Life story of Kannada Producer Ramesh Reddy: ಗಾಳಿಪಟ 2 ಮತ್ತು ಅರ್ಜುನ್ ಜನ್ಯ ನಿರ್ದೇಶನದ ʼ45ʼ ಸಿನಿಮಾ ಪ್ರೊಡ್ಯೂಸರ್ ಆಗಿರುವ ಈ ರಮೇಶ್ ರೆಡ್ಡಿಯವರು ಎಂಥವರಿಗೂ ಸ್ಫೂರ್ತಿಯಾಗದೆ ಇರಲಾರರು. ಗಾರೆ ಕೆಲಸದಿಂದ ಶುರುವಾದ ಇವರ ಕೆಲಸ ಈಗ ಸ್ಟಾರ್ ನಿರ್ಮಾಪಕ ಎನಿಸಿಕೊಳ್ಳುವ ಮಟ್ಟಿಗೆ ಬೆಳೆದಿದ್ದಾರೆ.
ರಮೇಶ್ ರೆಡ್ಡಿ ಹಳ್ಳಿಯೊಂದರಿಂದ ರಾಜಧಾನಿ ಬೆಂಗಳೂರಿಗೆ 1982ರಲ್ಲಿ ಬಂದುಬಿಡ್ತಾರೆ. ಆಗ ಅವರು ಹತ್ತನೇ ತರಗತಿ ಓದೋ ಹುಡುಗ. ಪ್ರಪಂಚ ಏನು ಅನ್ನೋದು ತಿಳಿದೇ ಇಲ್ಲ. ಹೇಗೋ ಜೀವನ ಸಾಗಿಸಬೇಕು ಅನ್ನೋ ಹಠಕ್ಕೆ ಬಿದ್ದ ರಮೇಶ್ ಅವ್ರು ಗಾರೆ ಕೆಲಸಕ್ಕೆ ಸೇರಿ ದುಡಿದು ಹೊಟ್ಟೆಗೆ ಹಿಟ್ಟು ತುಂಬಿಸಿಕೊಳ್ಳುತ್ತಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.