Constitution awareness rally: ಸಂವಿಧಾನ ರಚನೆಯಾಗಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕೈಗೊಂಡಿದೆ.
WhatsApp: ವಿವಾಹಿತ ದಂಪತಿಗಳ ನಡುವೆ ಯಾವುದೇ ಮುಚ್ಚುಮರೆ ಇರಬಾರದು ಎನ್ನಲಾಗುತ್ತದೆ. ವಿವಾಹಿತ ದಂಪತಿಗಳು ಪರಸ್ಪರರ ಫೋನ್, ಮೆಸೇಜ್ ಅಥವಾ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುವುದು ನಮ್ಮ ಹಕ್ಕು ಎಂದು ಭಾವಿಸುತ್ತಾರೆ. ಆದರೆ, ಕಾನೂನಾತ್ಮಕವಾಗಿ ಇದು ಎಷ್ಟು ಸರಿ? ಮದುವೆ ಆಧಾರದ ಮೇಲೆ ವೈಯಕ್ತಿಕ ಫೋನ್, ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸಬಹುದೇ? ಈ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
‘’ಸಮಾಜವಾದಿ’’ ಮತ್ತು "ಜಾತ್ಯತೀತ" ಪದಗಳನ್ನು ಕಿತ್ತುಹಾಕಿರುವುದು ಸಂವಿಧಾನ ವಿರೋಧಿ ನಡೆ ಮಾತ್ರವಲ್ಲ, ಇದೊಂದು ದೇಶದ್ರೋಹ ಕೃತ್ಯವಾಗಿದೆ. ಇದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ನೇರಾನೇರವಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಧೈರ್ಯ ಇಲ್ಲದ ಬಿಜೆಪಿ ಮತ್ತು ಕೇಂದ್ರ ಸರ್ಕಾರ, ಅಡ್ಡದಾರಿ ಹಿಡಿದು ಸಂವಿಧಾನದ ಆಶಯಗಳನ್ನು ಅಳಿಸಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Swami Prasad Maurya: ಭಾರತದಲ್ಲಿರುವ ಎಲ್ಲರೂ ಭಾರತೀಯರು. ನಮ್ಮ ದೇಶದ ಸಂವಿಧಾನವು ಎಲ್ಲಾ ಜಾತಿ, ಧರ್ಮ, ಪಂಗಡ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ’ ಎಂದು ಸ್ವಾಮಿ ಪ್ರಸಾದ್ ಮೌರ್ಯ ಟ್ವೀಟ್ ಮಾಡಿದ್ದಾರೆ.
ನಾವು ದೇಶದಲ್ಲಿನ ಬಡತನ ಕಡಿಮೆ ಮಾಡಲು, ಸಮೃದ್ಧಿ ಸಾಧಿಸಲು. ನಮ್ಮ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯದ ಜೊತೆಗೆ ಉದ್ಯೋಗ ಒದಗಿಸಲು ಬಯಸುತ್ತೇವೆಯೇ ಹೊರತು ಬಾಂಬ್ ದಾಳಿ ನಡೆಸುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಹಿಂದಿ ದಿವಸ್ ಅನ್ನು ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಎಲ್ಲಾ ಶಾಲೆಗಳು, ಕಾಲೇಜುಗಳಲ್ಲಿ ಭಾಷೆಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಆಚರಿಸಲಾಗುತ್ತದೆ.
ಸೆಪ್ಟೆಂಬರ್ 14, 1949 ರಂದು, ಭಾರತೀಯ ಸಂವಿಧಾನ ಸಭೆಯು ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆ ಎಂದು ಘೋಷಿಸಿತು.ಈ ಹಿನ್ನೆಲೆಯಲ್ಲಿ ಈ ದಿನವನ್ನು ಹಿಂದಿ ದಿನವನ್ನಾಗಿ ಆಚರಿಸಲಾಗುತ್ತದೆ.
ಹಜಾರಿ ಪ್ರಸಾದ್ ದ್ವಿವೇದಿ, ಕಾಕಾ ಕಾಲೇಲ್ಕರ್, ಮೈಥಿಲಿ ಶರಣ್ ಗುಪ್ತ್ ಮತ್ತು ಸೇಠ್ ಗೋವಿಂದ್ ದಾಸ್ ಸೇರಿದಂತೆ ಬೆಯೋಹರ್ ರಾಜೇಂದ್ರ ಸಿಂಹ ಮತ್ತು ಇತರ ಕೆಲವರ ಪ್ರಯತ್ನಗಳಿಂದಾಗಿ ಹಿಂದಿಯನ್ನು ಎರಡು ಅಧಿಕೃತ ಭಾಷೆಗಳಲ್ಲಿ ಒಂದಾಗಿ ಅಂಗೀಕರಿಸಲಾಯಿತು.
‘ನಮ್ಮ ಪಾಲಿಗೆ ಭಗವದ್ಗೀತೆ, ರಾಮಾಯಣ, ಬೈಬಲ್, ಖುರಾನ್ ಎಲ್ಲವೂ ಆಗಿರುವ ಸಂವಿಧಾನ, ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಹೋರಾಟ ಮಾಡುವಂತಹ ಕಾಲ ಬಂದಿದೆ. ಎಲ್ಲರೂ ಎದ್ದೇಳಿ, ಹಳ್ಳಿ ಹಳ್ಳಿಗೆ ಹೆಜ್ಜೆ ಹಾಕಿ ಹೋರಾಟ ಮಾಡಿ. ಇಂತಹ ಕೆಟ್ಟ ಸಂಪ್ರದಾಯವನ್ನು ಕಿತ್ತೊಗೆಯೋಣ. ನಾನು ಸದಾ ನಿಮ್ಮ ಜತೆ ಇರುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದ್ದಾರೆ.
Constitution Day 2021: ವರ್ಷ 2015 ರಿಂದ, ಭಾರತವು ತನ್ನ ಸಂವಿಧಾನ ದಿನಾಚರಣೆಯನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸುತ್ತಿದೆ. ಈ ಕುರಿತು ನವೆಂಬರ್ 19, 2015ರಂದು ಸಾಮಾಜಿಕ ನ್ಯಾಯ ಸಚಿವಾಲಯ ನಿರ್ಧಾರ ಕೈಗೊಂಡಿತ್ತು.
ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದಲ್ಲಿಂದು ಸಂವಿಧಾನದ ಮೌಲ್ಯಗಳನ್ನು ಸಾರುವ ಮದುವೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮಕ್ಕೆ ಭಾವಸಂಗಮ ವಿವಾಹ ವೇದಿಕೆ,ಕರ್ನಾಟಕ ದಲಿತ ಸಂಘರ್ಷ ಸಮಿತಿ,ಲಡಾಯಿ ಪ್ರಕಾಶನ,ದಲಿತ ಕಲಾ ಮಂಡಳಿ ಗದಗ ನಂತಹ ಸಂಘಟನೆಗಳು ಸಾಕ್ಷಿಯಾದವು.
71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಭಾರತದ ಕ್ಯಾಥೊಲಿಕ್ ಚರ್ಚ್ ರಾಷ್ಟ್ರದಾದ್ಯಂತದ ಆರ್ಚ್ಬಿಷಪ್ಗಳೊಂದಿಗೆ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಆಂದೋಲನಗಳಿಗೆ ಸೇರ್ಪಡೆಗೊಳ್ಳಲಿದೆ.
ಮಹಾರಾಷ್ಟ್ರದಾದ್ಯಂತದ ವಿದ್ಯಾರ್ಥಿಗಳು ಶಾಲೆಗಳಲ್ಲಿ ಜನವರಿ 26 ರಿಂದ ಬೆಳಿಗಿನ ಸಭೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದುವುದನ್ನು ಕಡ್ಡಾಯಗೊಳಿಸಲಾತ್ತದೆ ಎಂದು ಶಿಕ್ಷಣ ಸಚಿವೆ ವರ್ಷಾ ಗಾಯಕವಾಡ್ ಮಂಗಳವಾರ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.