Constitution Day 2021: ನವೆಂಬರ್ 26 ರ ದಿನವು ಪ್ರತಿಯೊಬ್ಬ ಸ್ವತಂತ್ರ ಭಾರತೀಯನಿಗೆ ಬಹಳ ವಿಶೇಷವಾಗಿದೆ. 26 ನವೆಂಬರ್ 1949 ರಂದು, ಭಾರತದ ಸಂವಿಧಾನ (Indian Constitution) ಸಭೆಯು ತನ್ನ ಸಂವಿಧಾನವನ್ನು ಅಂಗೀಕರಿಸಿತ್ತು. ಆದರೆ, ಇದನ್ನು 26 ಜನವರಿ 1950 ರಂದು ಜಾರಿಗೆ ತರಲಾಯಿತು. ಭಾರತದ ನಾಗರಿಕರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ನೆನಪಿಸಲು ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ.
ಸಂವಿಧಾನ ದಿನವನ್ನು ಏಕೆ ಆಚರಿಸಲಾಗುತ್ತದೆ?
ದೇಶದಲ್ಲಿ ಸಂವಿಧಾನ ದಿನವನ್ನು (Constitution Day) ಆಚರಿಸುವ ಪದ್ಧತಿ ಹಳೆಯದಲ್ಲ. 2015 ರಿಂದ, ಭಾರತವು ತನ್ನ ಸಂವಿಧಾನ ದಿನವನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸುತ್ತಿದೆ. ಇದಕ್ಕಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 19 ನವೆಂಬರ್ 2015 ರಂದು ನಿರ್ಧರಿಸಿತ್ತು. ನವೆಂಬರ್ 26 ಅನ್ನು ರಾಷ್ಟ್ರೀಯ ಕಾನೂನು ದಿನ ಎಂದೂ ಕೂಡ ಕರೆಯಲಾಗುತ್ತದೆ.
ಸಂವಿಧಾನ ದಿನದ ಮಹತ್ವ
ನಮ್ಮ ದೇಶದ ಸಂವಿಧಾನ ರಚನೆಯಲ್ಲಿ ಡಾ.ಭೀಮರಾವ್ ಅಂಬೇಡ್ಕರ್ (Dr. B.R Ambedkar) ಅವರ ಕೊಡುಗೆ ಪ್ರಮುಖವಾಗಿದೆ. ಆದ್ದರಿಂದ ಡಾ.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಸಂವಿಧಾನ ದಿನಾಚರಣೆಯನ್ನು ಸಹ ಆಚರಿಸಲಾಗುತ್ತದೆ. ದೇಶದ ಯುವ ಪೀಳಿಗೆಯಲ್ಲಿ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಗೌರವದ ಭಾವನೆಯನ್ನು ಮೂಡಿಸುವ ಉದ್ದೇಶ ಇದರ ಹಿಂದೆ ಇದೆ.
ಸಂವಿಧಾನವನ್ನು ಹೇಗೆ ರಚಿಸಲಾಯಿತು
ನಮ್ಮ ದೇಶದ ಸಂವಿಧಾನವನ್ನು ರಚನೆಗೊಳ್ಳಲು 2 ವರ್ಷ, 11 ತಿಂಗಳು ಮತ್ತು 8 ದಿನಗಳನ್ನು ತೆಗೆದುಕೊಂಡಿದೆ. ಭಾರತದ ಸಂವಿಧಾನದ ಆಧಾರದ ಮೇಲೆ, ದೇಶದ ಸಂಸತ್ತಿನ ಕಾನೂನುಗಳನ್ನು ಮಾಡಲಾಗುತ್ತದೆ. ನ್ಮೂಲಕ ಈ ದೇಶದ ಸಂಪೂರ್ಣ ವ್ಯವಸ್ಥೆ ನಡೆಯುತ್ತದೆ.
ನವೆಂಬರ್ 26, 1949 ರಂದು ಸಿದ್ಧಪಡಿಸಲಾದ ನಮ್ಮ ಸಂವಿಧಾನವನ್ನು ಜನವರಿ 26, 1950 ರಂದು ಜಾರಿಗೆ ತರಲಾಯಿತು. ಈ ದಿನವನ್ನು ಗಣರಾಜ್ಯೋತ್ಸವ (Republic Day) ಎಂದು ಆಚರಿಸಲಾಗುತ್ತದೆ.
ಇದನ್ನೂ ಓದಿ-ಕೊರೊನಾ ವೈರಸ್ ನ ಅತ್ಯಂತ ಅಪಾಯಕಾರಿ ರೂಪಾಂತರಿ ಪತ್ತೆ, ತುರ್ತು ಸಭೆ ಕರೆದ WHO, ಭಾರತದಲ್ಲೂ ಅಲರ್ಟ್
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತದ ಸಂವಿಧಾನ ಏನೆಂದು ಚರ್ಚಿಸಲು ಆರಂಭಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಸಂವಿಧಾನ ರಚನಾ ಸಭೆಯ ಮೊದಲ ಸಭೆಯು 9 ಡಿಸೆಂಬರ್ 1946 ರಂದು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಒಟ್ಟು 207 ಸದಸ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ-ಮುಂಬೈ 26/11 ಭಯೋತ್ಪಾದಕ ದಾಳಿ: ಉಗ್ರರ ಅಟ್ಟಹಾಸದ ಕರಾಳ ನೆನಪಿಗೆ 13 ವರ್ಷ
ಅಂದಿನ ಕಾಲದಲ್ಲಿ ದೇಶದ ಸಂವಿಧಾನ ರಚನೆಗೆ ಸುಮಾರು 1 ಕೋಟಿ ರೂ. ವೆಚ್ಚ ತಗುಲಿತ್ತು. ಸಂವಿಧಾನದ ಮೂಲ ಪ್ರತಿಯನ್ನು ಪ್ರೇಮ್ ಬಿಹಾರಿ ನಾರಾಯಣ ರಾಯ್ಜಾದಾ ಬರೆದಿದ್ದಾರೆ. ಭಾರತದ ಸಂವಿಧಾನವು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ (Biggest Written Constitution In The World). ಸಂವಿಧಾನದ ಮೂಲ ಪ್ರತಿಯನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ-Earthquake: ಮಿಜೋರಾಂನಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.