ATM card Vs Debit card Vs Credit Card: ಡಿಜಿಟಲ್ ಬ್ಯಾಂಕಿಂಗ್ (Online Banking) ಯುಗದಲ್ಲಿ, ಬ್ಯಾಂಕುಗಳು ಅಥವಾ ಇತರ ಹಣಕಾಸು ಸಂಸ್ಥೆಗಳು ಕಾರ್ಡ್ ಆಧಾರಿತ ವಹಿವಾಟುಗಳನ್ನು ನಡೆಸುತ್ತಿವೆ. ಇದರ ಅಡಿಯಲ್ಲಿ ಜನರು ಎಟಿಎಂ ಕಾರ್ಡ್ಗಳು, ಡೆಬಿಟ್ ಕಾರ್ಡ್ಗಳು ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕ ಹಣದ ವ್ಯವಹಾರ ನಡೆಸುತ್ತಾರೆ.
ನೀವೂ ಸಹ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು(Debit-Credit Card) ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ. ವಾಸ್ತವವಾಗಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಆನ್ಲೈನ್ ಸೇವೆಯನ್ನು ಮಾರ್ಚ್ 16 ರಿಂದ ನಿಲ್ಲಿಸಲಾಗುವುದು.
ಒಂದು ವೇಳೆ ನೀವು ನಿಮ್ಮ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಿಂದ ಒಂದು ಬಾರಿಯೂ ಕೂಡ ಆನ್ಲೈನ್ ವ್ಯವಹಾರ ನಡೆಸಿಲ್ಲ ಎಂದಾದಲ್ಲಿ ಈ ಸುದ್ದಿ ನಿಮಗೆ ತಿಳಿಯುವುದು ಅವಶ್ಯಕವಾಗಿದೆ.
ನೀವು ಎಂದಾದರೂ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯನ್ನು ಗಮನವಿಟ್ಟು ನೋಡಿದ್ದೀರಾ? ಒಂದು ವೇಳೆ ನೋಡಿದ್ದರೂ ಕೂಡ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯ ಹಿಂದೆ ಅಡಗಿರುವ ಈ ಮಾಹಿತಿ ನಿಮಗೆ ತಿಳಿದಿದೆಯಾ? ಇಲ್ಲ ಎಂದಾದರೆ ಈ ಲೇಖನ ತಪ್ಪದೆ ಓದಿ.
16 ಮಾರ್ಚ್ 2020 ರಿಂದ ಹೊಸ ಕಾರ್ಡ್ಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಹಳೆಯ ಕಾರ್ಡ್ ಬಳಕೆದಾರರು ಈ ಯಾವುದೇ ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬಹುದಾಗಿದೆ.
ಎಟಿಎಂ ಕಾರ್ಡ್ (ATM card), ಡೆಬಿಟ್ ಕಾರ್ಡ್ (Debit card) ಮತ್ತು ಕ್ರೆಡಿಟ್ ಕಾರ್ಡ್ (Credit card) ಮೂಲಕ ನಾವು ಹಣದ ವ್ಯವಹಾರ ಮಾಡಿದರೂ ಈ ವಿಭಿನ್ನ ಕಾರ್ಡ್ಗಳಲ್ಲಿ ವ್ಯತ್ಯಾಸವಿದೆ.
ಕ್ರೆಡಿಟ್ ಕಾರ್ಡ್ ಬಳಸುವ ಮೊದಲು, ನೀವು ಸಮಯಕ್ಕೆ ಪಾವತಿಸಲು ಸಾಧ್ಯವಾಗುತ್ತದೆ ಅಥವಾ ಇಲ್ಲವೇ ಎಂದು ಯೋಚಿಸಿ. ಸಮಯಕ್ಕೆ ಸರಿಯಾಗಿ ಪಾವತಿಸದ ಕಾರಣ ನೀವು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಮರೆಯದಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.