Jio ಗ್ರಾಹಕರಿಗೆ ಗುಡ್ ನ್ಯೂಸ್: ಹೊಸ ವರ್ಷದಿಂದ ಉಚಿತವಾಗಲಿದೆ ಈ ಸೇವೆ..!

ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಬೇರೆ ನೆಟ್​ವರ್ಕ್​ನ ಕರೆಗಳಿಗೂ ಶುಲ್ಕ ವಿಧಿಸುವುದನ್ನ ನಿಲ್ಲಿಸಲಿದೆ

Last Updated : Dec 31, 2020, 04:12 PM IST
  • ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಬೇರೆ ನೆಟ್​ವರ್ಕ್​ನ ಕರೆಗಳಿಗೂ ಶುಲ್ಕ ವಿಧಿಸುವುದನ್ನ ನಿಲ್ಲಿಸಲಿದೆ
  • ಜಿಯೋ ಎಲ್ಲಾ ದೇಶಿ ನೆಟ್​​ವರ್ಕ್​ಗಳ ಕರೆಗೆ ವಿಧಿಸಲಾಗುತ್ತಿದ್ದ ಐಯುಸಿ ಶುಲ್ಕವನ್ನ ಕೊನೆಗೊಳಿಸಲಿದೆ.
  • ಸೆಪ್ಟೆಂಬರ್​ 19ರಂದು ಜಿಯೋ ಕಂಪನಿ ಬೇರೆ ನೆಟ್​ವರ್ಕ್​ಗೆ ಕರೆ ಮಾಡಿದರೆ ಅಂತಹ ಕರೆಗೆ ದರ ವಿಧಿಸೋದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿತ್ತು
Jio ಗ್ರಾಹಕರಿಗೆ ಗುಡ್ ನ್ಯೂಸ್: ಹೊಸ ವರ್ಷದಿಂದ ಉಚಿತವಾಗಲಿದೆ ಈ ಸೇವೆ..! title=

ಟೆಲಿಕಾಂ ಲೋಕದ ದೈತ್ಯ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಬೇರೆ ನೆಟ್​ವರ್ಕ್​ನ ಕರೆಗಳಿಗೂ ಶುಲ್ಕ ವಿಧಿಸುವುದನ್ನ ನಿಲ್ಲಿಸಲಿದೆ.

ಜನವರಿ 1ರಿಂದ ಈ ಹೊಸ ಕ್ರಮ ಜಾರಿಗೆ ಬರಲಿದೆ. ಟೆಲಿಕಾಂ ರೆಗ್ಯೂಲಾರಿಟಿ ಅಥಾರಿಟಿ ಆಫ್​ ಇಂಡಿಯಾ ಐಯುಸಿ ಶುಲ್ಕವನ್ನ ರದ್ದುಗೊಳಿಸಿದ ಹಿನ್ನೆಲೆ ಜಿಯೋ(Jio) ಎಲ್ಲಾ ದೇಶಿ ನೆಟ್​​ವರ್ಕ್​ಗಳ ಕರೆಗೆ ವಿಧಿಸಲಾಗುತ್ತಿದ್ದ ಐಯುಸಿ ಶುಲ್ಕವನ್ನ ಕೊನೆಗೊಳಿಸಲಿದೆ.

Income Tax Return Filing Online: ಮತ್ತೆ ವಿಸ್ತರಣೆಯಾದ ITR ಸಲ್ಲಿಕೆಯ ಗಡುವು

ಈ ಹೊಸ ಕ್ರಮದಿಂದ ಜಿಯೋ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಯಾವುದೇ ನೆಟ್​ವರ್ಕ್​ಗೆ ಉಚಿತ ಕರೆ ಸೌಲಭ್ಯವನ್ನ ನೀಡಿದೆ. ಜಿಯೋದಿಂದ ಜಿಯೋಗೆ ಉಚಿತ ಕರೆ ಮೊದಲಿನಿಂದಲೂ ಇದೆ. ಇದೀಗ ಅನ್ಯ ನೆಟ್ವರ್ಕ್ ಕರೆ ಉಚಿತವಾಗಿರಲಿದೆ ಎಂದು ಜಿಯೋ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಪ್ರತಿ ವಾರ ಬದಲಾಗಲಿದೆಯೇ LPG ಬೆಲೆ! ಇದರ ಸತ್ಯಾಸತ್ಯತೆ ಏನು?

ಸೆಪ್ಟೆಂಬರ್​ 19ರಂದು ಜಿಯೋ ಕಂಪನಿ ಬೇರೆ ನೆಟ್​ವರ್ಕ್​ಗೆ ಕರೆ ಮಾಡಿದರೆ ಅಂತಹ ಕರೆಗೆ ದರ ವಿಧಿಸೋದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿತ್ತು. ಆದರೆ ಇದೀಗ ತನ್ನ ನಿರ್ಧಾರವನ್ನ ಜಿಯೋ ಬದಲಾಯಿಸಿದೆ.

ಇನ್ಮುಂದೆ ಇವರಿಗೂ ಸಿಗಲಿದೆ PF ಲಾಭ, ಈ ಯೋಜನೆಯಡಿ 40 ಕೋಟಿ ಜನರು ಶಾಮೀಲು

ಡಿಜಿಟಲ್​ ಇಂಡಿಯಾ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿರುವ ಜಿಯೋ ಕಂಪನಿ ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಸೇವೆಯನ್ನ ನೀಡಲು ಶ್ರಮಿಸುತ್ತಿದೆ. ಸಾಕಷ್ಟು ಆಫರ್​ಗಳನ್ನ ನೀಡುವ ಮೂಲಕ ಜಿಯೋ ಗ್ರಾಹಕ ಸ್ನೇಹಿ ಟೆಲಿಕಾಂ ಕಂಪನಿಯಾಗಿ ಮುಂದುವರಿದಿದೆ.

Gold and Silver Rates: ಮರು ಮೆರಗು ಪಡೆಯಿತೆ ಚಿನ್ನ? ಹೊಳಪು ಕಳೆದುಕೊಂಡಿತೆ ಬೆಳ್ಳಿ? ಇಲ್ಲಿದೆ ಉತ್ತರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

iOS Link - https://apple.co/3loQYe

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News