Arasikere : ಸದ್ಯಕ್ಕೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ಅರಸೀಕೆರೆಯ ಚುನಾವಣಾ ಸಂಧರ್ಭದಲ್ಲಿ ಕೃತಜ್ಞತೆಯ ಮಾಲೆಯನ್ನು ಪಡೆದುಕೊಂಡು ಸಿಎಂ ಇದು ಸರ್ಕಾರದ ಸಾಧನೆಯ ಮಾಲೆ ಎಂದಿದ್ದಾರೆ.
Lok Sabha Elections 2024: ಉಚಿತ ಬಸ್ ಪ್ರಯಾಣ , ವಿದ್ಯುತ್, ತಿಂಗಳಿಗೆ ೨ ಸಾವಿರ ಹಣ ಸಿಗುತ್ತಿರುವುದರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುವುದರ ಜೊತೆಗೆ ಕಾಂಗ್ರೆಸ್ ಬೆಂಬಲಿಸುವ ಭರವಸೆ ನೀಡುತ್ತಿದ್ದಾರೆ ಎಂದು ಸ್ಟಾರ್ ಚಂದ್ರು ಹೇಳಿದ್ದಾರೆ.
ರಾಜ್ಯದಲ್ಲಿ ಸರ್ಕಾರದ ಶಕ್ತಿ ಯೋಜನೆಗೆ ಭಾರಿ ಸ್ಪಂದನೆ 234 ಕೋಟಿ ಮೌಲ್ಯ ದಾಟಿದ ಲೇಡಿ ಪ್ರಯಾಣಿಕರ ಓಡಾಟ ಪ್ರತಿ ನಿತ್ಯ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರ ಸಂಚಾರ ಈವರೆಗೂ 9 ಕೋಟಿಗೂ ಅಧಿಕ ಮಹಿಳೆಯರ ಫ್ರೀ ಟೂರ್ ನಾಲ್ಕೂ ನಿಗಮಗಳ ಬಸ್ಗಳಲ್ಲಿ ಮಹಿಳೆಯರ ಫ್ರೀ ಪ್ರಯಾಣ
ವಿದ್ಯಾರ್ಥಿಗಳಿಗೆ ಜುಲೈ 15 ರ ವರೆಗೆ ಉಚಿತ ಬಸ್ ಪ್ರಯಾಣ ಶೈಕ್ಷಣಿಕ ವರ್ಷ ಆರಂಭ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿ ಇಂದ ಉಚಿತ ಪ್ರಯಾಣಕ್ಕೆ ಅವಕಾಶ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಹಿತಿ ಒಂದರಿಂದ ಪಿಯುಸಿ, ಸ್ನಾತಕೋತ್ತರ,ಪಿ ಹೆಚ್ ಡಿ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ತಮ್ಮ ವಾಸಸ್ಥಳದಿಂದ ಶಾಲಾ ಕಾಲೇಜು ವರೆಗೆ ಮಾತ್ರ ಉಚಿತ ಪ್ರಯಾಣ
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ್ದೇ ಮಾಡಿದ್ದು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರದ್ದೇ ದರ್ಬಾರ್.. ವೀಕೆಂಡ್ ಆಗಿರೋದ್ರಿಂದ ಮಹಿಳೆಯರು ಫ್ರೀ ಬಸ್ ಏರಿ ಪುಣ್ಯ ಕ್ಷೇತ್ರ, ಪ್ರವಾಸ ಅಂತಾ ರೌಂಡ್ಸ್ ಹಾಕ್ತಿದ್ದಾರೆ.. ಇದ್ರಿಂದಾಗಿ ಸರ್ಕಾರಿ ಬಸ್ಗಳಲ್ಲಿ ಈಗ ನೂಕುನುಗ್ಗಲು ಉಂಟಾಗ್ತಿದೆ.. ಫ್ರೀ ಬಸ್ ಸೀಟ್ ಹಿಡಿಯೋಕೆ ನೂಕುನುಗ್ಗಲಿನಲ್ಲೇ ಮಹಿಳೆಯ ಹರಸಾಹಸ ಪಡ್ತಿದ್ದಾರೆ....
ಬೆಂಗಳೂರಿನ ದೇವಾಲಯಗಳು ಎಲ್ಲಾ ಫುಲ್ ರಶ್..! ಮಹಿಳಾಮಣಿಗಳಿಂದ ದೇವಾಲಯಗಳ ರೌಂಡ್ಸ್..! ಮಹಿಳೆಯರಿಂದ ಬಂಡೆ ಮಹಾಕಾಳಿ ದೇವಾಲಯ ರಶ್ ದೇವಾಲಯದ ಒಂದು ಕಿ.ಮೀ. ವರೆಗೆ ಭಕ್ತರ ದಂಡು ಕುಟುಂಬ ಸಮೇತ ಆಗಮಿಸಿದ ದೇವಾಲಯದಲ್ಲಿ ಪೂಜೆ ಸಲ್ಲಿಕೆ ವೀಕೆಂಡ್ನಲ್ಲಿ ಟೆಂಪಲ್ ರೌಂಡ್ಗೆ ಬಿಎಂಟಿಸಿ ಬಸ್ ಬಳಕೆ ಬಿಎಂಟಿಸಿ ಬಸ್ ಉಚಿತ ಪ್ರಯಾಣ ಬಳಸ್ತಿರೋ ಲೇಡಿಸ್.!
CM Siddaramaiah: ರಾಜ್ಯದ ಎಲ್ಲ ಮಹಿಳೆಯರಿಗೆ ವೋಲ್ವೋ, ಎಸಿ ಬಸ್ ಬಿಟ್ಟು ಇತರೆ ಬಸ್ಗಳಲ್ಲಿ ಉಚಿತ ಪ್ರಯಾಣ. ರಾಜ್ಯದ ಒಳಗೆ ಮಾತ್ರ, ಬೇರೆ ರಾಜ್ಯಗಳಿಗೆ ಹೋದ್ರೆ ಇಲ್ಲ. ಹೊರ ರಾಜ್ಯಕ್ಕೆ ಹೋಗುವವರು ರಾಜ್ಯದ ಗಡಿ ವರೆಗೆ ಹೋಗಿ ನಂತರ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿ ಉಚಿತಗಳನ್ನು ಕಾಂಗ್ರೆಸ್ ಸರ್ಕಾರ ಖಚಿತಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್ 11ರಂದು ಬೆಂಗಳೂರಿನಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡುತ್ತಿದೆ. ನಾಳೆಯಿಂದ ರಾಜ್ಯಾದ್ಯಂತ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಲಿದೆ.
ಶಕ್ತಿ ಯೋಜನೆ ಅಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಜೂನ್ 11ರಂದು ಮಧ್ಯಾಹ್ನ 01 ಗಂಟೆಯಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿದೆ. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತಮ್ಮ ಮೂಲ ದಾಖಲಾತಿಗಳನ್ನು ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಕಾಂಗ್ರೆಸ್ ಸರ್ಕಾರ ಡಕೋಟಾ ಬಸ್ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ಡಕೋಟಾ ಡಕೋಟಾ ಎನ್ನುತ್ತಿದ್ದಾರೆ. ತಾಕತ್ತಿದ್ರೆ ಎಸಿ ಬಸ್ ಗಳಲ್ಲಿ ಫ್ರೀ ಆಗಿ ಮಹಿಳೆಯರಿಗೆ ಪ್ರಯಾಣ ಮಾಡಲು ಬಿಡಲಿ ಎಂದಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಗುಡ್ನ್ಯೂಸ್ಗೆ ಒಂದೇ ದಿನ ಬಾಕಿ.ಗ್ಯಾರಂಟಿ ಯೋಜನೆ ಬಗ್ಗೆ ನಾಳೆಯೇ ಅಂತಿಮ ನಿರ್ಧಾರ.ನಾಳೆ ರಾಜ್ಯದ ಜನರ ಪಾಲಿಗೆ ಆಗುತ್ತಾ ಗುಡ್ ಫ್ರೈಡೆ.? ʻಗ್ಯಾರಂಟಿʼ ಜೊತೆ ಕಂಡಿಷನ್ ಅಪ್ಲೈ ಆಗುತ್ತಾ..?
ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಮನೆ ಯಜಮಾನಿಗೆ ಎರಡು ಸಾವಿರ ರೂ. ಖಚಿತ, ಬಿಪಿಎಲ್ ಕಾರ್ಡ್ ಸದಸ್ಯರಿಗೆ 10 ಕೆಜಿ ಅಕ್ಕಿ ನಿಶ್ಚಿತ, ನಿರುದ್ಯೋಗ 3 ಸಾವಿರ ರೂ.ಖಂಡಿತ, ಸರ್ಕಾರಿ ಸಾರಿಗೆಯಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಮೇಲೆ ದಿನಗಳು ಕಳೆದಂತೆ ಒತ್ತಡ ಹೆಚ್ಚುತ್ತಿದೆ.
ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಷರತ್ತುಗಳಿಲ್ಲದೆ ಬಸ್ ಪ್ರಯಾಣ ಉಚಿತವಾಗಿರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಬುಧವಾರ ಸಭೆ ಕರೆದಿದ್ದು, ಈ ಯೋಜನೆಗೆ ತಗಲುವ ವೆಚ್ಚದ ವರದಿಯನ್ನು ಅವರಿಗೆ ಸಲ್ಲಿಸಲಾಗುವುದು ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.