ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದಂದು ಹಮ್ಮಿಕೊಂಡ ಲಸಿಕಾ ಅಭಿಯಾನದಲ್ಲಿ ಭಾರತವು ಮೊದಲ ಬಾರಿಗೆ ಒಂದೇ ದಿನದಲ್ಲಿ ಎರಡು ಕೋಟಿ ಕೋವಿಡ್ ಲಸಿಕೆಗಳನ್ನು ದಾಟಿದೆ. ಇನ್ನೊಂದೆಡೆಗೆ ಚೀನಾ ದೇಶವು ಜೂನ್ 24 ರಂದು ಒಂದೇ ದಿನದಲ್ಲಿ 2.47 ಕೋಟಿ ಲಸಿಕೆಗಳನ್ನು ಹಾಕಿದ್ದು ಇದುವರೆಗಿನ ದಾಖಲೆಯಾಗಿದೆ.
ಮಧ್ಯಾಹ್ನದ ವೇಳೆಗೆ ಒಂದು ಕೋಟಿಯ ಗಡಿ ದಾಟಿತು, ನಂತರ ಸಚಿವರು ಮತ್ತು ಬಿಜೆಪಿ ನಾಯಕರು ಹೆಚ್ಚಿನ ರೀತಿಯಲ್ಲಿ ಲಸಿಕೆಗಳನ್ನು ಹಾಕಿಸಿಕೊಳ್ಳಲು ಸರಣಿ ಟ್ವೀಟ್ ಗಳನ್ನು ಮಾಡಿದರು.
ಇದನ್ನೂ ಓದಿ: KCC: ಎಲ್ಲಾ ರೈತರಿಗೂ ಸಿಗಲಿದೆ Credit Card, ಏಪ್ರಿಲ್ 15 ರವರೆಗೆ ವಿಶೇಷ ಅಭಿಯಾನ
ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಜನ್ಮದಿನದಂದು, ಮಧ್ಯಾಹ್ನ 1:30 ರವರೆಗೆ, ದೇಶವು 1 ಕೋಟಿ ಲಸಿಕೆಗಳ ಗಡಿಯನ್ನು ದಾಟಿದೆ, ಇದುವರೆಗಿನ ಅತಿ ವೇಗದ ದಾಖಲೆಯಾಗಿದೆ ಮತ್ತು ನಾವು ನಿರಂತರವಾಗಿ ಮುಂದುವರಿಯುತ್ತಿದ್ದೇವೆ.ಇಂದು ನಾವೆಲ್ಲರೂ ಸೇರಿ ಲಸಿಕೆಯ ಹೊಸ ದಾಖಲೆಯನ್ನು ನಿರ್ಮಿಸುವುದರ ಮೂಲಕ ಅದನ್ನು ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನೀಡುತ್ತೇವೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
#LargestVaccineDrive #Unite2FightCorona pic.twitter.com/Uly8hVAZY6
— Ministry of Health (@MoHFW_INDIA) September 17, 2021
ಸರ್ಕಾರದ ಟ್ರ್ಯಾಕರ್ ಒಂದು ನಿಮಿಷದಲ್ಲಿ ಸುಮಾರು 42,000 ಲಸಿಕೆಗಳನ್ನು ತೋರಿಸಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮುಂದಿನ ವರ್ಷ ನಡೆಯುವ ರಾಜ್ಯ ಚುನಾವಣೆಗಳನ್ನು ಉಲ್ಲೇಖಿಸಿ ಸರ್ಕಾರಿ ಮೂಲಗಳು ಹೇಳುವಂತೆ "ನಮ್ಮ ಮೊದಲ ಆದ್ಯತೆಯೆಂದರೆ ಶೇ 100 ರಷ್ಟು ಮೊದಲ ಡೋಸ್ ಲಸಿಕೆಯನ್ನು ಚುನಾವಣಾ ನಡೆಯುವ ರಾಜ್ಯಗಳಲ್ಲಿ ನೀಡುವುದು" ಎಂದು ಅವರು ಹೇಳಿದರು.
ಇದನ್ನೂ ಓದಿ: State Bank of India: ಮಹಿಳಾ ದಿನಾಚರಣೆಗೆ 'SBI' ನಿಂದ ಬಂಪರ್ ಗಿಫ್ಟ್..!
ಪ್ರಧಾನಮಂತ್ರಿ ಮೋದಿಯವರ 71 ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿಯ ಮೂರು ವಾರಗಳ ಆಚರಣೆಯಲ್ಲಿ ಲಸಿಕಾ ಅಭಿಯಾನವನ್ನು ಕೇಂದ್ರವನ್ನಾಗಿಸಿಕೊಂಡಿದೆ.ಇತ್ತೀಚಿನ ದಿನಗಳಲ್ಲಿ, ಭಾರತವು ಒಂದು ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಒಂದು ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳನ್ನು ಹಾಕಿದೆ.ಮಧ್ಯಾಹ್ನದ ವೇಳೆಗೆ, 94,00,000 ಕ್ಕೂ ಹೆಚ್ಚು ಲಸಿಕೆಗಳನ್ನು ಹಾಕಲಾಯಿತು.
ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತ್ ಐದು ಲಕ್ಷ ಡೋಸ್ ದಾಟಿದೆ, ಇದು ಕಳೆದ ಏಳು ದಿನಗಳಲ್ಲಿ ದೈನಂದಿನ ಪ್ರಮಾಣಕ್ಕಿಂತ ಹೆಚ್ಚಾಗಿದೆ.ಮಧ್ಯಾಹ್ನದ ವೇಳೆಗೆ, ಬಿಹಾರವು 7.3 ಲಕ್ಷ ಜನರಿಗೆ ಕೋವಿಡ್ ಲಸಿಕೆಗಳನ್ನು ನೀಡಿದೆ, ಇದು ಕಳೆದ ಮೂರು ದಿನಗಳ ಸರಾಸರಿಗಿಂತ ಮೂರು ಪಟ್ಟು ಹೆಚ್ಚು.ಮಧ್ಯಪ್ರದೇಶವು 5 ಲಕ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿತ್ತು ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.