್ತವೆ.
ಬಿಜೆಪಿ ಬೇಕಾದರೆ ಹಾಲಿವುಡ್,ಬಾಲಿವುಡ್ ತಾರೆಯರನ್ನೇ ಕರೆಸಿ ಪ್ರಚಾರ ಮಾಡಲಿ ಅದಕ್ಕೆ ನಮ್ಮ ತಕರಾರಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ವ್ಯಂಗ್ಯವಾಡಿದ್ದಾರೆ.
Karnataka Assembly Election 2023: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ 76.89 ಕೋಟಿ ರೂ. ಆಸ್ತಿ ಒಡೆಯರಾಗಿದ್ದಾರೆ. ನಿಖಿಲ್ 65.45 ಲಕ್ಷ ರೂ. ಮೌಲ್ಯದ ಚಿನ್ನ, 11.08 ಲಕ್ಷ ರೂ. ಮೌಲ್ಯದ 16 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ.
Karnataka Assembly Election 2023: ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷ. ಶೆಟ್ಟರ್ ಇಷ್ಟು ದಿನ ಸಜ್ಜನರ ಸಂಘದಲ್ಲಿದ್ದರು, ಈಗ ದುರ್ಜನರ ಸಂಘ ಮಾಡಿದ್ದಾರೆ. ಬಸವಣ್ಣ ದುರ್ಜನರ ಸಂಘ ಮಾಡಬೇಡಿ ಎಂದು ಹೇಳಿದ್ದರು. ಇದನ್ನು ಎಲ್ಲರೂ ನೆನಪಿಟ್ಟುಕೊಳ್ಳಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇಂದು ನಾನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ನಾನು ನಮ್ಮ ಗೆಳೆಯರಾದ ಅಶೋಕ್, ಬೊಮ್ಮಾಯಿ ಅವರಿಗೆ ಶೆಟ್ಟರ್ ಅವರ ಸೇರ್ಪಡೆಯ ಉಡುಗೊರೆ ಕೊಟ್ಟು ಬಂದಿದ್ದೇನೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಲಿಂಗಾಯತ ಸಮಾಜದ ದೊಡ್ಡ ನಾಯಕರೆಂದು ಗುರುತಿಸಿಕೊಂಡಿದ್ದರು. ಅವರು ಬಹಳ ನೋವಿನಿಂದ ಮಾತನಾಡಿದ್ದಾರೆ. ಬಹುಶಃ ಬಿಜೆಪಿ ಅವರನ್ನು ನಡೆಸಿಕೊಂಡಿರುವ ರೀತಿ ಯಾವ ಪಕ್ಷದಲ್ಲಿ ಯಾವುದೇ ನಾಯಕರಿಗೆ ಆಗಬಾರದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Karnataka Election 2023: ಹಿಂದುಳಿದವರ ಕೈಗೆ ನಾಯಕತ್ವ ಕೊಡುತ್ತೇವೆ, ದಲಿತರ ಕೈಗೆ ನಾಯಕತ್ವ ಕೊಡುತ್ತೇವೆ, ಶೋಷಿತರ ಕೈಗೆ ಅಧಿಕಾರ ಕೊಡುತ್ತೇವೆ ಎಂದು ಬಿಜೆಪಿ ಹೇಳುವುದಿಲ್ಲವೇಕೆ? ಇದೇನಾ ಸಾಮಾಜಿಕ ನ್ಯಾಯ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Karnataka Assembly Election 2023: ತುಂಬಾ ಹಾಸ್ಯದಿಂದ ಕೂಡಿರುವ ಈ ಹಾಡಿನಲ್ಲಿ ಬಿಜೆಪಿ ಸರ್ಕಾರದ ಹಲವು ಹಗರಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ೪೦% ಕಮಿಷನ್ ಸರ್ಕಾರ, ಪಿಎಸ್ಐ ಹಗರಣ, ಮೊಟ್ಟೆ ಹಗರಣ, ಬಿಡಿಎ ಹಗರಣ, ಕೋವಿಡ್ ಹಗರಣ ಮತ್ತು ಇತರ ಹಗರಣಗಳ ಬಗ್ಗೆ ಹಾಡಿನಲ್ಲಿ ಪ್ರಸ್ತಾಪಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.