ʼಕಾಂತಾರʼ ನೋಡದ ಕನ್ನಡತಿಯರು : ಪರಭಾಷೆ ಗುಂಗಿನಲ್ಲಿ ಸ್ವಭಾಷೆ ಸಿನಿಮಾ ಮರೆತರಾ ಎಂದ ಜನ..!

ದಿ ಡಿವೈನ್‌ ಬ್ಲಾಕ್‌ಬ್ಲಸ್ಟರ್‌ ಸಿನಿಮಾ ಕಾಂತಾರ ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕಂಪು ಪಸರಿಸುತ್ತಿದೆ. ಪರಭಾಷಿಗರೂ ಸಹ ಕನ್ನಡದ ಈ ಸಿನಿಮಾಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕರುನಾಡ ಗಡಿ ದಾಟಿ ಕನ್ನಡದಲೇ ಬಿಡುಗಡೆಯಾದ ಚಿತ್ರಕ್ಕೆ ಭಾರಿ ಬೇಡಿಕೆ ಕ್ರಿಯೇಟ್‌ ಆಗಿದೆ. ಆದ್ರೆ ಕನ್ನಡ ಚಿತ್ರರಂಗದಿಂದ ಸಿನಿರಂಗಕ್ಕೆ ಕಾಲಿಟ್ಟು ಪರಭಾಷೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಮಾತ್ರ ತಮ್ಮ ಮಣ್ಣಿನ ಸಿನಿಮಾ ಕುರಿತು ಚಕಾರ ಎತ್ತುತ್ತಿಲ್ಲವೇಕೆ ಎಂಬ ಮಾತು ನಟ್ಟಿಜನ್ಸ್‌ ಬಾಯಿಂದ ಕೇಳಿ ಬರುತ್ತಿದೆ.

Written by - Krishna N K | Last Updated : Oct 18, 2022, 05:02 PM IST
  • ದಿ ಡಿವೈನ್‌ ಬ್ಲಾಕ್‌ಬ್ಲಸ್ಟರ್‌ ಸಿನಿಮಾ ಕಾಂತಾರ ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕಂಪು ಪಸರಿಸುತ್ತಿದೆ
  • ಪರಭಾಷಿಗರೂ ಸಹ ಕನ್ನಡದ ಈ ಸಿನಿಮಾಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ
  • ಪರಭಾಷೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಮಾತ್ರ ತಮ್ಮ ಮಣ್ಣಿನ ಸಿನಿಮಾ ಕುರಿತು ಚಕಾರ ಎತ್ತುತ್ತಿಲ್ಲವೇಕೆ
ʼಕಾಂತಾರʼ ನೋಡದ ಕನ್ನಡತಿಯರು : ಪರಭಾಷೆ ಗುಂಗಿನಲ್ಲಿ ಸ್ವಭಾಷೆ ಸಿನಿಮಾ ಮರೆತರಾ ಎಂದ ಜನ..! title=

ಬೆಂಗಳೂರು : ದಿ ಡಿವೈನ್‌ ಬ್ಲಾಕ್‌ಬ್ಲಸ್ಟರ್‌ ಸಿನಿಮಾ ಕಾಂತಾರ ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕಂಪು ಪಸರಿಸುತ್ತಿದೆ. ಪರಭಾಷಿಗರೂ ಸಹ ಕನ್ನಡದ ಈ ಸಿನಿಮಾಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕರುನಾಡ ಗಡಿ ದಾಟಿ ಕನ್ನಡದಲೇ ಬಿಡುಗಡೆಯಾದ ಚಿತ್ರಕ್ಕೆ ಭಾರಿ ಬೇಡಿಕೆ ಕ್ರಿಯೇಟ್‌ ಆಗಿದೆ. ಆದ್ರೆ ಕನ್ನಡ ಚಿತ್ರರಂಗದಿಂದ ಸಿನಿರಂಗಕ್ಕೆ ಕಾಲಿಟ್ಟು ಪರಭಾಷೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಮಾತ್ರ ತಮ್ಮ ಮಣ್ಣಿನ ಸಿನಿಮಾ ಕುರಿತು ಚಕಾರ ಎತ್ತುತ್ತಿಲ್ಲವೇಕೆ ಎಂಬ ಮಾತು ನಟ್ಟಿಜನ್ಸ್‌ ಬಾಯಿಂದ ಕೇಳಿ ಬರುತ್ತಿದೆ.

ಹೌದು... ʼಕಾಂತಾರʼ ಕನ್ನಡದ ಹೆಮ್ಮೆಯ ಸಿನಿಮಾ. ಈ ಸಿನಿಮಾದ ಕುರಿತು ಎಷ್ಟು ಮಾತನಾಡಿದರೂ ಕಡಿಮೆಯೇ. ಕರಾವಳಿ ಸಂಸ್ಕೃತಿಯ ಅನಾವರಣದ ಜೊತೆ ಅದ್ಭುತ ಕಥಾಹಂದರ ಹೊಂದಿರುವ ಸಿನಿಮಾವನ್ನು ಕನ್ನಡಾಭಿಮಾನಿಗಳು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಅಲ್ಲದೆ, ಗಡಿ ದಾಡಿ ಅಬ್ಬರಿಸುತ್ತಿರುವ ಕಾಂತಾರ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಸೆನ್ಸೇಷನ್‌ ಕ್ರಿಯೆಟ್‌ ಮಾಡುತ್ತಿದೆ. ರಾಜಕೀಯ ಗಣ್ಯರು, ಸಿನಿ ರಂಗದ ದಿಗ್ಗಜರು ರಿಷಬ್‌ ಶೆಟ್ಟಿ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಕಾಂತಾರಕ್ಕೆ ಸಂಬಂಧಿಸಿದ ವಿಷಯ ಒಂದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: Ashika Ranganath : ತಮಿಳಿನ ಬಳಿಕ ತೆಲುಗು ಸಿನಿಮಾದಲ್ಲಿ ಆಶಿಕಾ ರಂಗನಾಥ್.!

ಕನ್ನಡ ನೆಲದ ಕಾಂತಾರವನ್ನ ಪರಭಾಷಿಗರೂ ನೋಡಿ ಮೆಚ್ಚುಕೊಳ್ಳುತ್ತಿರುವಾಗ, ಕನ್ನಡ ಸಿನಿರಂಗದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟು ಪರಭಾಷೆಯಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಹಾಗೂ ಕನ್ನಡತಿಯರಾದ ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಕಣ್ಣಿಗೆ ಬಿದ್ದಿಲ್ಲವೇ ಎನ್ನುವ ಮಾತು ನೆಟ್ಟಿಗರ ಬಾಯಿಂದ ಕೇಳಿಬರುತ್ತಿದೆ. ಅಲ್ಲದೆ, ಈ ನಾಯಕಿಯರ ವರ್ತನೆಗೆ ಅಭಿಮಾನಿಗಳು ಬೇಸರ ವ್ಯಕಪಡಿಸುತ್ತಿದ್ದಾರೆ.

ಯಸ್‌... ಈ ಮಾತು ಕೇಳಿ ಬರೋದಕ್ಕೂ ಒಂದು ಕಾರಣವಿದೆ. ನ್ಯಾಷುನಲ್‌ ಕ್ರಷ್‌ ಆಗಿರುವ ರಶ್ಮಿಕಾ ಮಂದಣ್ಣ ಸಿನಿ ರಂಗಕ್ಕೆ ಕಾಲಿಟ್ಟಿದ್ದು, ರಿಷಬ್‌ ಶೆಟ್ಟಿ ನಿರ್ದೇಶನ ಕಿರಿಕ್‌ ಪಾರ್ಟಿ ಮೂಲಕ. ಅದು ಬಿಟ್ಟಾಕಿ ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಕರಾವಳಿ ಬೆಡಗಿಯರು, ಅವರು ಅದೇ ಮಣ್ಣಿನ ಸಂಪ್ರದಾಯ ಮಧ್ಯ ಬೆಳೆದು ಬಂದವರು. ಆದ್ರೂ ಸಹ ಅವರಿಗೆ ಕಾಂತಾರ ನೋಡಲು ಸಮಯ ಸಿಕ್ಕಿಲ್ಲ. ಇನ್ನೂ ಶ್ರೀಲೀಲಾ ಅವರಿಗೆ ಕನ್ನಡದ ಸಿನಿಮಾ ಕುರಿತು ಮಾತನಾಡುವುದಕ್ಕೆ ಸಮಯವಿಲ್ಲವೇನೊ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ʼದಿಲ್‌ ಪಸಂದ್‌ʼ ಆಗಿ ರಾಮ ರಾಮ ಅಂತ ಮೈಬಳುಕಿಸಿದ ರೂಪಸಿ ನಿಶ್ವಿಕಾ..!

ಕನ್ನಡದಲ್ಲಿ ಒಂದು ಸಿನಿಮಾವನ್ನೂ ಕೂಡ ಮಾಡದ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಸದಾ ಕನ್ನಡಾಭಿಮಾನ ಮರೆಯುತ್ತಿರುತ್ತಾರೆ. ಅಲ್ಲದೆ ಕಾಂತಾರ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ವಾರಣಾಸಿಯಿಂದ ಬಂದು ಕನ್ನಡ ಸಿನಿರಂಗದಲ್ಲೇ ಮಿಂಚುತ್ತಿರುವ ಶಾನ್ವಿ ಶ್ರೀವಾಸ್ತವ ಕಾಂತಾರ ಕುರಿತು ಮಾತನಾಡಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಕಾಂತಾರ ನೋಡಿ ಆಚ್ಚರಿ ವ್ಯಕ್ತಪಡಿಸಿದ್ದಾರೆ. ಇತ್ತ ನಟಿ, ರಾಜಕಾರಣಿ ರಮ್ಯಾ ಕೂಡ ಕಾಂತಾರದ ಅದ್ಭುತದ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್‌ ಸ್ಟಾರ್‌ ಕಂಗಾನಾ ಕೂಡ ʼಕಾಂತಾರʼಕ್ಕೆ ಫಿದಾ ಆಗಿದ್ದಾರೆ. ಅದ್ರೆ ಪರಭಾಷೆಯ ಆಕರ್ಷಣೆಯಲ್ಲಿ ಮುಳುಗಿರುವ ಕನ್ನಡ ನಟಿಯರಿಗೆ ಕಾಂತಾರ ಕಾಣುತ್ತಿಲ್ಲವೇ ಎಂಬುದು ನೆಟ್ಟಿಗರ ಪ್ರಶ್ನೆ.

ಒಟ್ಟಾರೆಯಾಗಿ ಸಿನಿಮಾ ನೋಡುವುದು ಬಿಡುವುದು ಅವರವರ ವಯಕ್ತಿಕ ವಿಚಾರ. ಈ ಸಿನಿಮಾವನ್ನು ನೋಡಲೇಬೇಕು ಎಂದು ಬಲವಂತ ಪಡಿಸುವಂತಿಲ್ಲ. ಆದ್ರೂ ಸಹ ಇಂತಹ ಮಾತುಗಳು ಅಭಿಮಾನಿಗಳ ಬಾಯಿಂದ ಕೇಳಿ ಬರುತ್ತಿವೆ. ಏನೇ ಇರಲಿ ಕನ್ನಡತಿಯರಾಗಿ ಕನ್ನಡದ ಒಂದು ಸಿನಿಮಾ ಅಬ್ಬರದ ಪ್ರಚಾರವಿಲ್ಲದೆ ಭಾರತೀಯ ಸಿನಿಮಾ ರಂಗದಲ್ಲಿ ಅದ್ಭುತ ಸಾಧನೆ ಮಾಡುತ್ತಿರುವಾಗ ನಮ್ಮವರೇ ಸಿನಿಮಾ ನೋಡಿ ಮೆಚ್ಚಿಕೊಳ್ಳಲಿಲ್ಲ ಎಂದರೇ ಹೇಗೆ ಅಲ್ಲವೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News