KL Rahul: ರಾಹುಲ್ ಸ್ಥಾನ ಕಸಿದುಕೊಳ್ತಾರಾ ಈ ಆಟಗಾರ? ಆಸೀಸ್ ದಿಗ್ಗಜ ಬಿಚ್ಚಿಟ್ಟ ರಹಸ್ಯವೇನು?

Indian Cricket Team: ಬ್ರೆಟ್ ಲೀ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, 'ಇಶಾನ್ ಕಿಶನ್ 2023 ರಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಆರಂಭಿಕರಾಗಿ ಕಣಕ್ಕಿಳಿಯುವ ಎಲ್ಲಾವ ಅರ್ಹತೆ ಹೊಂದಿದ್ದಾರೆ. ಅದು ಆಗುತ್ತದೆಯೇ? ನನಗೆ ಗೊತ್ತಿಲ್ಲ. ಈ ಆಟಗಾರ ODI ಇತಿಹಾಸದಲ್ಲಿ ವೇಗವಾಗಿ 200 ರನ್ ಗಳಿಸಿದ್ದಾರೆ. ಅವರು ಫಿಟ್ ಆಗಿದ್ದರೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಆಗಿರಬೇಕು” ಎಂದು ಹೇಳಿದರು.

Written by - Bhavishya Shetty | Last Updated : Dec 27, 2022, 01:23 PM IST
    • ಕೆಎಲ್ ರಾಹುಲ್ ಬಹಳ ದಿನಗಳಿಂದ ಕಳಪೆ ಫಾರ್ಮ್‌ ನಲ್ಲಿ ಆಟವಾಡುತ್ತಿದ್ದಾರೆ
    • ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅವರು ಕಳಪೆಯಾಗಿ ಸೋತಿದ್ದಾರೆ
    • ಕೆಎಲ್ ರಾಹುಲ್ ಕಳೆದ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಬಾರಿ ಮಾತ್ರ 25ರ ಗಡಿ ದಾಟಿದ್ದಾರೆ
KL Rahul: ರಾಹುಲ್ ಸ್ಥಾನ ಕಸಿದುಕೊಳ್ತಾರಾ ಈ ಆಟಗಾರ? ಆಸೀಸ್ ದಿಗ್ಗಜ ಬಿಚ್ಚಿಟ್ಟ ರಹಸ್ಯವೇನು? title=
kl rahul

Indian Cricket Team: ಕೆಎಲ್ ರಾಹುಲ್ ಬಹಳ ದಿನಗಳಿಂದ ಕಳಪೆ ಫಾರ್ಮ್‌ ನಲ್ಲಿ ಆಟವಾಡುತ್ತಿದ್ದಾರೆ. ಅವರ ಬ್ಯಾಟ್‌ನಿಂದ ರನ್‌ಗಳನ್ನು ಪಡೆಯುವುದು ಕಷ್ಟಕರವಾಗಿದೆ. ರನ್ ಗಳಿಸುವುದರಿಂದ ದೂರ ಉಳಿಯಲು ಹಂಬಲಿಸುತ್ತಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅವರು ಕಳಪೆಯಾಗಿ ಸೋತಿದ್ದಾರೆ. ಕೆಎಲ್ ರಾಹುಲ್ ಕಳೆದ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಬಾರಿ ಮಾತ್ರ 25ರ ಗಡಿ ದಾಟಿದ್ದಾರೆ. ಈಗ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರು ಟೀಂ ಇಂಡಿಯಾದ ಓರ್ವ ಯುವ ಆಟಗಾರನನ್ನು ವಿಶ್ವಕಪ್‌ನಲ್ಲಿ ಆರಂಭಿಕ ಆಟಗಾರರ ಸಾಲಿಗೆ ದೊಡ್ಡ ಸ್ಪರ್ಧಿ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: IND vs BAN : ಅಶ್ವಿನ್ ಪ್ರದರ್ಶನ ನೋಡಿ 'ಸೈಂಟಿಸ್ಟ್' ಎಂದು ಕರೆದ ಸೆಹ್ವಾಗ್

ಬ್ರೆಟ್ ಲೀ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, 'ಇಶಾನ್ ಕಿಶನ್ 2023 ರಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಆರಂಭಿಕರಾಗಿ ಕಣಕ್ಕಿಳಿಯುವ ಎಲ್ಲಾವ ಅರ್ಹತೆ ಹೊಂದಿದ್ದಾರೆ. ಅದು ಆಗುತ್ತದೆಯೇ? ನನಗೆ ಗೊತ್ತಿಲ್ಲ. ಈ ಆಟಗಾರ ODI ಇತಿಹಾಸದಲ್ಲಿ ವೇಗವಾಗಿ 200 ರನ್ ಗಳಿಸಿದ್ದಾರೆ. ಅವರು ಫಿಟ್ ಆಗಿದ್ದರೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಆಗಿರಬೇಕು” ಎಂದು ಹೇಳಿದರು.

ಬ್ರೆಟ್ ಲೀ ಇಶಾನ್ ಕಿಶನ್‌ಗೆ ಉತ್ತಮ ಸಲಹೆ ನೀಡಿದ್ದು, 'ದ್ವಿಶತಕ ಗಳಿಸಿದ ನಂತರ, ಇಶಾನ್ ಕಿಶನ್ ಹೆಚ್ಚು ಹೊಗಳುವುದನ್ನು ತಪ್ಪಿಸಬೇಕು. ಅವರು ಆ ದೊಡ್ಡ ಇನ್ನಿಂಗ್ಸ್ ಮರೆತು ಮುನ್ನಡೆಯಬೇಕು. ಅವರು ಫಿಟ್ ಆಗಿರಬೇಕು ಮತ್ತು ನಿರಂತರವಾಗಿ ರನ್ ಗಳಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: KL Rahul : 'ಈಗ ಟೀಂ ಇಂಡಿಯಾದಿಂದ ಕೆಎಲ್ ರಾಹುಲ್ ಹೊರಗಿಡಿ'

ಸ್ಫೋಟಕ ಬ್ಯಾಟಿಂಗ್ ತಜ್ಞ:

ಕೆಲ ಸಮಯದಿಂದ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಇಬ್ಬರೂ ಕೆಟ್ಟ ಫಾರ್ಮ್‌ ನಲ್ಲಿ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಇಶಾನ್ ಕಿಶನ್ ಗೆ ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅವರು ಸ್ಫೋಟಕ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿರುವ ಆಟಗಾರ. ಅವರು ಯಾವುದೇ ಬೌಲಿಂಗ್ ದಾಳಿಯನ್ನು ಮುರಿದು ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಟೀಂ ಇಂಡಿಯಾ ಪರ 10 ಏಕದಿನ ಪಂದ್ಯಗಳಲ್ಲಿ ದ್ವಿಶತಕ ಸೇರಿದಂತೆ 477 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ ಈಗಾಗಲೇ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News