ATMಗೆ ಹಣ ವಿಥ್ ಡ್ರಾ ಮಾಡಲು ಹೋದಾಗ ಒಂದು ವೇಳೆ ನಿಮ್ಮ ಡೆಬಿಟ್ ಕಾರ್ಡ್ ATMನಲ್ಲಿ ಸಿಲುಕಿಕೊಂಡರೆ ಇಂತಹ ಸಂದರ್ಭದಲ್ಲಿ ನೀವು ಏನು ಮಾಡುವಿರಿ? ಮೊದಲು ATM ಹೊರಗಡೆ ಕುಳಿತಿರುವ ಗಾರ್ಡ್ ಬಳಿಗೆ ತೆರಳಿ ಈ ಕುರಿತು ವಿಚಾರಿಸುವಿರಿ. ಗಾರ್ಡ್ ಇಲ್ಲದ ಸಂದರ್ಭದಲ್ಲಿ ಕೆಲ ಕಾಲ ಪರದಾಡುವಿರಿ. ಆದರೆ, ನೀವು ನಿಮ್ಮ ಕಾರ್ಡ್ ಹೊರತೆಗೆಯಲು ಪರದಾದಬೇಕಾದ ಅಗತ್ಯವಿಲ್ಲ ಇದು ನಿಮಗೆ ತಿಳಿದಿದೆಯೇ? ಇಲ್ಲ ಎಂದಾದಲ್ಲಿ ಸಿಂಪ್ಲಿ ಈ ಕೆಳಗೆ ಸೂಚಿಸಿರುವ ವಿಧಾನ ಅನುಸರಿಸಿ.
ಕಾರ್ಡ್ ವಾಪಸ್ ಪಡೆಯಲು ಏನು ಮಾಡಬೇಕು?
ATMನಲ್ಲಿ ಒಂದು ವೇಳೆ ನಿಮ್ಮ ಕಾರ್ಡ್ ಸಿಲುಕಿದರೆ ಮೊದಲು ಅದರ ಮಾಹಿತಿಯನ್ನು ಸಂಬಂಧಪಟ್ಟ ಬ್ಯಾಂಕ್ ಗೆ ನೀಡಿ. ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ, ಕಾರ್ಡ್ ಯಾವ ಕಾರಣದಿಂದ ಸಿಲುಕಿಕೊಂಡಿದೆ ಮತ್ತು ATMನ ಲೋಕೇಶನ್ ಹೇಳಿ. ಕಸ್ಟಮರ್ ಕೇರ್ ಪ್ರತಿನಿಧಿ ನಿಮಗೆ ಎರಡು ಆಯ್ಕೆಗಳನ್ನು ನೀಡಲಿದ್ದಾರೆ. ಕಾರ್ಡ್ ಕ್ಯಾನ್ಸಲ್ ಅಥವಾ ಕಾರ್ಡ್ ಅನ್ನು ಹೇಗೆ ಮರಳಿ ಪಡೆಯಬೇಕು ಎಂಬುದರ ಮಾಹಿತಿ ಅವರು ನೀಡಲಿದ್ದಾರೆ. ನಿಮ್ಮ ಕಾರ್ಡ್ ದುರ್ಬಳಕೆಯಾಗಲಿದೆ ಎಂದು ನಿಮಗೆ ಅನಿಸಿದರೆ, ನಿಮ್ಮ ಕಾರ್ಡ್ ಅನ್ನು ನೀವು ನಿಷ್ಕ್ರೀಯಗೊಳಿಸಬಹುದು. ಈಗ ಬ್ಯಾಂಕ್ ನಿಮಗೆ 7ರಿಂದ 10 ದಿನಗಳೊಳಗೆ ಹೊಸ ಕಾರ್ಡ್ ಅನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲಿದೆ. ಕಡಿಮೆ ಅವಧಿಯಲ್ಲಿ ಕಾರ್ಡ್ ವಾಪಸ್ ಪಡೆಯಲು ನೀವು ಹತ್ತಿರದ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ.
ಹಳೆ ಕಾರ್ಡ್ ವಾಪಸ್ ಪಡೆಯಲು ಏನು ಮಾಡಬೇಕು?
ಒಂದು ವೇಳೆ ನಿಮಗೆ ATM ನಲ್ಲಿ ಸಿಲುಕಿಕೊಂಡ ಕಾರ್ಡ್ ಬೇಕಾಗಿದ್ದರೆ, ಇದಕ್ಕಾಗಿ ನೀವು ಬ್ಯಾಂಕ್ ಗೆ ಸೂಚಿಸಬಹುದು. ಒಂದು ವೇಳೆ ATM ನೀವು ಖಾತೆ ಹೊಂದಿರುವ ಬ್ಯಾಂಕ್ ಗೆ ಸಂಬಂಧಪಟ್ಟಿದ್ದಾರೆ ಕಾರ್ಡ್ ವಾಪಸ್ ಪಡೆಯುವುದು ಇನ್ನೂ ಸುಲಭವಾಗಲಿದೆ. ಒಂದು ವೇಳೆ ಬೇರೆ ಬ್ಯಾಂಕ್ ATM ಆಗಿದ್ದರೆ, ಆ ಬ್ಯಾಂಕ್ ನಿಮ್ಮ ಬ್ಯಾಂಕ್ ಗೆ ನಿಮ್ಮ ಕಾರ್ಡ್ ಅನ್ನು ಹಸ್ತಾಂತರಿಸಲಿದೆ. ಬಳಿಕ ನಿಮ್ಮ ಬ್ಯಾಂಕ್ ನಿಮಗೆ ನಿಮ್ಮ ಕಾರ್ಡ್ ವಾಪಸ್ ನೀಡಲಿದೆ.
ಕಾರ್ಡ್ ಸುಲುಕಿಕೊಳ್ಳಲು ಕಾರಣವೇನು?
ATM ಕಾರ್ಡ್ ಸಿಲುಕಿಕೊಳ್ಳಲು ಪ್ರಮುಖ ಮೂರು ಕಾರಣಗಳಿವೆ. ATM ಲಿಂಕ್ ಫೇಲ್ ಆಗುವುದು ಮೊದಲ ಕಾರಣ. ಕಾರ್ಡ್ ATMನಲ್ಲಿ ಹಾಕಿದ ಬಳಿಕ ಪಿನ್ ಅಥವಾ ಮೊತ್ತ ಅಥವಾ ಅಕೌಂಟ್ ಆಯ್ಕೆ ಮಾಡಲು ವಿಳಂಬ ಮಾಡಿದಲ್ಲಿ ನಿಮ್ಮ ಕಾರ್ಡ್ ಸಿಲುಕಿಕೊಳ್ಳಲಿದೆ. ಮಶೀನ್ ಗೆ ವಿದ್ಯುತ್ ಸಂಪರ್ಕ ಕಡಿತಗೊಂಡರೆ ನಿಮ್ಮ ಕಾರ್ಡ್ ಸಿಲುಕಿಕೊಳ್ಳಲಿದೆ.
ನಿಮ್ಮ ಕಾರ್ಡ್ ಸೇಫ್ ಇರಲಿದೆ
ATM ಯಂತ್ರಗಳಿಗೆ ಹಣ ಹಾಕುವ ವೆಂಡರ್ ಗೆ ಮೊದಲು ನಿಮ್ಮ ಕಾರ್ಡ್ ಸಿಗಲಿದೆ. ಬಳಿಕ ವೆಂಡರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಗೆ ಹಸ್ತಾಂತರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ನಿಮ್ಮ ಕಾರ್ಡ್ ಸೇಫ್ ಇರಲಿದೆ. ಈ ಎಲ್ಲ ಪ್ರಕ್ರಿಯೆ RBIನ ನಿರ್ದೇಶನಗಳ ಅಡಿ ಗೌಪ್ಯವಾಗಿ ನಡೆಯುತ್ತದೆ.
ಕ್ರೆಡಿಟ್ ಕಾರ್ಡ್ ಸಿಲುಕಿಕೊಂಡರೆ ಏನು ಮಾಡಬೇಕು
ಡೆಬಿಟ್ ಕಾರ್ಡ್ ನಂತೆ ಒಂದು ವೇಳೆ ಕ್ರೆಡಿಟ್ ಕಾರ್ಡ್ ಕೂಡ ಸಿಲುಕಿಕೊಂಡರೆ ಅದನ್ನೂ ಕೂಡ ನೀವು ಬ್ಯಾಂಕ್ ನಿಂದ ಪಡೆಯಬಹುದು. ಹೊಸ ಕಾರ್ಡ್ ಬಂದ ಬಳಿಕೆ ಅದರ ಪಿನ್ ಬದಲಾಗಲಿದೆ. ಆದರೆ, ನಿಮ್ಮ ಕಾರ್ಡ್ ವೈಶಿಷ್ಟ್ಯಗಳು ಸೇಫ್ ಆಗಿರಲಿವೆ.