INDIA PM candidate: ಮಲ್ಲಿಕಾರ್ಜುನ್‌ ಖರ್ಗೆಗೆ ಅವಮಾನಿಸಲೆಂದೇ ಸಿಎಂ ಸಿದ್ದರಾಮಯ್ಯ ಹೇಳಿಕೆ!

INDIA PM candidate: ಸಿದ್ದರಾಮಯ್ಯನವರು ಕಾಂಗ್ರೆಸ್‌ ಬಂದ ತಕ್ಷಣ ವಿಪಕ್ಷ ನಾಯಕ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಆ ಹುದ್ದೆಗೆ ಅವರಿಗೆ ಅಡ್ಡಲಾಗಿದ್ದಿದ್ದು ಮಲ್ಲಿಕಾರ್ಜುನ್‌ ಖರ್ಗೆಯವರು. ಹೀಗಾಗಿ ಮಲ್ಲಿಕಾರ್ಜುನ್ ಖರ್ಗೆಯವರನ್ನು ಬೇಕಂತಲೆ ದೆಹಲಿ ರಾಜಕಾರಣಕ್ಕೆ ಕಳುಹಿಸಿ, ಈ ಮೂಲಕ 2013ರಲ್ಲಿ ಖರ್ಗೆಯವರು ಕರ್ನಾಟಕದ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ್ದು ಸಹ ಸಿದ್ದರಾಮಯ್ಯನವರೇ ಎಂದು ಬಿಜೆಪಿ ಆರೋಪಿಸಿದೆ.

Written by - Puttaraj K Alur | Last Updated : May 23, 2024, 07:11 PM IST
  • ದಲಿತ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ಸಿಎಂ ಸಿದ್ದರಾಮಯ್ಯನವರಿಂದ ಅವಮಾನ
  • ಪ್ರಧಾನಿ ಹುದ್ದೆಯ ರೇಸಿನ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ
  • ದಲಿತ ನಾಯಕರಿಗೆ & ದಲಿತ ಸಮುದಾಯಕ್ಕೆ ಸಿದ್ದರಾಮಯ್ಯನವರಿಂದ ಮೋಸವಾಗಿದೆ
INDIA PM candidate: ಮಲ್ಲಿಕಾರ್ಜುನ್‌ ಖರ್ಗೆಗೆ ಅವಮಾನಿಸಲೆಂದೇ ಸಿಎಂ ಸಿದ್ದರಾಮಯ್ಯ ಹೇಳಿಕೆ!  title=
ಸಿಎಂ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ಆಕ್ರೋಶ!

INDIA PM candidate: ಕೇಂದ್ರದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಸದ್ಯ ಕಾಂಗ್ರೆಸ್‌ನಲ್ಲಿರುವ ಕನ್ನಡಿಗರು ಅಸಮರ್ಥರು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿರುವುದು ಉದ್ದೇಶಪೂರ್ವಕವಾಗಿ ಮಲ್ಲಿಕಾರ್ಜುನ್ ಖರ್ಗೆಯವರನ್ನು ಅವಮಾನಿಸಲು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೆಂದು ಬಿಜೆಪಿ ಟೀಕಿಸಿದೆ.

ಪ್ರಧಾನಿ ಹುದ್ದೆಯ ರೇಸಿಗೆ ರಾಜ್ಯದಿಂದ ಯಾರೂ ಇಲ್ಲವೆಂದಿದ್ದ ಸಿಎಂ ಸಿದ್ದರಾಮಯ್ಯರ ಹೇಳಿಕೆ ವಿಚಾರವಾಗಿ ಗುರುವಾರ ಟ್ವೀಟ್‌ ಮಾಡಿರುವ ಬಿಜೆಪಿ, ʼಅಸಲಿಗೆ ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲವೆಂಬುದು ಸೂರ್ಯ-ಚಂದ್ರರು ಇರುವಷ್ಟೆ ಸತ್ಯ. ಆದರೆ ಕರ್ನಾಟಕದ ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು ಪ್ರಧಾನಿ ಹುದ್ದೆಗೆ ಸಮರ್ಥರು ಎಂಬ ಹೇಳಿಕೆಯನ್ನು ನೀಡುವಷ್ಟು ಸಿದ್ದರಾಮಯ್ಯನವರಿಗೆ ವಿಶಾಲ ಮನಸ್ಥಿತಿ ಇರದಿರುವುದು ಅವರಿಗೆ ದಲಿತ ನಾಯಕರ ಹಾಗೂ ಆ ಸಮುದಾಯದ ಮೇಲಿರುವ ಅಸಡ್ಡೆಯ ಪ್ರತೀಕʼವೆಂದು ಕುಟುಕಿದೆ.

ಇದನ್ನೂ ಓದಿ: ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿರುವ ಸಿಎಂ

ಕಾಂಗ್ರೆಸ್‌ ಪಕ್ಷಕ್ಕೆ ದಲಿತರು ನೆನಪಾಗುವುದು ಕೇವಲ ಚುನಾವಣಾ ಸಮಯದಲ್ಲಿ ಮಾತ್ರ. ಚುನಾವಣೆಯಲ್ಲಿ ದಲಿತರನ್ನು ಕೇವಲ ವೋಟ್‌ ಬ್ಯಾಂಕ್‌ಗೆ ಬಳಸಿಕೊಳ್ಳುವ ಕಾಂಗ್ರೆಸ್‌ ಚುನಾವಣೆಯ ಬಳಿಕ ಹೀನಾಯವಾಗಿ ನಡೆಸಿಕೊಂಡಿರುವದು ಕಾಂಗ್ರೆಸ್‌ನ ಇತಿಹಾಸವನ್ನೊಮ್ಮೆ ಗಮನಿಸಿದರೆ ಸಾಕು ನಮಗೆ ತಿಳಿಯುತ್ತದೆ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಂದ ಶುರುವಾಗಿ ಇತ್ತೀಚಿನ ದಲಿತ ನಾಯಕರಿಗೂ ಕಾಂಗ್ರೆಸ್‌ ಪಕ್ಷ ನೀಡಿದ್ದು ಕೇವಲ ಮಹಾದ್ರೋಹದ ಉಡುಗೊರೆ. ಇನ್ನು ದಲಿತ ನಾಯಕರನ್ನು ರಾಜಕೀಯವಾಗಿ ಮುಗಿಸುವುದನ್ನೇ ತಮ್ಮ ರಾಜಕೀಯದ ಪ್ರಮುಖ ಪಟ್ಟನ್ನಾಗಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯರ ದಲಿತ ವಿರೋಧಿ ನೀತಿ ನಿಜಕ್ಕೂ ಭಯಾನಕʼವೆಂದು ಬಿಜೆಪಿ ಕಿಡಿಕಾರಿದೆ.

ʼಅಹಿಂದ ಹೆಸರೇಳಿ ನಿರಂತರವಾಗಿ ರಾಜಕೀಯ ಮಾಡಿಕೊಂಡು ಫಲಾನುಭವಿಯಾದ ಸಿದ್ದರಾಮಯ್ಯನವರು ಅವಕಾಶ ಸಿಕ್ಕಾಗಲೆಲ್ಲಾ ಅಹಿಂದದಲ್ಲಿನ “ದ”ವನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದರು.  ಸಿದ್ದರಾಮಯ್ಯನವರ ಈ ದಲಿತ ವಿರೋಧಿ ರಾಜಕಾರಣಕ್ಕೆ ಸಿಲುಕಿ ಪ್ರಬಲವಾಗಿ ಬೆಳೆಯಬೇಕಾಗಿದ್ದ ರಾಜ್ಯದ ಹಲವಾರು ಜನ ದಲಿತ ನಾಯಕರು ಬಹುತೇಕ ಅಸ್ತಿತ್ವ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯನವರು ಕಾಂಗ್ರೆಸ್‌ ಬಂದ ತಕ್ಷಣ ವಿಪಕ್ಷ ನಾಯಕ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಆ ಹುದ್ದೆಗೆ ಅವರಿಗೆ ಅಡ್ಡಲಾಗಿದ್ದಿದ್ದು ಮಲ್ಲಿಕಾರ್ಜುನ್‌ ಖರ್ಗೆಯವರು. ಹೀಗಾಗಿ ಮಲ್ಲಿಕಾರ್ಜುನ್ ಖರ್ಗೆಯವರನ್ನು ಬೇಕಂತಲೆ ದೆಹಲಿ ರಾಜಕಾರಣಕ್ಕೆ ಕಳುಹಿಸಿ, ಈ ಮೂಲಕ 2013ರಲ್ಲಿ ಖರ್ಗೆಯವರು ಕರ್ನಾಟಕದ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ್ದು ಸಹ ಸಿದ್ದರಾಮಯ್ಯನವರೇʼ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ಮತ್ತೊಮ್ಮೆ ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ʼಇನ್ನು 2013ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್‌ ಕೊರಟಗೆರೆಯಲ್ಲಿ ಗೆದ್ದರೆ, ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯಾಗುತ್ತಾರೆಂಬ ಕಾರಣಕ್ಕೆ ಕೊರಟಗೆರೆಯಲ್ಲಿ ಅವರನ್ನು ಸೋಲಿಸಿದ್ದು ಸಹ ಸಿದ್ದರಾಮಯ್ಯನವರೇ ಎಂಬುದನ್ನು ಕೊರಟಗೆರೆಯ ಜನ ಇಂದಿಗೂ ಮಾತನಾಡುತ್ತಾರೆ. ಆರು ಬಾರಿ ಸಂಸದ ಕೆ.ಎಚ್.ಮುನಿಯಪ್ಪನವರನ್ನು ಕೋಲಾರಕ್ಕಷ್ಟೇ ಸೀಮಿತಗೊಳಿಸಿದ್ದು, ತಮ್ಮ ಬಹುಕಾಲದ ಒಡನಾಡಿ ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಅವಮಾನಿಸಿ ಕಾಂಗ್ರೆಸ್‌ ತೊರೆಯುವಂತೆ ಮಾಡಿದ್ದು, ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಮತಾಂಧ ಜಿಹಾದಿಗಳನ್ನು ಮೆಚ್ಚಿಸಲು ದಲಿತ ಶಾಸಕನಿಗೆ ಟಿಕೇಟ್‌ ತಪ್ಪಿಸಿದ್ದು ಹೀಗೆ ದಲಿತರಿಗೆ ಸಿದ್ದರಾಮಯ್ಯನವರು ಮಾಡಿದ ದ್ರೋಹದ ಪಟ್ಟಿ ಉದ್ದುದ್ದ ಬೆಳೆಯುತ್ತದೆʼ ಎಂದು ಬಿಜೆಪಿ ಟ್ವೀಟ್‌ ಮಾಡಿದೆ. 

ʼದಲಿತ ನಾಯಕರನ್ನು ತುಳಿದ ಸಿದ್ದರಾಮಯ್ಯನವರು ಈ ಅವಧಿಯಲ್ಲಿ ದಲಿತ ಸಮುದಾಯವನ್ನು ಸಹ ತುಳಿದಿರುವುದು ಅತ್ಯಂತ ವಿಪರ್ಯಾಸ. ದಲಿತರ ಕಲ್ಯಾಣಕ್ಕೆ ಮೀಸಲಾಗಿದ್ದ SCSP/TSPಯ ₹25 ಸಾವಿರ ಕೋಟಿಯನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದು ಸಿದ್ದರಾಮಯ್ಯನವರ ದಲಿತ ವಿರೋಧಿ ಮನಸ್ಥಿತಿಯ ಸುಸ್ಪಷ್ಟ ನಿದರ್ಶನ. ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾದರೆ ತಾವು ಸ್ವಾಗತಿಸುತ್ತೇವೆಂದು ಭಾಷಣ ಬಿಗಿದಿದ್ದ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆಂದು ತಮ್ಮ ವಂಧಿಮಾಗದರಿಂದ ಹೇಳಿಸುತ್ತಿರುವುದು ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ತಾವು “ಸಿದ್ದ”ರಿಲ್ಲ ಎಂಬುದರ ಸೂಚಕವಷ್ಟೆ ಎಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News