India vs New Zealand 1st ODI: ಈಗ ಮುಂದಿನ ಏಕದಿನ ಪಂದ್ಯದಿಂದ ಈ ಆಟಗಾರನನ್ನು ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ XI ನಿಂದ ಕೈಬಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಈ ಆಟಗಾರನನ್ನು ಟೀಂ ಇಂಡಿಯಾದ ಪ್ಲೇಯಿಂಗ್ XI ನಲ್ಲಿ ಇರಿಸುವ ಮೂಲಕ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.
IND vs SL: ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್ನಲ್ಲಿ ಶ್ರೀಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯದ ವೇಳೆ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಮತ್ತು ಬ್ಯಾಟರ್ ಇಶಾನ್ ಕಿಶನ್ ಅವರೊಂದಿಗೆ ಡ್ಯಾನ್ಸ್ ಮಾಡಿದ್ದು, ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.
IND vs SL 1st ODI: ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಮುಂಬರುವ 6 ಏಕದಿನ ಪಂದ್ಯಗಳಲ್ಲಿ ಶುಭಮನ್ ಗಿಲ್ (ಹೆಸರಿನ) ಮತ್ತು ಶ್ರೇಯಸ್ ಅಯ್ಯರ್ (ಸುಳಿವು) ಅವರಿಗೆ ಆಡಲು ಅವಕಾಶ. ಆರಂಭಿಕ ಬ್ಯಾಟ್ಸ್ಮನ್ಗಳಾದ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಬ್ಬರ ಪ್ರದರ್ಶನ ನೋಡಿ ಗಿಲ್ ಗೆ ಉತ್ತಮ ಅವಕಾಶ ನೀಡಬೇಕು ಎಂದು ನಿರ್ಧರಿಸಲಾಗಿದೆ ಎಂದು ರೋಹಿತ್ ಹೇಳಿದ್ದಾರೆ.
India vs Sri Lanka ODI Series: ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ನಲ್ಲಿ ಅಪಾರ ಅನುಭವ ಹೊಂದಿದ್ದು, ಟೀಂ ಇಂಡಿಯಾಕ್ಕೆ ಇದು ಉಪಯುಕ್ತ. ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ ತಂಡದ ವಿಕೆಟ್ ಕೀಪಿಂಗ್ ನೋಡಿಕೊಳ್ಳುತ್ತಿದ್ದರು. ಆದರೆ ರಾಹುಲ್ ದೀರ್ಘ ಕಾಲದಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ.
Ind vs SL : ರಾಜ್ಕೋಟ್ನ ಎಸ್ಸಿಎ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು 91 ರನ್ಗಳಿಂದ ಸೋಲಿಸಿದೆ. ಭಾರತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿತು. ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 16.4 ಓವರ್ಗಳಲ್ಲಿ 137 ರನ್ಗಳಿಗೆ ಸೋಲನುಭವಿಸಿತು.
ರಾಜ್ಕೋಟ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡುವಲ್ಲಿ ಮತ್ತೆ ವಿಫಲರಾಗಿದ್ದಾರೆ. ಈ ಕಾರಣಕ್ಕೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕಿಶನ್ ಮೇಲೆ ಮುನಿಸಿಕೊಂಡಿದ್ದಾರೆ. ಅಲ್ಲದೆ, ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
India vs Sri Lanka 1st T20 Series : ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಜನವರಿ 3 ರಂದು ನಡೆಯಲಿದೆ. ಶ್ರೀಲಂಕಾ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕತ್ವ ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
Indian Cricket Team: ಬ್ರೆಟ್ ಲೀ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುತ್ತಾ, 'ಇಶಾನ್ ಕಿಶನ್ 2023 ರಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಭಾರತದ ಪರವಾಗಿ ಆರಂಭಿಕರಾಗಿ ಕಣಕ್ಕಿಳಿಯುವ ಎಲ್ಲಾವ ಅರ್ಹತೆ ಹೊಂದಿದ್ದಾರೆ. ಅದು ಆಗುತ್ತದೆಯೇ? ನನಗೆ ಗೊತ್ತಿಲ್ಲ. ಈ ಆಟಗಾರ ODI ಇತಿಹಾಸದಲ್ಲಿ ವೇಗವಾಗಿ 200 ರನ್ ಗಳಿಸಿದ್ದಾರೆ. ಅವರು ಫಿಟ್ ಆಗಿದ್ದರೆ ವಿಶ್ವಕಪ್ನಲ್ಲಿ ಭಾರತಕ್ಕೆ ಆರಂಭಿಕ ಬ್ಯಾಟ್ಸ್ಮನ್ ಆಗಿರಬೇಕು” ಎಂದು ಹೇಳಿದರು.
Ishan Kishan in Ranji Trophy 2022-23 : ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿ ಬಿರುಗಾಳಿ ಎಬ್ಬಿಸಿದ್ದ ಇಶಾನ್ ಕಿಶನ್ ಮತ್ತೆ ಟೆಸ್ಟ್ ಪಂದ್ಯದಲ್ಲಿ ಮತ್ತೆ ಸಿಕ್ಸರ್ಗಳ ಸುರಿಮಳೆಗೈದಿದ್ದಾರೆ.
Team India: ಇದಲ್ಲದೇ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು 1-2 ಅಂತರದಿಂದ ತನ್ನ ತವರಿನಲ್ಲಿ ಕಳೆದುಕೊಂಡಿತ್ತು. ಟೀಮ್ ಇಂಡಿಯಾ ಈಗ 3 ಯುವ ಸ್ಫೋಟಕ ಬ್ಯಾಟ್ಸ್ಮನ್ಗಳ ಪ್ರವೇಶವನ್ನು ಹೊಂದಿದ್ದು, ಅವರು ರೋಹಿತ್ ಶರ್ಮಾ ಅವರನ್ನು ಭಾರತೀಯ ಕ್ರಿಕೆಟ್ ತಂಡದಿಂದ ಸಂಪೂರ್ಣವಾಗಿ ದೂರವಿಡುವ ಸಾಧ್ಯಯೆಯಿದೆ
ಇಶಾನ್ ಕಿಶನ್ ಕಾರಣದಿಂದ ಟೀಂ ಇಂಡಿಯಾದಲ್ಲಿ ರಿಷಬ್ ಪಂತ್ ಮತ್ತು ಶಿಖರ್ ಧವನ್ ಸ್ಥಾನಕ್ಕೆ ಧಕ್ಕೆ ಉಂಟಾಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ. ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ 131 ಎಸೆತಗಳಲ್ಲಿ 210 ರನ್ ಬಾರಿಸಿದ್ದರು. ಇಶಾನ್ ಕಿಶನ್ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.
Team India : ಟೀಂ ಇಂಡಿಯಾದ ವಿಕೆಟ್ ಕೀಪರ್ ಓಪನರ್ ಇಶಾನ್ ಕಿಶನ್ ಬಾಂಗ್ಲಾದೇಶ ವಿರುದ್ಧ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 131 ಎಸೆತಗಳಲ್ಲಿ 210 ರನ್ ಗಳಿಸಿ ಸಂಚಲನ ಮೂಡಿಸಿದ್ದಾರೆ. ಇಶಾನ್ ಕಿಶನ್ ಅವರ ಕಿಲ್ಲರ್ ಇನ್ನಿಂಗ್ಸ್ನಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್ಗಳನ್ನೂ ಸಿಡಿಸಿದ್ದಾರೆ.
Ishan Kishan Interview: ವಿರಾಟ್ ಕೊಹ್ಲಿ ಜೊತೆ ಎರಡನೇ ವಿಕೆಟ್ಗೆ ಜೊತೆಯಾಟವಾಡಿ 290 ರನ್ ಸೇರಿಸಿದ್ದಾರೆ. ಈ ಜೋಡಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಜೊತೆಯಾಗಿ ಆಡುವುದನ್ನು ಅಭಿಮಾನಿಗಳು ಕೂಡ ಇಷ್ಟಪಟ್ಟಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಿಶನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಈ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
Ishan Kishan: ಬಾಂಗ್ಲಾದೇಶ ವಿರುದ್ಧ ದ್ವಿಶತಕ ಸಿಡಿಸಿದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅವರ ಬ್ಯಾಟಿಂಗ್ ಅನ್ನು ಎಲ್ಲರೂ ಹೊಗಳುತ್ತಿದ್ದಾರೆ. ಇದೀಗ ಅವರ ಪ್ರೇಯಸಿ ಅದಿತಿ ಹುಂಡಿಯಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ತನ್ನ ಪ್ರೀತಿಯ ಬಗ್ಗೆ ಬರೆದುಕೊಂಡಿದ್ದಾರೆ.
Ishan Kishan Injured: ಯುವ ಆಟಗಾರ ಇಶಾನ್ ಕಿಶನ್ ಗಾಯಗೊಂಡಿದ್ದ ಕೆಲವೇ ದಿನಗಳಲ್ಲಿ ಮತ್ತೆ ಮೈದಾನಕ್ಕೆ ಮರಳಿದ್ದರು. 2018ರ ಐಪಿಲ್ ಟೂರ್ನಿಯಲ್ಲಿ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.
Ishan Kishan Coach Uttam Majumdar: ಇಶಾನ್ ಕಿಶನ್ ಅವರ ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಅವರು ಭಾರತ ತಂಡಕ್ಕೆ ಮರಳುವ ಮೊದಲು ಹೋಟೆಲ್ ಕೊಠಡಿಗಳಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಕಿಶನ್ ಹುಟ್ಟುಹಬ್ಬದ ಉಡುಗೊರೆಯನ್ನೂ ನೀಡಿದ್ದಾರೆ ಎನ್ನುತ್ತಾ ಉತ್ತಮ್ ಮಜುಂದಾರ್ ಭಾವುಕರಾದರು.ಇಶಾನ್ ಕಿಶನ್ ಅವರ ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಅವರು ಭಾರತ ತಂಡಕ್ಕೆ ಮರಳುವ ಮೊದಲು ಹೋಟೆಲ್ ಕೊಠಡಿಗಳಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಕಿಶನ್ ಹುಟ್ಟುಹಬ್ಬದ ಉಡುಗೊರೆಯನ್ನೂ ನೀಡಿದ್ದಾರೆ ಎನ್ನುತ್ತಾ ಉತ್ತಮ್ ಮಜುಂದಾರ್ ಭಾವುಕರಾದರು.
ಚಟ್ಟೋಗ್ರಾಮ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಎಕದಿನದ ಪಂದ್ಯದಲ್ಲಿ ಇಶಾನ್ ಕಿಶನ್ ಕ್ರಿಸ್ ಗೇಲ್ ಅವರ ಏಕದಿನದ ಪಂದ್ಯಗಳಲ್ಲಿ ವೇಗದ ದ್ವಿಶತಕದ ವಿಶ್ವದಾಖಲೆಯನ್ನು ಮುರಿದಿದ್ದಾರೆ.
ಗಾಯಗೊಂಡ ನಂತರ ಸರಣಿಯ ಕೊನೆಯ ಪಂದ್ಯಕ್ಕೆ ಗೈರಾಗಿದ್ದ ನಾಯಕ ರೋಹಿತ್ ಶರ್ಮಾ ಸ್ಥಾನದಲ್ಲಿ ಬಡ್ತಿ ಪಡೆದ ಇಶಾನ್ ಕಿಶನ್ ಸಿಕ್ಕಿರುವ ಆರಂಭಿಕ ಸ್ಥಾನವನ್ನು ಸರಿಯಾಗಿ ಬಳಸಿಕೊಂಡರು. ಅವರು ಕೇವಲ 126 ಎಸೆತಗಳಲ್ಲಿ 23 ಬೌಂಡರಿ ಮತ್ತು 9 ಸಿಕ್ಸರ್ಗಳನ್ನು ಸಿಡಿಸುವ ಮೂಲಕ 200 ರನ್ಗಳ ಗಡಿಯನ್ನು ತಲುಪಿದರು.ಅವರು ಕೇವಲ 85 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.
IND vs BAN 2nd ODI: ಈಗಾಗಲೇ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 0-1 ಅಂತರದಲ್ಲಿ ಹಿಂದುಳಿದಿದೆ. ಒಂದು ವೇಳೆ ಎರಡನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಸೋತರೆ ಸತತ ಎರಡನೇ ಏಕದಿನ ಸರಣಿಯಲ್ಲಿ ಸೋಲನುಭವಿಸಲಿದೆ. ಜೊತೆಗೆ ಸರಣಿ ಗೆಲ್ಲುವ ಕನಸು ಕಮರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.