ನವದೆಹಲಿ: ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮಕ್ಕಳ ರಸ್ತೆ ಸುರಕ್ಷತೆಗಾಗಿ (Children Road Saftey) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಬೈಕ್‌ನಲ್ಲಿ ಪ್ರಯಾಣಿಸುವ 9 ತಿಂಗಳಿಂದ ನಾಲ್ಕು ವರ್ಷದ ಮಕ್ಕಳಿಗೆ ಹೊಸ ನಿಯಮಗಳನ್ನು ಅನುಸರಿಸಬೇಕು. ಹಾಗೆ ಮಾಡಲು ವಿಫಲವಾದರೆ ನೀವು ದಂಡವನ್ನು ಪಾವತಿಸಬೇಕಾಗುತ್ತದೆ.
4 ವರ್ಷ ವಯಸ್ಸಿನ ಮಗುವಿಗೆ ಈ ನಿಯಮ:
ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮಕ್ಕಳ ಮೋಟಾರ್ ಸೈಕಲ್‌ಗಳಲ್ಲಿ (Bike) ಪ್ರಯಾಣಿಸುವಾಗ ಈ ನಿಯಮಗಳು ಅನ್ವಯಿಸುತ್ತವೆ. 9 ತಿಂಗಳಿಂದ 4 ವರ್ಷದ ಮಕ್ಕಳು ಬೈಕ್‌ನಲ್ಲಿ ಪ್ರಯಾಣಿಸುವಾಗ Safety Harness ಧರಿಸುವುದು ಅವಶ್ಯಕ.
ಇದನ್ನೂ ಓದಿ: 'ಏರ್ ಇಂಡಿಯಾವನ್ನು ವಿಶ್ವ ದರ್ಜೆಗೆ ಏರಿಸಲು ಟಾಟಾ ಗ್ರೂಪ್ ಬದ್ಧ'
Safety Harness ಹಗುರವಾಗಿರಬೇಕು ಮತ್ತು ಮೆತ್ತಗಿರಬೇಕು. ಇದರಲ್ಲಿ ಮಗು ವಿಶ್ರಾಂತಿ ಪಡೆಯಬಹುದು. ಅಲ್ಲದೆ, ಅದರ ಸಾಮರ್ಥ್ಯವು 30 ಕೆಜಿ ವರೆಗೆ ಭಾರವನ್ನು ಹೊರುವಂತಿರಬೇಕು.
ಮಕ್ಕಳ ಗಾತ್ರದ ಹೆಲ್ಮೆಟ್ ಅಗತ್ಯವಿದೆ:
ಇದಲ್ಲದೆ, ಮಕ್ಕಳು ಬೈಕ್‌ನಲ್ಲಿ ಪ್ರಯಾಣಿಸುವಾಗ ಅವರ ಗಾತ್ರದ ಹೆಲ್ಮೆಟ್ ಅನ್ನು (Helmet) ಸಹ ಧರಿಸಬೇಕು. ಈ ನಿಯಮ ಜಾರಿಯಾದ ನಂತರ ಹೆಲ್ಮೆಟ್ ಮತ್ತು ಸುರಕ್ಷತಾ ಸಾಧನಗಳನ್ನು ತಯಾರಿಸುವ ಕಂಪನಿಗಳಿಗೆ ಲಾಭವಾಗಲಿದೆ. ಮಕ್ಕಳೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುವಾಗ ಗರಿಷ್ಠ ವೇಗ ಗಂಟೆಗೆ 40 ಕಿಮೀ ಮೀರಬಾರದು.
ಇದನ್ನೂ ಓದಿ: Virus alert! ಜಗತ್ತನ್ನು ಆತಂಕಕ್ಕೀಡು ಮಾಡಿರುವ ಲಸ್ಸಾ ಜ್ವರದ ಬಗ್ಗೆ ನಿಮಗೆಷ್ಟು ಗೊತ್ತು?
ಮಕ್ಕಳ ಹೆಲ್ಮೆಟ್‌ಗಳಿಗೆ ಬಿಐಎಸ್ ಪ್ರತ್ಯೇಕ ಮಾನದಂಡವನ್ನು ನೀಡಲಿದೆ. ಅಲ್ಲಿಯವರೆಗೆ, ಚಿಕ್ಕ ಹೆಲ್ಮೆಟ್‌ಗಳು ಅಥವಾ ಬೈಸಿಕಲ್ ಹೆಲ್ಮೆಟ್‌ಗಳನ್ನು ಬಳಸಬಹುದು. ರಸ್ತೆ ಸುರಕ್ಷತೆಗಾಗಿ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ (CMVR), 1989 ತಿದ್ದುಪಡಿ ತರಲು 25 ಅಕ್ಟೋಬರ್ 2021 ರಂದು ಸರ್ಕಾರವು ಮೊದಲ ಬಾರಿಗೆ ಈ ಕರಡು ಅಧಿಸೂಚನೆಯನ್ನು ತಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.