INDIA PM candidate: ಸಿದ್ದರಾಮಯ್ಯನವರು ಕಾಂಗ್ರೆಸ್ ಬಂದ ತಕ್ಷಣ ವಿಪಕ್ಷ ನಾಯಕ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಆ ಹುದ್ದೆಗೆ ಅವರಿಗೆ ಅಡ್ಡಲಾಗಿದ್ದಿದ್ದು ಮಲ್ಲಿಕಾರ್ಜುನ್ ಖರ್ಗೆಯವರು. ಹೀಗಾಗಿ ಮಲ್ಲಿಕಾರ್ಜುನ್ ಖರ್ಗೆಯವರನ್ನು ಬೇಕಂತಲೆ ದೆಹಲಿ ರಾಜಕಾರಣಕ್ಕೆ ಕಳುಹಿಸಿ, ಈ ಮೂಲಕ 2013ರಲ್ಲಿ ಖರ್ಗೆಯವರು ಕರ್ನಾಟಕದ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ್ದು ಸಹ ಸಿದ್ದರಾಮಯ್ಯನವರೇ ಎಂದು ಬಿಜೆಪಿ ಆರೋಪಿಸಿದೆ.
HD Kumaraswamy on Dalit CM: ಈಗ ದಲಿತ ಮುಖ್ಯಮಂತ್ರಿ ಮಾಡಲು ಇದೇ ಸಕಾಲ, ದಲಿತರನ್ನೇ ಸಿಎಂ ಮಾಡಲಿ. ನುಡಿದಂತೆ ನಡೆಯುವ ಪಕ್ಷಕ್ಕೆ ಇದು ಅಸಾಧ್ಯವೇನಲ್ಲ ಅಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Karnataka CM: ಯಾರು ಸಿಎಂ ಅನ್ನೋ ಉತ್ತರ ರಾಜ್ಯದ ಜನಕ್ಕೆ ಇನ್ನು ಸಿಗಬೇಕಿದೆ. ಇದರ ಮಧ್ಯೆ ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಮುಂದುವರೆದಿದೆ. ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಹೊಸ ಬಾಂಬ್ ಒಂದನ್ನ ಸಿಡಿಸಿದ್ದಾರೆ.
ಬಿಜೆಪಿಯವ್ರು ದಲಿತ ಸಿಎಂ ಘೋಷಣೆ ಮಾಡಲಿ. ಅದು ಬಿಟ್ಟು ನಮ್ಮನ್ನು ಕೇಳೋದಕ್ಕೆ ಬಿಜೆಪಿಯವ್ರು ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕೊಪ್ಪಳದ ಬಸಾಪೂರ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಂದಿದ್ದರೂ ಕಾಂಗ್ರೆಸ್ ಮಾತ್ರ ದಲಿತರನ್ನು ಸಿಎಂ ಮಾಡೋದು ಎಂದಿದ್ದಾರೆ.
ನನಗೆ 5 ವರ್ಷ ಅಧಿಕಾರ ಕೊಡಿ. ನೀವು ನೆನಪಿನಲಿಟ್ಟುಕೊಳ್ಳುವಂತಹ ಕೆಲಸ ಮಾಡುತ್ತೇನೆ. ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಹಂಗಿನ ಸರ್ಕಾರ ಖಂಡಿತ ಬೇಡವೆಂದು ಕುಮಾರಸ್ವಾಮಿ ಹೇಳಿದ್ದಾರೆ.
ದಲಿತ ಮುಖ್ಯಮಂತ್ರಿ ವಿಚಾರವಾಗಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.