COVID-19 vaccine: ಒಂದೇ ಒಂದು ಡೋಸ್ ಕೊರೊನಾ ಲಸಿಕೆ ತೆಗೆದುಕೊಳ್ಳದ 4 ಕೋಟಿ ಜನ!

18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಲು ಕೇಂದ್ರ ಸರ್ಕಾರವು 75 ದಿನಗಳ ವಿಶೇಷ ಡ್ರೈವ್ ಪ್ರಾರಂಭಿಸಿದೆ.

Written by - Puttaraj K Alur | Last Updated : Jul 24, 2022, 10:37 AM IST
  • ಜುಲೈ 18ರವರೆಗೆ ಸುಮಾರು 4 ಕೋಟಿ ಜನರು ಕೊರೊನಾ ಲಸಿಕೆಯ ಒಂದೇ ಒಂದು ಡೋಸ್ ತೆಗೆದುಕೊಂಡಿಲ್ಲ
  • ಲೋಕಸಭೆಗೆ ಮಾಹಿತಿ ನೀಡಿದ ಆರೋಗ್ಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್
  • ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ, ಲಸಿಕೆ ಪಡೆಯುವಂತೆ ಸಲಹೆ
COVID-19 vaccine: ಒಂದೇ ಒಂದು ಡೋಸ್ ಕೊರೊನಾ ಲಸಿಕೆ ತೆಗೆದುಕೊಳ್ಳದ 4 ಕೋಟಿ ಜನ! title=
ಸಿಂಗಲ್ ಡೋಸ್ ಲಸಿಕೆ ಪಡೆಯದ 4 ಕೋಟಿ ಜನ!

ನವದೆಹಲಿ: 2022ರ ಜುಲೈ 18ರವರೆಗೆ ಸುಮಾರು 4 ಕೋಟಿಗೂ ಹೆಚ್ಚು ಜನರು ಕೋವಿಡ್ -19 ಲಸಿಕೆಯ ಒಂದೇ ಒಂದು ಡೋಸ್ ಸಹ ತೆಗೆದುಕೊಂಡಿಲ್ಲವೆಂದು ಆರೋಗ್ಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ. ಲೋಕಸಭೆಗೆ ಈ ಮಾಹಿತಿ ನೀಡಿರುವ ಅವರು, ಜುಲೈ 18ರವರೆಗೆ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ (CVC) ಒಟ್ಟು 1,78,38,52,566 ಲಸಿಕೆ ಡೋಸ್‍ಗಳನ್ನು (ಶೇ.97.34ರಷ್ಟು) ಉಚಿತವಾಗಿ ನೀಡಲಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಒಂದೇ ಒಂದು ಡೋಸ್ ತೆಗೆದುಕೊಳ್ಳದ ಜನರ ಸಂಖ್ಯೆ ಮತ್ತು ಶೇಕಡಾವಾರು ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಜುಲೈ 18ರವರೆಗೆ ಅಂದಾಜು 4 ಕೋಟಿಗೂ ಹೆಚ್ಚು ಜನರು ಕೋವಿಡ್ ಲಸಿಕೆಯ ಸಿಂಗಲ್ ಡೋಸ್ ಸಹ ತೆಗೆದುಕೊಂಡಿಲ್ಲ’ವೆಂದು ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ‘ದೇಶದ ಶೇ.98ರಷ್ಟು ಹದಿಹರೆಯದವರಿಗೆ ಕನಿಷ್ಠ ಮೊದಲ ಡೋಸ್ ಕೊರೊನಾ ಲಸಿಕೆಯನ್ನು ನೀಡಲಾಗಿದೆ ಮತ್ತು ಶೇ.90ರಷ್ಟು ಜನರು ಎರಡೂ ಡೋಸ್‍ಗಳನ್ನು ಪಡೆದುಕೊಂಡಿದ್ದಾರೆ. ಇಲ್ಲಿವರೆಗೆ ದೇಶದಾದ್ಯಂತ ವ್ಯಾಕ್ಸಿನೇಷನ್ ಡ್ರೈವ್‍ನಡಿ ದೇಶದಲ್ಲಿ 201.68 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Mutual Funds Trick: ಕೇವಲ 167 ರೂ. ಉಳಿಸಿ & 11.33 ಕೋಟಿ ರೂ. ಪಡೆಯಿರಿ

‘ಈ ವರ್ಷ ಮಾರ್ಚ್ 16 ರಿಂದ 60 ವರ್ಷ ವಯಸ್ಸಿನ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಎಲ್ಲಾ ಇತರ ಫಲಾನುಭವಿಗಳಿಗೆ ಸರ್ಕಾರಿ CVCಗಳಲ್ಲಿ ಮತ್ತು  18-58 ವರ್ಷ ವಯಸ್ಸಿನವರಿಗೆ ಏಪ್ರಿಲ್ 10ರಿಂದ ಖಾಸಗಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಪ್ರಮಾಣವನ್ನು ಉಚಿತವಾಗಿ ನೀಡಲಾಯಿತು’ ಎಂದು ಹೇಳಲಾಗಿದೆ.

ಜುಲೈ 15ರಿಂದ ಸರ್ಕಾರಿ CVCಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲು ಕೇಂದ್ರ ಸರ್ಕಾರವು 75 ದಿನಗಳ ವಿಶೇಷ ಡ್ರೈವ್ ಪ್ರಾರಂಭಿಸಿದೆ. ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ‘ಆಜಾದಿ ಕಾ ಅಮೃತ್ ಮಹೋತ್ಸ’ವದ ಆಚರಣೆಯ ಅಂಗವಾಗಿ ಇದನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: ಮೋದಿ ಸರ್ಕಾರದಿಂದ ಭಾರೀ ಬದಲಾವಣೆ: ಈ ರಾಜ್ಯದ ಜನತೆಗೆ ಅದ್ಭುತ ಪ್ರಯೋಜನ

ಏತನ್ಮಧ್ಯೆ, ಭಾರತದಲ್ಲಿ ಕೋವಿಡ್ -19 ಹೊಸ ಪ್ರಕರಣಗಳಲ್ಲಿ ನಿರಂತರ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶವು 21,411 ಹೊಸ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಶನಿವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 67 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಶನಿವಾರದಂದು ಸಕ್ರಿಯ ಪ್ರಕರಣಗಳ ಸಂಖ್ಯೆ 1,50,100 ರಷ್ಟಿದೆ ಮತ್ತು ದೈನಂದಿನ ಸಕಾರಾತ್ಮಕತೆಯ ದರವು ಶೇ.4.46ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News