'ಕಾಂತಾರ' ಸಿನಿಮಾ ನನ್ನದೇ : ರಿಷಬ್‌ ಶೆಟ್ಟಿ ಚಿತ್ರದ ಕುರಿತು ಯಶ್‌ ಶಾಕಿಂಗ್‌ ಹೇಳಿಕೆ..!

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅಬ್ಬರಿಸಿ ಬಾಕ್ಸಾಫೀಸ್‌ ಲೂಟಿ ಮಾಡುತ್ತಿದೆ. ಇನ್ನೊಂದು ಕಡೆ ಸಿನಿಮಂದಿ ರಾಕಿಂಗ್‌ ಸ್ಟಾರ್‌ ಯಶ್ ಮುಂದಿನ ಸಿನಿಮಾ ಯಾವುದು ಅಂತ ಬಕ ಪಕ್ಷಿಗಳ ಹಾಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ಯಶ್‌ ಕಾಂತಾರ ಸಿನಿಮಾ ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ಆದ್ರೆ ರಾಕಿಭಾಯ್‌ ಈ ಮಾತು ಏಕೆ ಹೇಳಿದ್ರು ಅಂತ ನಿಮಗೆ ಗೊತ್ತಾದ್ರೆ ನೀವು ಖುಷಿಯಾಗೊಂದತೂ ಕಂಡಿತ.

Written by - Krishna N K | Last Updated : Nov 6, 2022, 12:43 PM IST
  • 'ಕಾಂತಾರ' ಸಿನಿಮಾ ನನ್ನದೇ ರಾಕಿಂಗ್‌ ಸ್ಟಾರ್‌ ಯಶ್‌
  • ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ ಯಶ್‌ ಈ ಮಾತನ್ನು ಹೇಳಿದ್ದಾರೆ
  • ನಮ್ಮ ಸಿನಿಮಾಗೆ ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್‌ ಸಿಕ್ಕಿದೆ ಎಂದ ಯಶ್‌
'ಕಾಂತಾರ' ಸಿನಿಮಾ ನನ್ನದೇ : ರಿಷಬ್‌ ಶೆಟ್ಟಿ ಚಿತ್ರದ ಕುರಿತು ಯಶ್‌ ಶಾಕಿಂಗ್‌ ಹೇಳಿಕೆ..! title=

ಬೆಂಗಳೂರು : ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅಬ್ಬರಿಸಿ ಬಾಕ್ಸಾಫೀಸ್‌ ಲೂಟಿ ಮಾಡುತ್ತಿದೆ. ಇನ್ನೊಂದು ಕಡೆ ಸಿನಿಮಂದಿ ರಾಕಿಂಗ್‌ ಸ್ಟಾರ್‌ ಯಶ್ ಮುಂದಿನ ಸಿನಿಮಾ ಯಾವುದು ಅಂತ ಬಕ ಪಕ್ಷಿಗಳ ಹಾಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ಯಶ್‌ ಕಾಂತಾರ ಸಿನಿಮಾ ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ಆದ್ರೆ ರಾಕಿಭಾಯ್‌ ಈ ಮಾತು ಏಕೆ ಹೇಳಿದ್ರು ಅಂತ ನಿಮಗೆ ಗೊತ್ತಾದ್ರೆ ನೀವು ಖುಷಿಯಾಗೊಂದತೂ ಕಂಡಿತ.

ಹೌದು, ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ ಯಶ್‌ ಈ ಮಾತನ್ನು ಹೇಳಿದ್ದಾರೆ. ಸಂದರ್ಶನದಲ್ಲಿ ಕಾಂತಾರ ಕುರಿತು ಪ್ರಶ್ನೆ ಮಾಡಿದ್ದರು. ಅಲ್ಲದೆ, ಅದು ಯಶ್‌ ಸಿನಿಮಾ ಅಲ್ಲ ಆದ್ರೂ ಹಿಟ್‌ ಆಗುತ್ತಿದೆ ಎನ್ನವಂತೆ ಪ್ರಶ್ನಿಸಲಾಗಿತ್ತು. ಇದಕ್ಕೆ ತಮ್ಮದೆ ಶೈಲಿಯಲ್ಲಿ ಉತ್ತರಕೊಟ್ಟ ರಾಕಿ, ಸರ್‌ ಕಾಂತಾರ ನನ್ನ ಸಿನಿಮಾ ಅಲ್ಲ ಅಂತ ಹೇಳುತ್ತಿದ್ದಿರಾ.. ಆದ್ರೆ ಅದು ಕೂಡಾ ನನ್ನ ಸಿನಿಮಾ.. ಕಾಂತಾರ ಕರ್ನಾಟಕದ ಸಿನಿಮಾ.. ನಮ್ಮ ಸಿನಿಮಾಗೆ ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್‌ ಸಿಕ್ಕಿದೆ ಎಂದು ರಿಷಬ್‌ ಸಿನಿಮಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

ಇದನ್ನೂ ಓದಿ : ಈಗಿನ ಸಿನಿಮಾಗಳಲ್ಲಿ ನಮ್ಮ ನೆಲದ ಕಥೆ ಇರಲ್ಲ, ಹಾಲಿವುಡ್‌ ಸಂಪ್ರದಾಯವೇ ಹೆಚ್ಚು..!

ಅಷ್ಟೇ ಅಲ್ಲ, ಗರುಡ ಗಮನ ವೃಷಭ ವಾಹನ, ಚಾರ್ಲಿ 777, ಕೂಡಾ ನಮ್ಮ ಕನ್ನಡದ ಸಿನಿಮಾಗಳೇ ಎಂದು ಕನ್ನಡಿಗರು ಒಂದೇ ಎನ್ನುವ ಮಂತ್ರ ಜಪಿಸಿದರು. ಸದ್ಯ ಕೆಜಿಎಫ್‌ ಯಶಸ್ಸಿನ ನಂತರ ಯಶ್‌ ಅವರ ಮುಂದಿನ ಸಿನಿಮಾ ಯಾವುದು ಎಂದು ಅನೌನ್ಸ್‌ ಮಾಡಿಲ್ಲ. ರಾಕಿಭಾಯ್‌ ಈ ನಡೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ. ರಾಕಿ ಯಾವುದಾದ್ರೂ ಬಿಗ್‌ ಪ್ರಾಜೆಕ್ಟ್‌ಗೆ ಕೈ ಹಾಕಿದ್ರಾ..? ಅದಕ್ಕೆ ಇಷ್ಟು ತಡವಾಗುತ್ತಿದೆಯಾ ಅಂತ ಯಶ್‌ ಫ್ಯಾನ್ಸ್‌ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News