ನಿಮ್ಮ ATM ಕಾರ್ಡ್ ನಂಬರ್ ಹಿಂದೆ ಅಡಗಿರುವ ಈ ಮಾಹಿತಿ ನಿಮಗೆ ಗೊತ್ತೇ?

ನೀವು ಎಂದಾದರೂ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯನ್ನು ಗಮನವಿಟ್ಟು ನೋಡಿದ್ದೀರಾ? ಒಂದು ವೇಳೆ ನೋಡಿದ್ದರೂ ಕೂಡ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯ ಹಿಂದೆ ಅಡಗಿರುವ ಈ ಮಾಹಿತಿ ನಿಮಗೆ ತಿಳಿದಿದೆಯಾ? ಇಲ್ಲ ಎಂದಾದರೆ ಈ ಲೇಖನ ತಪ್ಪದೆ ಓದಿ.

Last Updated : Jan 30, 2020, 07:09 PM IST
ನಿಮ್ಮ ATM ಕಾರ್ಡ್ ನಂಬರ್ ಹಿಂದೆ ಅಡಗಿರುವ ಈ ಮಾಹಿತಿ ನಿಮಗೆ ಗೊತ್ತೇ? title=

ಡಿಜಿಟಲ್ ವ್ಯವಹಾರದ ಇಂದಿನ ಕಾಲದಲ್ಲಿ ಜನರು ಬ್ಯಾಂಕ್ ಗೆ ಹೋಗುವುದು ತುಂಬಾ ವಿರಳ. ಮೊದಲು ವ್ಯವಹಾರ ನಡೆಸಲು ಪಾಸ್ ಬುಕ್ ಹಾಗೂ ಚೆಕ್ ಗಳ ಅಗತ್ಯ ಇರುತ್ತಿತ್ತು. ಆದ್ರೆ, ಇಂದಿನ ಡಿಜಿಟಲ್ ಯುಗದಲ್ಲಿ ಕೇವಲ ಡೆಬಿಟ್ ಕಾರ್ಡ್ ಒಂದೇ ಸಾಕಾಗಿದೆ. ಭಾರತದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಬಳಿ ಇಂದು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಇವೆ. ಇವಗಳನ್ನು ಬಳಸಿ ಜನರು ತಮ್ಮ ಎಲ್ಲ ರೀತಿಯ ಹಣಕಾಸಿನ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಕಾರ್ಡ್ ಗಳಲ್ಲಿ ಅಡಗಿರುವ ತಮ್ಮ ಫೈನಾನ್ಸಿಯಲ್ ಸ್ಟೇಟಸ್ ಬಗ್ಗೆ ಬಹಳಷ್ಟು ಕಡಿಮೆ ಜನರಿಗೆ ತಿಳಿದಿದೆ. ನೀವು ಎಂದಾದರೂ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯನ್ನು ಗಮನವಿಟ್ಟು ನೋಡಿದ್ದೀರಾ? ಒಂದು ವೇಳೆ ನೋಡಿದ್ದರೂ ಕೂಡ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯ ಹಿಂದೆ ಅಡಗಿರುವ ಈ ಮಾಹಿತಿ ನಿಮಗೆ ತಿಳಿದಿದೆಯಾ? ಇಲ್ಲ ಎಂದಾದಲ್ಲಿ ಇಲ್ಲಿದೆ ವರದಿ.

ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಮೇಲೆ ನೀಡಲಾಗಿರುವ ನಂಬರ್ ಗೆ ಒಂದು ಅರ್ಥ ಇದೆ. ಈ ನಂಬರ್ ಅನ್ನು ಕೋಡಿಂಗ್ ಮಾಡಲಾಗಿರುತ್ತದೆ. ಈ ಸಂಖ್ಯೆಯಲ್ಲಿ ನಿಮ್ಮ ಅಕೌಂಟ್ ಜೊತೆ ಕಾರ್ಡ್ ಜಾರಿಗೊಳಿಸಿರುವ ಕಂಪನಿಯ ಸಂಪೂರ್ಣ ಡಿಟೇಲ್ ಅಡಗಿರುತ್ತದೆ.

ಡೆಬಿಟ್/ಕ್ರೆಡಿಟ್ ಕಾರ್ಡ್ ನ ಮೊದಲ ನಂಬರ್
ಡೆಬಿಟ್/ಅಥವಾ ಕ್ರೆಡಿಟ್ ಕಾರ್ಡ್ ನ ಮೊದಲ ಸಂಖ್ಯೆ ಆ ಕಾರ್ಡ್ ಜಾರಿಗೊಳಿಸಿರುವ ಇಂಡಸ್ಟ್ರಿ ಕುರಿತು ಹೇಳುತ್ತದೆ. ಅಂದರೆ, ಬ್ಯಾಂಕ್ , ಪೆಟ್ರೋಲಿಯಂ ಕಂಪನಿ ಇತ್ಯಾದಿ. ಈ ಸಂಖ್ಯೆಯನ್ನು ಮೇಜರ್ ಇಂಡಸ್ಟ್ರಿ ಐಡೆಂಟಿಫೈರ್ ಎಂದು ಕರೆಯಲಾಗುತ್ತದೆ. ವಿವಿಧ ಇಂಡಸ್ಟ್ರಿಗಳಿಗೆ ಬೇರೆ ಬೇರೆ ಸಂಖ್ಯೆಗಳನ್ನು ನೀಡಲಾಗಿದೆ.

MII DIGIT ಜಾರಿಗೊಳಿಸುವ ಕಂಪನಿಗಳು
0- ISO ಹಾಗೂ ಇತರ ಉದ್ಯಮಗಳು
1-ಎಯರ್ಲೈನ್ಸ್
2-ಏರ್ಲೈನ್ಸ್ ಹಾಗೂ ಇತರ ಉದ್ಯಮಗಳು
3-ಟ್ರಾವೆಲ್ ಹಾಗೂ ಎಂಟರ್ಟೈನ್ಮೆಂಟ್(ಅಮೇರಿಕನ್ ಎಕ್ಸ್ಪ್ರೆಸ್ ಅಥವಾ ಫುಡ್ ಕ್ಲಬ್)
4-ಬ್ಯಾಂಕಿಂಗ್ ಹಾಗೂ ಫೈನಾನ್ಸಿಯಲ್ ಕಂಪನಿಗಳು(ವೀಸಾ)
5-ಬ್ಯಾಂಕಿಂಗ್ ಹಾಗೂ ಫೈನಾನ್ಸಿಯಲ್ ಕಂಪನಿ ಗಳು(ಮಾಸ್ಟರ್ ಕಾರ್ಡ್)
6-ಬ್ಯಾಂಕಿಂಗ್ ಹಾಗೂ ಮರ್ಚೆಂಡೈಸಿಂಗ್
7-ಪೆಟ್ರೋಲಿಯಂ
8-ಟೆಲಿಕಾಂ ಹಾಗೂ ಇತರೆ ಉದ್ಯಮಗಳು
9-ನ್ಯಾಷನಲ್ ಅಸೈನ್ಮೆಂಟ್

ಮೊದಲ 6 ಸಂಖ್ಯೆಗಳು
ಡೆಬಿಟ್/ಕ್ರೆಡಿಟ್ ಕಾರ್ಡ್ ನ ಮೊದಲ ಆರು ಸಂಖ್ಯೆಗಳು ಕಾರ್ಡ್ ಜಾರಿಗೊಳಿಸಿರುವ ಕಂಪನಿಗಳನ್ನು ಪ್ರತಿನಿಧಿಸುತ್ತವೆ. ಈ ಸಂಖ್ಯೆಯನ್ನು ISSUER IDENTIFICATION NUMBER(IIN) ಎಂದು ಕರೆಯಲಾಗುತ್ತದೆ.
ಉದಾಹರಣೆಗಾಗಿ,
- ಅಮೇರಿಕನ್ ಎಕ್ಸ್ಪ್ರೆಸ್- 34XXXX, 37XXXX
- VISA- 4XXXXX
- MASTER CARD- 51XXXX-55XXXX
- MAESTRO- 6XXXXX
- DISCOVER- 6XXXXX

7ನೇ ಸಂಖ್ಯೆಯಿಂದ ಕೊನೆಯ ಒಂದು ಸಂಖ್ಯೆ ಬಿಟ್ಟು
ಡೆಬಿಟ್/ಕ್ರೆಡಿಟ್ ಕಾರ್ಡ್ ನ 7ನೇ ಸಂಖ್ಯೆಯಿಂದ ಹಿಡಿದು (n-1)ವರೆಗಿನ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಗೆ ಲಿಂಕ್ ಆಗಿರುತ್ತದೆ. ಆದರೆ, ಇದು ಡಿಟ್ಟೋ ನಿಮ್ಮ ಖಾತೆ ಸಂಖ್ಯೆ ಆಗಿರದೆ, ಅದಕ್ಕೆ ಸಂಬಂಧಿಸಿದ ಸಂಖ್ಯೆಯಾಗಿರುತ್ತದೆ.

ಕೊನೆಯ ಸಂಖ್ಯೆ
ಡೆಬಿಟ್/ಕ್ರೆಡಿಟ್ ಕಾರ್ಡ್ ನ ಕೊನೆಯ ಸಂಖ್ಯೆ ಚೆಕ್ ಡಿಜಿಟ್ ಸಂಖ್ಯೆಯಾಗಿರುತ್ತದೆ. ಈ ಸಂಖ್ಯೆಯನ್ನು ಬಳಸಿ ನಿಮ್ಮ ಕಾರ್ಡ್ ಸಕ್ರೀಯವಾಗಿದೆಯೋ ಅಥವಾ ನಿಷ್ಕ್ರೀಯವಾಗಿದೆ ಎಂಬುದನ್ನು ಹೇಳಲಾಗುತ್ತದೆ.

ಈ 16 ಅಂಕಿಗಳ ಸಂಖ್ಯೆ ಎಲ್ಲಿ ಬಳಕೆಯಾಗುತ್ತದೆ
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೇಲೆ ನಮೂದಿಸಲಾಗಿರುವ ಈ ಸಂಖ್ಯೆಯನ್ನು ಬಳಸಿ ನೀವು ಯಾವುದೇ ಹಣಕಾಸಿನ ವ್ಯವಹಾರ ನಡೆಸಬಹುದಾಗಿದೆ. ಆದರೆ, ಕೇವಲ ಈ ಸಂಖ್ಯೆ ಬಳಸಿ ನೀವು ಹಣ ಪಾವತಿಸಲು ಸಾಧ್ಯವೀಲ್ಲ. ಒಂದು ವೇಳೆ ನಿಮ್ಮ ಕಾರ್ಡ್ ಡೆಬಿಟ್ ಕಾರ್ಡ್ ಆಗಿದ್ದರೆ, ಅದರ ಜೊತೆಗೆ ಕಾರ್ಡ್ ಪಿನ್ ನಂಬರ್ ಬಳಸಬೇಕು. ಒಂದು ವೇಳೆ ನೀವು ಎರಡು ಹಂತದ ಸೆಕ್ಯೂರಿಟಿ ಬಳಸುತ್ತಿದ್ದರೆ, ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಬರುವ OTP ಕೂಡ ನಮೂದಿಸುವ ಅಗತ್ಯವಿದೆ.

Trending News