ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರೇ ಸಿಎಂ ಎಂದು ಘೋಷಿಸುವ ಧೈರ್ಯ ಇದೆಯೇ ಸಿದ್ದರಾಮಯ್ಯ?: ಬಿಜೆಪಿ

ದಲಿತರು ಗ್ರಾಮ ಪಂಚಾಯತ್‌ ಅಧ್ಯಕ್ಷರಾದರೂ ಸಹಿಸಿಕೊಳ್ಳಲಾಗದ ಮನಃಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಬಿಜೆಪಿ ಕಿಡಿಕಾರಿದೆ.

Written by - Zee Kannada News Desk | Last Updated : Nov 16, 2021, 02:39 PM IST
  • ಕಳೆದೊಂದು ದಶಕದಿಂದ‌ ಕಾಂಗ್ರಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ವಾದ ಜೀವಂತವಾಗಿದೆ
  • ದಲಿತರಿಗೆ ಪಂಚಾಯತ್ ಅಧಿಕಾರ ಕೊಡುವುದಕ್ಕೇ ಒಪ್ಪದ ಕಾಂಗ್ರೆಸಿಗರು ದಲಿತ ಸಿಎಂ ವಾದ ಒಪ್ಪುತ್ತಾರೆಯೇ?
  • ನಿಜವಾದ ಕಾಳಜಿ ಇದ್ದರೆ ದಲಿತರೇ ಮುಂದಿನ ಸಿಎಂ ಎಂದು ಘೋಷಿಸಿ ಎಂದು ಸಿದ್ದರಾಮಯ್ಯಗೆ ಬಿಜೆಪಿ ಸವಾಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರೇ ಸಿಎಂ ಎಂದು ಘೋಷಿಸುವ ಧೈರ್ಯ ಇದೆಯೇ ಸಿದ್ದರಾಮಯ್ಯ?: ಬಿಜೆಪಿ title=
ಸಿದ್ದರಾಮಯ್ಯಗೆ ಬಿಜೆಪಿ ದಲಿತ ಸಿಎಂ ಸವಾಲು ಹಾಕಿದೆ

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ ಸಮುದಾಯದವರೇ ಮುಖ್ಯಮಂತ್ರಿ(Dalit Community CM) ಆಗಲಿದ್ದಾರೆ ಎಂದು ಘೋಷಿಸುವ ಧೈರ್ಯ ಇದೆಯಾ ಸಿದ್ದರಾಮಯ್ಯ? ಎಂದು ಬಿಜೆಪಿ ಪ್ರಶ್ನಿಸಿದೆ. ಮಂಗಳವಾರ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ದಲಿತರ ವಿಚಾರದಲ್ಲಿ ಇನ್ನೆಷ್ಟು ದಿನ ಆತ್ಮವಂಚನೆ ಮಾಡುತ್ತೀರಿ?’ ಎಂದು ಟೀಕಿಸಿದೆ.

‘ಕಳೆದೊಂದು ದಶಕದಿಂದ‌ ಕಾಂಗ್ರಸ್ ಪಕ್ಷದಲ್ಲಿ #ದಲಿತಮುಖ್ಯಮಂತ್ರಿ ವಾದ ಜೀವಂತವಾಗಿದೆ. ಆದರೆ ಕಾಂಗ್ರೆಸ್ ವರಿಷ್ಠರಾಗಲಿ, ತಾನೇ ದಲಿತ ಎಂದು ಪೋಸು ಕೊಡುವ #ಬುರುಡೆರಾಮಯ್ಯ(Siddaramaiah) ಅವರಾಗಲಿ ಇದುವರೆಗೆ ಈ ವಾದವನ್ನು ಶಮನಗೊಳಿಸುವ ಪ್ರಯತ್ನ ನಡೆಸಿಲ್ಲ. ದಲಿತರ ವಿಚಾರದಲ್ಲಿ ಇನ್ನೆಷ್ಟು ದಿನ ಆತ್ಮವಂಚನೆ ಮಾಡುತ್ತೀರಿ?’ ಎಂದು ಬಿಜೆಪಿ ಕಿಡಿಕಾರಿದೆ.

G Parameshwara

ಇದನ್ನೂ ಓದಿ: ನಕಲಿ ಗಾಂಧಿಗಳ ಪಾದ ಪೂಜೆ ಮಾಡುತ್ತಿರುವುದ್ಯಾರು?: ಡಿಕೆಶಿಗೆ ಬಿಜೆಪಿ ಟಾಂಗ್

‘ದಲಿತರು ಮುಖ್ಯಮಂತ್ರಿ(Dalit CM)ಯಾದರೆ ಸಂತೋಷ, ಸ್ವಾಗತ ಎಂದೆಲ್ಲ ಭಾಷಣ ಬಿಗಿಯುವ #ಬುರುಡೆರಾಮಯ್ಯ ಅವರೇ, ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಎಂಬ ಜಿ.ಪರಮೇಶ್ವರ್‌(G Parameshwara) ಅವರ ಹೇಳಿಕೆ ಗಮನಿಸಿದ್ದೀರಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ಸಮುದಾಯದವರೇ ಸಿಎಂ ಆಗಲಿದ್ದಾರೆ ಎಂದು ಘೋಷಿಸುವ ಧೈರ್ಯ ಇದೆಯೇ ಸಿದ್ದರಾಮಯ್ಯ?. ದಲಿತರು ಗ್ರಾಮ ಪಂಚಾಯತ್‌ ಅಧ್ಯಕ್ಷರಾದರೂ ಸಹಿಸಿಕೊಳ್ಳಲಾಗದ ಮನಃಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿದೆ. ಬಾಗಲೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಘಟನೆ ಅತ್ಯಂತ ಅಮಾನವೀಯವಾದದ್ದು. ದಲಿತರಿಗೆ ಪಂಚಾಯತ್ ಅಧಿಕಾರ ಕೊಡುವುದಕ್ಕೇ ಒಪ್ಪದ ಕಾಂಗ್ರೆಸಿಗರು #ದಲಿತಮುಖ್ಯಮಂತ್ರಿ ವಾದ ಒಪ್ಪುತ್ತಾರೆಯೇ?’ ಎಂದು ಬಿಜೆಪಿ(Karnataka BJP) ಕುಟುಕಿದೆ.  

G Parameshwara

‘2013ರ ವಿಧಾನಸಭಾ ಚುನಾವಣೆ(2013 Vidhan Sabha Election)ಯಲ್ಲಿ ಕಾಂಗ್ರೆಸ್ ಗೆಲ್ಲುವುದರ ಹಿಂದೆ ಜಿ.ಪರಮೇಶ್ವರ್ ಅವರ ತನು, ಮನ, ಧನದ ಕೊಡುಗೆ ಇತ್ತಲ್ಲವೇ ಸಿದ್ದರಾಮಯ್ಯ? ಆದರೆ ಸಿಎಂ ಹುದ್ದೆ ಪಡೆಯುವುದಕ್ಕಾಗಿ ನೀವು ಅವರನ್ನು ಸಂಚು ಮಾಡಿ ಸೋಲಿಸಿದಿರಿ. ದಲಿತ ಸಮುದಾಯದ ಕನಸಿಗೆ ಮುಳ್ಳಾದವರು ನೀವು. ಒಮ್ಮೆಯೂ ನಿಮಗೆ ಪಾಪ ಪ್ರಜ್ಞೆ ಕಾಡಿಲ್ಲವೇ?. ಹೊಟ್ಟೆಪಾಡಿಗಾಗಿ ದಲಿತ ನಾಯಕರು ಬಿಜೆಪಿಗೆ ಹೋದರು ಎಂದು ಅವಮಾನ ಮಾಡಿದ ಸಿದ್ದರಾಮಯ್ಯನವರೇ, ದಲಿತ ನಾಯಕ ಪರಮೇಶ್ವರ್ ಅವರನ್ನು ಸಂಚು ಮಾಡಿ ಸೋಲಿಸಿದರು. ಈಗ ನಾನೂ ಕೂಡ ದಲಿತ, ದಲಿತರ ನೋವು ಗೊತ್ತೆಂದು ಕತೆ ಹೇಳುವುದು ಎಷ್ಟು ಸರಿ? ನಿಜವಾದ ಕಾಳಜಿ ಇದ್ದರೆ ದಲಿತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ’ ಎಂದು ಬಿಜೆಪಿ ಸವಾಲು ಹಾಕಿದೆ.

ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News