Covid19 Cases : ಕಳೆದ 24 ಗಂಟೆಗಳಲ್ಲಿ 10,000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 44,998 ಕ್ಕೆ ತಲುಪಿದೆ. ಇದರಿಂದ ಸಾರ್ವಜನಿಕರ ಆತಂಕ ಹೆಚ್ಚುತ್ತಿದೆ. ಅಲ್ಲದೆ, ಒಂದೇ ದಿನದಲ್ಲಿ ಹತ್ತು ಸಾವಿರ ದಾಟುತ್ತಿದ್ದಂತೆ ನಾಲ್ಕನೇ ಅಲೆ ತಲುಪುವ ಲಕ್ಷಣ ಹೆಚ್ಚಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2005, 2006 ಮತ್ತು 2007 ರಲ್ಲಿ ಜನಿಸಿದ ಎಲ್ಲಾ ಫಲಾನುಭವಿಗಳು 15-18 ವರ್ಷದ ವರ್ಗದವರಲ್ಲಿ ಬರುತ್ತಾರೆ. ಇವರು ಲಸಿಕೆ ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿದೆ.
Vaccine Certificate: ಮೂಲಗಳ ಪ್ರಕಾರ, ಲಸಿಕೆ ಪ್ರಮಾಣಪತ್ರದಿಂದ ಮೋದಿ ಅವರ ಚಿತ್ರವನ್ನು ತೆಗೆದುಹಾಕಲು ಕೇಂದ್ರ ಆರೋಗ್ಯ ಸಚಿವಾಲಯವು ಕೋವಿನ್ ಪ್ಲಾಟ್ಫಾರ್ಮ್ನಲ್ಲಿ ಅಗತ್ಯ ಫಿಲ್ಟರ್ಗಳನ್ನು ಹಾಕುತ್ತದೆ.
ಮುಂಬೈ ತನ್ನ ನಾಗರಿಕರಿಗೆ ಕೋವಿಡ್ ವ್ಯಾಕ್ಸಿನೇಷನ್ನ ಮೊದಲ ಡೋಸ್ನ ಶೇ 100 ರಷ್ಟು ಗುರಿಯನ್ನು ಸಾಧಿಸಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮಾಹಿತಿ ನೀಡಿದೆ.
ಭಾರತದ ಈ ಐತಿಹಾಸಿಕ ಸಾಧನೆ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತ ಇತಿಹಾಸ ಸೃಷ್ಟಿಸಿದೆ. ನಾವು ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಮನೋಭಾವದ ವಿಜಯವನ್ನು ನೋಡುತ್ತಿದ್ದೇವೆ. 100 ಕೋಟಿ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ಈ ಸಾಧನೆ ಮಾಡಲು ಶ್ರಮಿಸಿದ ನಮ್ಮ ವೈದ್ಯರು, ದಾದಿಯರು ಮತ್ತು ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ತಮಾಷೆ ವಿಷಯವೆಂದರೆ ತರಕಾರಿ ಮಾರಾಟಗಾರರ ಧ್ವನಿಯಲ್ಲಿ "ಲಸಿಕೆ, ಲಸಿಕೆ. ಪೆಹ್ಲಾ ಡೋಸ್ ದೂಸ್ರಾ ಡೋಸ್ (ಮೊದಲ ಡೋಸ್, ಎರಡನೇ ಡೋಸ್)'' ಎಂದು ಆತನ ಹಾಡುವ ವಿಧಾನ.
ಶುಕ್ರವಾರದಂದು ನಡೆದ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ರಾಜ್ಯವು ಒಂದೇ ದಿನದಲ್ಲಿ 27.8 ಲಕ್ಷ ಡೋಸ್ ಕೋವಿಡ್ -19 ಲಸಿಕೆಯನ್ನು ಹಾಕುವ ಮೂಲಕ ಅತಿ ಹೆಚ್ಚು ಕೋವಿಡ್ ಲಸಿಕೆಗಳನ್ನು ಹಾಕಿದ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದಂದು ಹಮ್ಮಿಕೊಂಡ ಲಸಿಕಾ ಅಭಿಯಾನದಲ್ಲಿ ಭಾರತವು ಮೊದಲ ಬಾರಿಗೆ ಒಂದೇ ದಿನದಲ್ಲಿ ಎರಡು ಕೋಟಿ ಕೋವಿಡ್ ಲಸಿಕೆಗಳನ್ನು ದಾಟಿದೆ. ಇನ್ನೊಂದೆಡೆಗೆ ಚೀನಾ ದೇಶವು ಜೂನ್ 24 ರಂದು ಒಂದೇ ದಿನದಲ್ಲಿ 2.47 ಕೋಟಿ ಲಸಿಕೆಗಳನ್ನು ಹಾಕಿದ್ದು ಇದುವರೆಗಿನ ದಾಖಲೆಯಾಗಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಾವಿಡ್-19 ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ ಮತ್ತು ಪೂರ್ಣಗೊಳ್ಳುವ ಹಾದಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ (ಜುಲೈ 16) ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಡೆಲ್ಟಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ದೇಶದ ಪ್ರತಿಯೊಬ್ಬ ಯುವಕರು ತಮ್ಮ ರಕ್ಷಣೆಗಾಗಿ ಕೊರೊನಾ ಲಸಿಕೆ ಪಡೆದುಕೊಳ್ಳಬೇಕೆಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಸಲಹೆ ನೀಡಿದ್ದಾರೆ.
ಭಾರತದಲ್ಲಿ ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಮಾರೋಪಾದಿಯಲ್ಲಿ ಪ್ರಯತ್ನಗಳು ಮುಂದುವರೆದಿದೆ. ಈ ಸರಣಿಯಲ್ಲಿ, ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕರೋನಾ ಲಸಿಕೆ ಪಡೆಯಬಹುದು ಎಂದು ಸರ್ಕಾರ ಘೋಷಿಸಿದೆ, ಇದಕ್ಕಾಗಿ ಬುಧವಾರದಿಂದ ನೋಂದಣಿ ಪ್ರಾರಂಭವಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.