Ishan Kishan: ದ್ವಿಶತಕ ವೀರ ಇಶಾನ್ ಕಿಶನ್ ಪ್ರೇಯಸಿ ಯಾರು ಗೊತ್ತಾ? ಬಾಲಿವುಡ್ ಬ್ಯೂಟಿಗೂ ಕಮ್ಮಿಯಿಲ್ಲ ಈ ಸುಂದರಿ

Ishan Kishan: ಬಾಂಗ್ಲಾದೇಶ ವಿರುದ್ಧ ದ್ವಿಶತಕ ಸಿಡಿಸಿದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅವರ ಬ್ಯಾಟಿಂಗ್ ಅನ್ನು ಎಲ್ಲರೂ ಹೊಗಳುತ್ತಿದ್ದಾರೆ. ಇದೀಗ ಅವರ ಪ್ರೇಯಸಿ ಅದಿತಿ ಹುಂಡಿಯಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ತನ್ನ ಪ್ರೀತಿಯ ಬಗ್ಗೆ ಬರೆದುಕೊಂಡಿದ್ದಾರೆ.

1 /6

ಇನ್ ಸ್ಟಾಗ್ರಾಂನಲ್ಲಿ ಇಶಾನ್ ಕಿಶನ್ ಗೆಳತಿ ಅದಿತಿ ಹುಂಡಿಯಾ ಕೂಡ ತನ್ನ ಪ್ರೀತಿಯ ಮಳೆಯನ್ನು ಸುರಿಸಿದ್ದಾರೆ. ಇಶಾನ್ ಅವರ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ಪ್ರೀತಿಯ ಇಮೋಜಿ ಬಳಸಿದ್ದಾರೆ.

2 /6

ಒಂದು ಫೋಟೋದಲ್ಲಿ, ಇಶಾನ್ ಕಿಶನ್ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಅದಿತಿ ಹುಂಡಿಯಾ ಈ ಚಿತ್ರದ ಮೇಲೆ ಹಾರ್ಟ್ ಎಮೋಜಿ ಹಾಕಿದ್ದಾರೆ. ಈ ಮೂಲಕ ಇಶಾನ್ ಮೇಲೆ ಪ್ರೀತಿಯನ್ನು ತೋರಿಸಿದ್ದಾರೆ.

3 /6

ಇಶಾನ್ ಕಿಶನ್ ಮತ್ತು ಹುಂಡಿಯವರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರ ಸಂಬಂಧದ ಸುದ್ದಿಗಳು ಅನೇಕ ಬಾರಿ ಮುಖ್ಯಾಂಶಗಳಲ್ಲಿವೆ. ಆದರೂ ಅವರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಇಲ್ಲಿಯವರೆಗೆ ಏನನ್ನೂ ಹೇಳಿಲ್ಲ.

4 /6

ಇಶಾನ್ ಅವರ ಗೆಳತಿ ಅದಿತಿ ಹುಂಡಿಯಾ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ. ಅವರು 2017 ರಲ್ಲಿ ನಡೆದ 'ಮಿಸ್ ಇಂಡಿಯಾ ಸ್ಪರ್ಧೆ'ಯ ಫೈನಲಿಸ್ಟ್ ಕೂಡ ಆಗಿದ್ದಾರೆ.

5 /6

ಇದಲ್ಲದೇ 2018ರಲ್ಲಿ ‘ಮಿಸ್ ಸುಪ್ರಾನ್ಯಾಷನಲ್ ಇಂಡಿಯಾ’ ಪಟ್ಟವನ್ನೂ ಅದಿತಿ ಹುಂಡಿಯಾ ತಮ್ಮದಾಗಿಸಿಕೊಂಡಿದ್ದರು.

6 /6

ಹುಂಡಿಯಾ ಮಾಡೆಲ್ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದು, ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.