IND vs SL: ಸರಣಿ ಗೆದ್ದ ಖುಷಿಗೆ ಮೈದಾನದಲ್ಲೇ ಕೊಹ್ಲಿ- ಕಿಶನ್ ಭರ್ಜರಿ ಡ್ಯಾನ್ಸ್! ವಿಡಿಯೋ ನೋಡಿ

IND vs SL: ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯದ ವೇಳೆ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಮತ್ತು ಬ್ಯಾಟರ್ ಇಶಾನ್ ಕಿಶನ್ ಅವರೊಂದಿಗೆ ಡ್ಯಾನ್ಸ್ ಮಾಡಿದ್ದು, ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. 

Written by - Chetana Devarmani | Last Updated : Jan 13, 2023, 05:02 PM IST
  • ಶ್ರೀಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯ
  • ವಿರಾಟ್ ಕೊಹ್ಲಿ - ಇಶಾನ್ ಕಿಶನ್ ಡ್ಯಾನ್ಸ್
  • ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್
IND vs SL: ಸರಣಿ ಗೆದ್ದ ಖುಷಿಗೆ ಮೈದಾನದಲ್ಲೇ ಕೊಹ್ಲಿ- ಕಿಶನ್ ಭರ್ಜರಿ ಡ್ಯಾನ್ಸ್! ವಿಡಿಯೋ ನೋಡಿ  title=
ವಿರಾಟ್ ಕೊಹ್ಲಿ - ಇಶಾನ್ ಕಿಶನ್

Virat Kohli and Ishan Kishan dance : ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯದ ವೇಳೆ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಮತ್ತು ಬ್ಯಾಟರ್ ಇಶಾನ್ ಕಿಶನ್ ಅವರೊಂದಿಗೆ ಡ್ಯಾನ್ಸ್ ಮಾಡಿದ್ದು, ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.  ಶ್ರೀಲಂಕಾ ವಿರುದ್ಧ ODI ಸರಣಿಯ ಎರಡನೇ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದಿದೆ. ಈ ಸರಣಿಯಲ್ಲಿ ಒಂದು ಪಂದ್ಯ ಬಾಕಿಯಿದ್ದರೂ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ. 

ಇದನ್ನೂ ಓದಿ : ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಕುಲದೀಪ್ ಯಾದವ್ : ವಿಡಿಯೋ ವೈರಲ್

ಈ ಸರಣಿ ಗೆದ್ದ ಸಂಭ್ರಮಾಚರಣೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ಇಶಾನ್ ಕಿಶನ್ ಡಾನ್ಸ್ ಮಾಡಿ ನೆರದಿದ್ದ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅಭಿಮಾನಿಗಳು ಈಡನ್ ಗಾರ್ಡನ್ಸ್‌ನಲ್ಲಿ ಲೇಜರ್ ಮತ್ತು ಲೈಟ್ ಶೋ ಅನ್ನು ಆನಂದಿಸುವುದನ್ನು ಕಾಣಬಹುದು. ಅದೇ ಸಮಯದಲ್ಲಿ ಕೊಹ್ಲಿ ಮತ್ತು ಕಿಶನ್ ಒಟ್ಟಾಗಿ ಮಾಡಿದ ಡ್ಯಾನ್ಸ್‌ ಅಲ್ಲಿದ್ದವರ ಮನಸೆಳೆದಿದೆ. ಕಿಶನ್ ಮತ್ತು ಕೊಹ್ಲಿ ಒಟ್ಟಾಗಿ ಸಂತಸದಲ್ಲಿ ಸ್ಟೆಪ್‌ ಹಾಕಿದ್ದು, ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.

 

 

ಮತ್ತೊಂದು ರೋಚಕ ಪೈಪೋಟಿಯಲ್ಲಿ ಶ್ರೀಲಂಕಾವನ್ನು ಭಾರತ ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಕೆಎಲ್ ರಾಹುಲ್ ಪಂದ್ಯದ ಸ್ಟಾರ್‌ ಎನಿಸಿಕೊಂಡರು. ಅವರು 103 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು ಮತ್ತು ಸರಣಿ ಗೆಲುವಿಗೆ ಕಾರಣರಾದರು. ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದು ಗೆಲುವಿಗೆ ರೂವಾರಿಯಾದರು.   

ಇದನ್ನೂ ಓದಿ : 3ನೇ ODIಗೆ ಸೂರ್ಯಕುಮಾರ್ ಇನ್; ಈ ಫ್ಲಾಪ್ ಆಟಗಾರ ಔಟ್: ಮಿ.360 ಅಬ್ಬರ ಗ್ಯಾರಂಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News