ನಡೆಯುತ್ತಿದೆ ಟೀಂ ಇಂಡಿಯಾದ ಮುಂದಿನ ಕೋಚ್ ಹುಡುಕಾಟ!ಬಿಸಿಸಿಐನ ಈ ಷರತ್ತುಗಳನ್ನು ಈಡೇರಿಸುವವನಿಗೆ ಪಟ್ಟ!

Indian Cricket Team Next Coach : ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲು ಗೂಗಲ್ ಫಾರ್ಮ್ ಅನ್ನು ರಚಿಸಲಾಗಿದೆ. 

Written by - Ranjitha R K | Last Updated : May 17, 2024, 11:18 AM IST
  • ಟೀಂ ಇಂಡಿಯಾದ ಮುಂದಿನ ಕೋಚ್ ಹುಡುಕಾಟ
  • ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ
  • ಬಿಸಿಸಿಐ ಇದಕ್ಕಾಗಿ ಗೂಗಲ್ ಟೂಲ್ ಅನ್ನು ಬಳಸಿದೆ
ನಡೆಯುತ್ತಿದೆ ಟೀಂ ಇಂಡಿಯಾದ ಮುಂದಿನ ಕೋಚ್ ಹುಡುಕಾಟ!ಬಿಸಿಸಿಐನ ಈ ಷರತ್ತುಗಳನ್ನು ಈಡೇರಿಸುವವನಿಗೆ ಪಟ್ಟ! title=

Indian Cricket Team Next Coach : ಭಾರತೀಯ ಕ್ರಿಕೆಟ್ ಮಂಡಳಿಯು ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನಾಂಕ ಎಂದು ಹೇಳಿದೆ. ಈ ಅಪ್ಲಿಕೇಶನ್ ಪ್ರಕ್ರಿಯೆಯ ವಿಶೇಷವೆಂದರೆ ಬಿಸಿಸಿಐ ಇದಕ್ಕಾಗಿ ಗೂಗಲ್ ಟೂಲ್ ಅನ್ನು ಬಳಸಿದೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲು ಗೂಗಲ್ ಫಾರ್ಮ್ ಅನ್ನು ರಚಿಸಲಾಗಿದೆ. 

Google ಫಾರ್ಮ್‌ನ ಉಪಯೋಗವೇನು? :
Google ಫಾರ್ಮ್‌ಗಳು ಉಚಿತವಾಗಿ ಬಳಸಬಹುದಾದ ಆನ್‌ಲೈನ್ ಸಾಧನವಾಗಿದೆ.ಅದರ ಸಹಾಯದಿಂದ ಫಾರ್ಮ್‌ಗಳು,ಪರೀಕ್ಷೆಗಳು, ಸಮೀಕ್ಷೆಗಳು ಮತ್ತು ಇತರ ಆನ್‌ಲೈನ್ ಫಾರ್ಮ್‌ಗಳನ್ನು ರಚಿಸಬಹುದು.ಇದು Google ಡಾಕ್ಸ್ ಮತ್ತು ಶೀಟ್‌ಗಳಂತಹ ಇತರ Google Suite ಅಪ್ಲಿಕೇಶನ್‌ಗಳ ಭಾಗವಾಗಿದೆ.ಅಗತ್ಯವಿದ್ದರೆ ಇದರಲ್ಲಿ ಟೆಕ್ಸ್ಟ್, ಇಮೇಜ್, ಅಥವಾ ವೀಡಿಯೊಗಳನ್ನು ಸೇರಿಸಬಹುದು. ಇವುಗಳನ್ನು ಇಲ್ಲಿ ಬದಲಾಯಿಸಬಹುದು  ಅಥವಾ ಫಾರ್ಮ್ಯಾಟ್ ಮಾಡಬಹುದು. 

ಇದನ್ನೂ ಓದಿ : IPL : ಹೈದರಬಾದ್ ಹಾಗೂ ಗುಜರಾತ್ ಪಂದ್ಯ, ಮಳೆಯಿಂದ ಪಂದ್ಯ ರದ್ದು

ಅರ್ಜಿಯಲ್ಲಿ ಬಿಸಿಸಿಐ ಹೇಳಿದ್ದೇನು? :
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪುರುಷರ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.ಮುಂದಿನ ಕೋಚ್‌ನ ಅಧಿಕಾರಾವಧಿಯು ಜುಲೈ 1, 2024 ರಿಂದ ಡಿಸೆಂಬರ್ 31, 2027 ರವರೆಗೆ ಅಂದರೆ 3.5 ವರ್ಷಗಳಿಗಿಂತ ಹೆಚ್ಚಿನ ಅವಧಿಯವರೆಗೆ ಇರಲಿದೆ. 

ಯಾರು ಮುಖ್ಯ ಕೋಚ್ ಆಗಬಹುದು?:
- ಕನಿಷ್ಠ 30 ಟೆಸ್ಟ್ ಪಂದ್ಯಗಳನ್ನು ಅಥವಾ 50 ODI ಪಂದ್ಯಗಳನ್ನು ಆಡಿರಬೇಕು. 
-  ಕನಿಷ್ಠ 2 ವರ್ಷಗಳ ಕಾಲ ಟೆಸ್ಟ್ ಆಡುವ ದೇಶದ ಮುಖ್ಯ ತರಬೇತುದಾರನಾಗಿರಬೇಕು. 
- ಕನಿಷ್ಠ 3 ವರ್ಷಗಳವರೆಗೆ ಸಹವರ್ತಿ ಸದಸ್ಯ/ಐಪಿಎಲ್ ತಂಡದ ಮುಖ್ಯಸ್ಥ ಅಥವಾ ಸಮಾನವಾದ ಅಂತಾರಾಷ್ಟ್ರೀಯ ಲೀಗ್/ಪ್ರಥಮ ದರ್ಜೆ ತಂಡ/ರಾಷ್ಟ್ರೀಯ A ತಂಡದ ಕೋಚ್ ಆಗಿರಬೇಕು.  
- BCCI ಮಟ್ಟದ  3  ಸರ್ಟಿಫಿಕೆಟ್ ಹೊಂದಿರಬೇಕು
- 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ಇದನ್ನೂ ಓದಿ :  ಮುಂಬೈ ಆಟಗಾರರ ಮಧ್ಯೆ ಮಾತಿನ ಚಕಮಕಿ! ವಿದೇಶಿ ಆಟಗಾರನೊಂದಿಗೆ ಹೊಡೆದಾಡಿದ ಇಶಾನ್ ಕಿಶನ್: ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News