Ishan Kishan: 190 ರನ್ ಗಳಿಸಿದ್ದ ವೇಳೆ ಕೊಹ್ಲಿಗೆ ಗುಟ್ಟಾಗಿ ಇಶಾನ್ ಕಿಶನ್ ಹೇಳಿದ್ರು ಆ ಒಂದು ಮಾತು!!

Ishan Kishan Interview: ವಿರಾಟ್ ಕೊಹ್ಲಿ ಜೊತೆ ಎರಡನೇ ವಿಕೆಟ್‌ಗೆ ಜೊತೆಯಾಟವಾಡಿ 290 ರನ್ ಸೇರಿಸಿದ್ದಾರೆ. ಈ ಜೋಡಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಜೊತೆಯಾಗಿ ಆಡುವುದನ್ನು ಅಭಿಮಾನಿಗಳು ಕೂಡ ಇಷ್ಟಪಟ್ಟಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಿಶನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಈ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.  

Written by - Bhavishya Shetty | Last Updated : Dec 11, 2022, 01:19 PM IST
    • ಕಿಶನ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕವನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ
    • ಶುಭ್ಮನ್ ಗಿಲ್ ನಡೆಸಿದ ಸಂದರ್ಶನದಲ್ಲಿ ಇಶಾನ್ ಕಿಶನ್ ಕೆಲವೊಂದು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ
    • ವಿರಾಟ್ ಕೊಹ್ಲಿ ಜೊತೆ ಎರಡನೇ ವಿಕೆಟ್‌ಗೆ ಜೊತೆಯಾಟವಾಡಿ 290 ರನ್ ಸೇರಿಸಿದ್ದಾರೆ
Ishan Kishan: 190  ರನ್ ಗಳಿಸಿದ್ದ ವೇಳೆ ಕೊಹ್ಲಿಗೆ ಗುಟ್ಟಾಗಿ ಇಶಾನ್ ಕಿಶನ್ ಹೇಳಿದ್ರು ಆ ಒಂದು ಮಾತು!! title=
Ishan Kishan

Ishan Kishan Interview: ಟೀಂ ಇಂಡಿಯಾದ ಯುವ ಶನಿವಾರ ತಮ್ಮ ಬಿರುಸಿನ ಫಾರ್ಮ್ ಅನ್ನು ತೋರಿಸಿದ್ದು, ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ತಂಡದ ಬೌಲರ್‌ಗಳನ್ನು ಬೆಂಡೆತ್ತಿದ್ದಾರೆ. ಚಿತ್ತಗಾಂಗ್‌ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಕಿಶನ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕವನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: FIFA WC 2022: ಪೋರ್ಚುಗಲ್‌ಗೆ ಆಘಾತ ನೀಡಿದ ಮೊರೊಕ್ಕೊ, ರೊನಾಲ್ಡೊ ವಿಶ್ವಕಪ್ ಕನಸು ಭಗ್ನ!

ವಿರಾಟ್ ಕೊಹ್ಲಿ ಜೊತೆ ಎರಡನೇ ವಿಕೆಟ್‌ಗೆ ಜೊತೆಯಾಟವಾಡಿ 290 ರನ್ ಸೇರಿಸಿದ್ದಾರೆ. ಈ ಜೋಡಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಜೊತೆಯಾಗಿ ಆಡುವುದನ್ನು ಅಭಿಮಾನಿಗಳು ಕೂಡ ಇಷ್ಟಪಟ್ಟಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಿಶನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಈ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.  

ಇನ್ನು ಶುಭ್ಮನ್ ಗಿಲ್ ನಡೆಸಿದ ಸಂದರ್ಶನದಲ್ಲಿ ಇಶಾನ್ ಕಿಶನ್ ಕೆಲವೊಂದು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. 190 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಉದ್ವಿಗ್ನರಾಗಿದ್ದರು? ಈ ನಡುವೆ ವಿರಾಟ್ ಕೊಹ್ಲಿ ಅವರಿಗೆ ಹೇಳಿದ್ದೇನು? ಯುವ ಆಟಗಾರ ದೊಡ್ಡ ದಾಖಲೆಗಳತ್ತ ಸಾಗುತ್ತಿರುವಾಗ ಕೊಹ್ಲಿ ಮತ್ತು ಇಶಾನ್ ಕಿಶನ್ ನಡುವೆ ಏನಾಯಿತು? ಹಲವು ಕ್ರಿಕೆಟ್ ಪ್ರೇಮಿಗಳು ಉತ್ತರವನ್ನು ತಿಳಿಯಲು ಬಯಸುವ ಕೆಲವು ಪ್ರಶ್ನೆಗಳು ಇವು. ಈ ಎಲ್ಲಾ ಪ್ರಶ್ನೆಗಳಿಗೆ ಇಶಾನ್ ಅವರೇ ತೆರೆ ಎಳೆದಿದ್ದಾರೆ.

ಪಂದ್ಯದ ನಂತರ ಶುಭಮನ್ ಗಿಲ್ ಅವರು ಕಿಶನ್ ಅವರನ್ನು ಸಂದರ್ಶಿಸಿದ್ದು, ಅದರ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. ಕಿಶನ್ ಕೇವಲ 126 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಪೂರ್ಣಗೊಳಿಸಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗಿನ ವೇಗದ ದ್ವಿಶತಕವಾಗಿದೆ.

ವಿರಾಟ್‌ಗೆ ಏನಾಯಿತು?

ಈ ಸಮಯದಲ್ಲಿ ಇಶಾನ್, “ಸಚಿನ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಅವರಂತಹ ಅನುಭವಿಗಳ ಪಟ್ಟಿಗೆ ಸೇರ್ಪಡೆಗೊಂಡ ನಂತರ ನಾನು ತುಂಬಾ ಒಳ್ಳೆಯವನಾಗಿದ್ದೇನೆ” ಎಂದು ಹೇಳಿದರು. 200 ರನ್ ಗಳ ಸಮೀಪದಲ್ಲಿರುವಾಗ ವಿರಾಟ್ ಅವರೊಂದಿಗೆ ನೀವು ನಡೆಸಿದ ಸಂಭಾಷಣೆ ಏನು ಎಂದು ಗಿಲ್ ಕೇಳಿದಾಗ, ಈ ಬಗ್ಗೆ ಇಶಾನ್ ಹೇಳಿದ್ದು ಹೀಗೆ. ”ನಾನು ಮೊದಲು ಹೇಳಿದ್ದೇನೆಂದರೆ ನನಗೆ ಸಿಂಗಲ್ ತೆಗೆದುಕೊಳ್ಳುವಂತೆ ಹೇಳುತ್ತಿರಿ. ನಾನು ಚೆಂಡನ್ನು ಬೀಸುತ್ತೇನೆ, ಇಲ್ಲದಿದ್ದರೆ ಮುಂದೆ ಹೋಗುತ್ತೇನೆ. ನನಗೆ ರನ್ ಗಳಿಸಲು ಸ್ಪೂರ್ತಿ ಪಡೆಯುವಂತಾಗುತ್ತದೆ” ಎಂದು ಹೇಳಿದರು.

ನೀವು ಇಂದು ಅತಿವೇಗದ ದ್ವಿಶತಕವನ್ನು ಗಳಿಸಿದ್ದೀರಿ. ಇದು ನಿಮ್ಮ ODI ವೃತ್ತಿಜೀವನದ ಮೊದಲ ಶತಕವಾಗಿದೆ. ಆದ್ದರಿಂದ ನೀವು ಯೋಚಿಸಿದ ನಂತರ ಮೈದಾನಕ್ಕೆ ಇಳಿದಿದ್ದೀರಾ? ಎಂದು ಗಿಲ್ ಪ್ರಶ್ನೆ ಕೇಳಿದರು. ಈ ಬಗ್ಗೆ ಇಶಾನ್, 'ಇಲ್ಲ, ನಾನು ಈ ರೀತಿ ಯೋಚಿಸಲಿಲ್ಲ. ಮೊದಲು 90 ರನ್ ಗಳಿಸುವ ಎಂದುಕೊಂಡೆ, ಅಲ್ಲಿಂದ ನಿಧಾನವಾಗಿ ಶತಕ ದಾಟಿಗೆ, ಬಳಿಕ 146 ಟಾರ್ಗೆಟ್ ಇಟ್ಟುಕೊಂ. ಸೂಕ್ಷ್ಮವಾಗಿ ಅದನ್ನೂ ದಾಟಿ 150 ರನ್ ಕಲೆ ಹಾಕಿದೆ. ಬಳಿಕ 190 ರನ್ ಬಳಿ ಬಂದಾಗ ಶಾಂತವಾಗಿ ಆಟವಾಡಿ 200 ರನ್ ಗಳಿಸಿದೆ. ನಾನು ಏನನ್ನೂ ಯೋಚಿಸಲಿಲ್ಲ. ವಿಕೆಟ್ ತುಂಬಾ ಚೆನ್ನಾಗಿದೆ ಎಂದು ನನಗೆ ಅನಿಸಿತು. ಹೀಗಿರುವಾಗ ಬಲವಂತವಾಗಿ ನಿಲ್ಲಿಸಿ ಏಕೆ ಆಡಬೇಕು? ಎಂದು ಹೇಳಿದರು.

ಇದನ್ನೂ ಓದಿ: Ishan Kishan: ಹೋಟೆಲ್ ರೂಮಿನಲ್ಲೂ ಇಶಾನ್ ಕಿಶನ್... ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಬಿಚ್ಚಿಟ್ಟ ರಹಸ್ಯವೇನು?

ಚಿತ್ತಗಾಂಗ್‌ನ ಜಹೂರ್ ಅಹ್ಮದ್ ಚೌಧರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತಂಡ 227 ರನ್‌ಗಳ ಜಯ ಸಾಧಿಸಿತು. ಈ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗೆ 409 ರನ್ ಗಳಿಸಿದೆ. ಕಿಶನ್ 131 ಎಸೆತಗಳಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್‌ಗಳಿಂದ 210 ರನ್ ಗಳಿಸಿದರು. ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 113 ರನ್ ಗಳಿಸಿ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದ 72ನೇ ಶತಕ ದಾಖಲಿಸಿದರು. ಅವರು 11 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಇದಾದ ಬಳಿಕ ಬಾಂಗ್ಲಾದೇಶ ತಂಡ 182 ರನ್‌ಗಳಿಗೆ ಆಲೌಟ್ ಆಯಿತು. ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರು. ಬಾಂಗ್ಲಾದೇಶ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News