ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ ಭಾರತೀಯ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಿರ್ದೇಶನದ ಜೊತೆ ನಟಿಸಿ ರಿಷಬ್ ಶೆಟ್ಟಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಕುರಿತು ಮಾತನಾಡಿ, ಸಿನಿಮಾಗಳು ಭಾಷೆಯ ಗಡಿ ದಾಟುತ್ತಿವೆ. ಕಂಟೆಂಟ್ ಪ್ರೇಕ್ಷಕರಿಗೆ ಇಷ್ಟವಾದ್ರೆ ಸಾಕು ತಾನಾಗಿಯೇ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪುತ್ತದೆ ಎಂದು ಹೇಳಿದ್ದಾರೆ.
ಕಾಂತಾರ ನಟ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಂಡಿದೆ. ರೈತರು ಮತ್ತು ಬುಡಕಟ್ಟು ಜನರ ಭೂಮಿ ಸಮಸ್ಯೆಯನ್ನು ಸಾಂಸ್ಕೃತಿಕ ಅಂಶಗಳೊಂದಿಗೆ ತೋರಿಸುವ ಚಿತ್ರವಾಗಿ ಕಾಂತಾರ ಮೋಡಿ ಮಾಡಿದೆ. ಕಿಶೋರ್, ಸಪ್ತಮಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ರಾಜ್ಯದಲ್ಲಿ ಚಿತ್ರಕ್ಕೆ ಸಿಕ್ಕ ಭಾರೀ ರೆಸ್ಪಾನ್ಸ್ ನಂತರ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಸಿನಿಮಾವನ್ನು ಅನುವಾದ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅಬ್ಬರಿಸಿ ಬಾಕ್ಸಾಫೀಸ್ ಲೂಟಿ ಮಾಡುತ್ತಿದೆ. ಇನ್ನೊಂದು ಕಡೆ ಸಿನಿಮಂದಿ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಅಂತ ಬಕ ಪಕ್ಷಿಗಳ ಹಾಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ಯಶ್ ಕಾಂತಾರ ಸಿನಿಮಾ ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ಆದ್ರೆ ರಾಕಿಭಾಯ್ ಈ ಮಾತು ಏಕೆ ಹೇಳಿದ್ರು ಅಂತ ನಿಮಗೆ ಗೊತ್ತಾದ್ರೆ ನೀವು ಖುಷಿಯಾಗೊಂದತೂ ಕಂಡಿತ.
ಭಾರತೀಯ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದ ಸಿನಿಮಾಗೆ ರಾಜಕೀಯ ಗಣ್ಯರು, ನಟರು ಫಿದಾ ಆಗಿದ್ದಾರೆ. ಇನ್ನು ತಲೈವಾ ರಜನಿಕಾಂತ್ ಅವರು ಸಿನಿಮಾ ನೋಡಿದ್ದು, ಹಾಡಿ ಹೊಗಳಿದ್ದಾರೆ.
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಕಾಂತಾರ ಕ್ರೇಜ್ ಬಗ್ಗೆ ಮಾತೆತ್ತಿರುವ ಆರ್ಜಿವಿ ಸದ್ಯ ಬಿಗ್ ಬಜೆಟ್ ಸಿನಿಮಾಗಳಿಗೆ ತಕ್ಕ ಪಾಠ ಕಲಿಸಿದ್ದಕ್ಕೆ ರಿಷಬ್ ಥ್ಯಾಂಕ್ಸ್, ಎಲ್ಲರೂ ನಿಮಗೆ ಫೀಸ್ ಕಟ್ಟಬೇಕು ಅಂತ ಹೇಳಿದ್ದಾರೆ.
ದಿ ಡಿವೈನ್ ಬ್ಲಾಕ್ಬ್ಲಸ್ಟರ್ ಸಿನಿಮಾ ಕಾಂತಾರ ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕಂಪು ಪಸರಿಸುತ್ತಿದೆ. ಪರಭಾಷಿಗರೂ ಸಹ ಕನ್ನಡದ ಈ ಸಿನಿಮಾಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕರುನಾಡ ಗಡಿ ದಾಟಿ ಕನ್ನಡದಲೇ ಬಿಡುಗಡೆಯಾದ ಚಿತ್ರಕ್ಕೆ ಭಾರಿ ಬೇಡಿಕೆ ಕ್ರಿಯೇಟ್ ಆಗಿದೆ. ಆದ್ರೆ ಕನ್ನಡ ಚಿತ್ರರಂಗದಿಂದ ಸಿನಿರಂಗಕ್ಕೆ ಕಾಲಿಟ್ಟು ಪರಭಾಷೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಮಾತ್ರ ತಮ್ಮ ಮಣ್ಣಿನ ಸಿನಿಮಾ ಕುರಿತು ಚಕಾರ ಎತ್ತುತ್ತಿಲ್ಲವೇಕೆ ಎಂಬ ಮಾತು ನಟ್ಟಿಜನ್ಸ್ ಬಾಯಿಂದ ಕೇಳಿ ಬರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.