ಮಹತ್ವದ ಬೆಳವಣಿಗೆಯೊಂದರಲ್ಲಿ ನಿತೀಶ್ ಕುಮಾರ್ ಅವರನ್ನು ಬಿಹಾರ ಮುಖ್ಯಮಂತ್ರಿಯಾಗಿ ನೇಮಿಸುವ ಪ್ರಶ್ನೆಯೇ ಇಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಮತ್ತು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಬುಧವಾರ ಹೇಳಿದ್ದಾರೆ.ಮೊದಲ ಬಾರಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಅವರ ಜೆಡಿಯುಗಿಂತ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದ ಒಂದು ದಿನದ ನಂತರ ಮೋದಿ ಈ ಹೇಳಿಕೆ ನೀಡಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶ 2020 ರಲ್ಲಿ 'ಮೋದಿ ಮ್ಯಾಜಿಕ್' ತೇಜಸ್ವಿ ಯಾದವ್ ಅವರ ಕನಸನ್ನು ಭಗ್ನಗೊಳಿಸಿದೆ. ಎನ್ಡಿಎ ವಿಜಯದ ಮನ್ನಣೆಯನ್ನು ಪಿಎಂ ನರೇಂದ್ರ ಮೋದಿ (Narendra Modi) ಅವರಿಗೆ ನೀಡಲು ಹಲವು ಕಾರಣಗಳಿವೆ.
ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಅವರ ಪಕ್ಷ ಎಐಐಎಂಐಎಂ ಮೂರು ಕ್ಷೇತ್ರಗಳಲ್ಲಿ ಗೆದ್ದು ಬಿಹಾರದ ಎರಡು ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಅಲ್ಲಿ ಇನ್ನೂ ಮತಗಳನ್ನು ಎಣಿಸಲಾಗುತ್ತಿದೆ.ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್ ಐದು ಸ್ಥಾನಗಳಲ್ಲಿ ಉಪಚುನಾವಣೆಯಲ್ಲಿ ಜಯಗಳಿಸಿದ ನಂತರ 2019 ರಲ್ಲಿ ಬಿಹಾರಕ್ಕೆ ಪ್ರವೇಶಿಸಿತ್ತು.
ಚಿರಾಗ್ ಪಾಸ್ವಾನ್ ಬಿಹಾರದಲ್ಲಿ ಹೆಣದ ರಣತಂತ್ರದಿಂದಾಗಿ ನಿತೀಶ್ ಕುಮಾರ್ ಪಕ್ಷವು ಈಗ ಮೂರನೇ ಸ್ಥಾನಕ್ಕೆ ಇಳಿದಿದೆ. ಒಂದು ವೇಳೆ ನಿತಿಶ್ ಕುಮಾರ್ ಅವರನ್ನು ತೀವ್ರವಾಗಿ ವಿರೋಧ ವ್ಯಕ್ತಪಡಿಸದಿದ್ದಲ್ಲಿ ಜೆಡಿಯು ಇನ್ನೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇತ್ತು.
ಬಿಹಾರದಲ್ಲಿ ಮತ್ತೆ ಎನ್ಡಿಎ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ನಿಚ್ಚಳವಾಗಿ ಘೋಚರಿಸುತ್ತಿವೆ, ಆದರೆ ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ಹಲವು ಅನುಮಾನಗಳು ಈಗ ವ್ಯಕ್ತವಾಗತೊಡಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.