ನೀವು ಐಸಿಐಸಿಐ ಬ್ಯಾಂಕ್ ಅಥವಾ ಎಸ್ಬಿಐ ಅಥವಾ ಇನ್ನಾವುದೇ ಬ್ಯಾಂಕಿನ ಗ್ರಾಹಕರಾಗಿದ್ದರೆ, ಸೆಪ್ಟೆಂಬರ್ 30 ರಿಂದ ನಿಮ್ಮ ಕಾರ್ಡ್ನೊಂದಿಗೆ ಅಂತರರಾಷ್ಟ್ರೀಯ ವಹಿವಾಟು ಸೇವೆಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ಸಂದೇಶವನ್ನು ನೀವು ಸ್ವೀಕರಿಸಿದ್ದಿರಬೇಕು. ಆದರೆ ಇದರಿಂದ ನೀವು ಭಯಪಡುವ ಅಗತ್ಯವಿಲ್ಲ. ಕಾರಣ ಇದು ಕೇವಲ ನಿಮ್ಮ ಸುರಕ್ಷತೆಗಾಗಿ ಮಾತ್ರ ಮಾಡಲಾಗಿದೆ.
ವರ್ಷದ ಮೊದಲ ತ್ರೈಮಾಸಿಕದಲ್ಲೇ ನಿಯಮಗಳ ಬದಲಾವಣೆ ಆಗಬೇಕಿತ್ತು. ಆದರೆ ಕೋವಿಡ್ -19 ಕಾರಣ ಅದನ್ನು ಮುಂದೂಡಲಾಯಿತು. ಆರ್ಬಿಐ ತನ್ನ ಗಡುವನ್ನು ಸೆಪ್ಟೆಂಬರ್ 30 ರಂದು ನಿಗದಿಪಡಿಸಿತ್ತು.
ATM ನಿಂದ ಹಣ ವಿಥ್ ಡ್ರಾ ಮಾಡಲು ಹೋದಾಗ ಎಂದಾದರು ನಿಮ್ಮ ಡೆಬಿಟ್ ಕಾರ್ಡ್ ಏಟಿಎಂನಲ್ಲಿಯೇ ಸಿಲುಕಿಕೊಂಡ ಘಟನೆ ನಿಮ್ಮ ಜೊತೆಗೆ ನಡೆದಿದೆಯೇ? ಒಂದು ವೇಳೆ ಇಂತಹ ಘಟನೆ ನಿಮ್ಮ ಜೊತೆ ಘಟಿಸಿದರೆ ನೀವೇನು ಮಾಡುವಿರಿ? ಇಂತಹುದರಲ್ಲಿ ನೀವು ಏಟಿಎಂ ಹೊರಗೆ ಕುಳಿತ ಗಾರ್ಡ್ ನಿಂದ ಇದರ ಮಾಹಿತಿ ಪಡೆಯುವಿರೋ ಅಥವಾ ಏನೂ ತೊಚದೆ ಮಶೀನ್ ಅಕ್ಕ-ಪಕ್ಕದಲ್ಲಿಯೇ ನೀಲ್ಲುವಿರೋ..? ಈ ವರದಿಯನ್ನೊಮ್ಮೆ ಓದಿ
ಆನ್ಲೈನ್ನಲ್ಲಿ ಶಾಪಿಂಗ್ ಮಾಡುವಾಗ ವ್ಯವಹಾರವು ಹಲವು ಬಾರಿ ಸಿಲುಕಿಕೊಳ್ಳುತ್ತದೆ. ಕೆಲವೊಮ್ಮೆ ಈ ಸಮಸ್ಯೆ ತಾಂತ್ರಿಕವಾಗಿ ಸಂಭವಿಸಬಹುದು, ಆದರೆ ಕೆಲವೊಮ್ಮೆ ನೀವು ಹ್ಯಾಕರ್ಗಳ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ.
ನೀವು ಎಸ್ಬಿಐ ಕಾರ್ಡ್ಗಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಈಗ ಯಾವುದೇ ದಾಖಲೆಗಳಿಲ್ಲದೆ ಅದನ್ನು ನಿಮಗೆ ನೀಡಲಾಗುತ್ತದೆ. ಹೌದು, ಎಸ್ಬಿಐ ಕಾರ್ಡ್ ವೀಡಿಯೊ ಮೂಲಕ ನಿಮ್ಮ ಕೆವೈಸಿ ನಿಯಮವನ್ನು ಪೂರೈಸುವ ಸೌಲಭ್ಯವನ್ನು ಪ್ರಾರಂಭಿಸಿದೆ.
ಲಾಕ್ ಡೌನ್ ಘೋಷಣೆಯಾದ ಬಳಿಕ ಮೊದಲ ತಿಂಗಳು ಅಂದರೆ ಏಪ್ರಿಲ್ ತಿಂಗಳಿನಲ್ಲಿ ಕ್ರೆಡಿಟ್ ಕಾರ್ಡ್ ನಿಂದಾಗುವ ಖರೀದಿಯಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. ಇನ್ನೊಂದೆಡೆ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಹಾಗೂ ಆನ್ಲೈನ್ ಕ್ಲಾಸೆಸ್ ಗಳಲ್ಲಿ ಗ್ರೋಥ್ ಗಮನಿಸಲಾಗಿದೆ.
ದೇಶಾದ್ಯಂತ ಹೆಚ್ಚುತ್ತಿರುವ ಎಟಿಎಂ ವಂಚನೆಗೆ ಸಂಬಂಧಿಸಿದಂತೆ ಬ್ಯಾಂಕ್ ಕಾಲಕಾಲಕ್ಕೆ ತನ್ನ ಗ್ರಾಹಕರಿಗೆ ಎಚ್ಚರಿಕೆಗಳನ್ನು ನೀಡುತ್ತಲೇ ಇರುತ್ತದೆ. ಇಂತಹುದರಲ್ಲಿ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್ ಅನೇಕ ಬಾರಿ ನಿಮ್ಮ ಬಳಿಯೇ ಇದ್ದರೂ ಕೂಡ ನಿಮ್ಮ ಖಾತೆಯಿಂದ ಹಣ ಖಾಲಿಯಾಗುತ್ತದೆ. ಇತ್ತೀಚಿಗೆ ದೇಶಾದ್ಯಂತ ಇಂತಹ ಫ್ರಾಡ್ ಗಳು ಹೆಚ್ಚುತ್ತಲೇ ಇವೆ. ಹಾಗಾದರೆ ಬನ್ನಿ ಈ ರೀತಿಯ ಫ್ರಾಡ್ ಗಳು ಹೇಗೆ ನಡೆಯುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಕ್ರೆಡಿಟ್ ಕಾರ್ಡ್ಗಳು ವಿಭಿನ್ನ ರೂಪಾಂತರಗಳಲ್ಲಿದ್ದರೆ ಇದಕ್ಕಾಗಿ ಶುಲ್ಕಗಳು ಸಹ ವಿಭಿನ್ನವಾಗಿರುತ್ತದೆ. ಬ್ಯಾಂಕಿನ ಪರವಾಗಿ ಈ ಶುಲ್ಕವನ್ನು ನೇರವಾಗಿ ಕಾರ್ಡುದಾರರ ಖಾತೆಯಿಂದ ತೆಗೆದುಕೊಳ್ಳಲಾಗುತ್ತದೆ, ಅವರ ಮಾಹಿತಿಯನ್ನು ಆ ತಿಂಗಳ ಹೇಳಿಕೆಯಲ್ಲಿ ನೀಡಲಾಗಿದೆ.
ತುಂಬಾ ಅನಿಶ್ಚಿತತೆಗಳಿಂದ ಕೂಡಿದ ಈ ಯುಗದಲ್ಲಿ ಆರೋಗ್ಯದ ವಿಷಯವಾಗಲಿ ಅಥವಾ ಜೀವನದ ವಿಷಯವಾಗಲಿ, ವಿಮಾ ಪಾಲಸಿಯ ಅಗತ್ಯತೆ ಹೆಚ್ಚುತ್ತಿದೆ. ವಿಮಾ ರಕ್ಷಣೆ ಆಕಸ್ಮಿಕ ಸಾವು ಅಥವಾ ಅನಾರೋಗ್ಯದಲ್ಲಿ ಒಬ್ಬ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುತ್ತದೆ. ಜೀವ ವಿಮೆ ಅಥವಾ ಆರೋಗ್ಯ ವಿಮೆಯ ಲಾಭ ಪಡೆಯಲು, ಪ್ರೀಮಿಯಂಗಳನ್ನು ಸರಿಯಾದ ಸಮಯಕ್ಕೆ ಪಾವತಿಸುವುದು ತುಂಬಾ ಅವಶ್ಯಕವಾಗಿದೆ. ಆದರೆ ಕೆಲವು ವಿಷಯಗಳು ಅಥವಾ ಸೇವೆಗಳ ಮೇಲೆ ಉಚಿತ ಜೀವನ ಅಥವಾ ಆರೋಗ್ಯ ವಿಮೆ ಲಭಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ಈ ರೀತಿಯ 5 ಉಚಿತ ವಿಮಾ ರಕ್ಷಣೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ನಿಮ್ಮ ವ್ಯವಹಾರವನ್ನು ಸುರಕ್ಷಿತಗೊಳಿಸುವುದು ಹಾಗೂ ಸಂಪರ್ಕ ರಹಿತಗೊಳಿರುವುದು ಇದು ಇದರ ಮುಖ್ಯ ಉದ್ದೇಶವಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಮತ್ತು ಅದರ ಬಳಿಕ ಈ ಕ್ರಮ ತುಂಬಾ ಸಹಕಾರಿಯಾಗಲಿದೆ.
ದುರದೃಷ್ಟವಶಾತ್ ನಿಮ್ಮ ಕ್ರೆಡಿಟ್ ಕಾರ್ಡ್ (Credit Card) ಅಥವಾ ಡೆಬಿಟ್ ಕಾರ್ಡ್ (Debit Card) ಕಳೆದುಹೋದರೆ ನೀವು ವಿಳಂಬಮಾಡದೆ ಈ ಬಗ್ಗೆ ದೂರು ನೀಡಬೇಕು. ಹೀಗೆ ಮಾಡುವುದರಿಂದ ನೀವು ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು ಮತ್ತು ಬ್ಯಾಂಕ್ ನಿಮಗೆ ಹೊಸ ಕಾರ್ಡ್ ನೀಡುತ್ತದೆ.
ಕೇಂದ್ರ ಸರ್ಕಾರ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಮಾರ್ಚ್ 16 ರಂದು ಐದು ಹೊಸ ನಿಯಮಗಳನ್ನು ಹೊರಡಿಸಿತ್ತು. ಆದಾಗ್ಯೂ ಸಾಕಷ್ಟು ಜನರಿಗೆ ಈ ನಿಯಮಗಳ ಬಗ್ಗೆ ಮಾಹಿತಿ ದೊರೆತಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.