ನವದೆಹಲಿ: ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ನಿಚ್ಚಳವಾಗಿ ಘೋಚರಿಸುತ್ತಿವೆ, ಆದರೆ ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ಹಲವು ಅನುಮಾನಗಳು ಈಗ ವ್ಯಕ್ತವಾಗತೊಡಗಿವೆ.
ಈ ಬಾರಿ ನಿತೀಶ್ ಕುಮಾರ್ ವಿರುದ್ಧ ಆಡಳಿತ ವಿರೋಧಿ ಅಲೆ ತೀವ್ರವಾಗಿತ್ತು, ಈ ಹಿನ್ನಲೆಯಲ್ಲಿ ಅವರ ವರ್ಚಸ್ಸು ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಈಗ ಬಿಹಾರದಲ್ಲಿನ ಚುನಾವಣಾ ಫಲಿತಾಂಶದ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಕೈಲಾಸ್ ವಿಜಯ್ ವರ್ಗಿಯಾ ಅವರು 'ಮೋದಿಯವರ ಚಿತ್ರಣವು ಈ ಬಾರಿ ನಮಗೆ ನೆರವಾಯಿತು,'ಸಂಜೆಯ ಹೊತ್ತಿಗೆ, ನಾವು ಸರ್ಕಾರ ರಚನೆ ಮತ್ತು ನಾಯಕತ್ವದ ವಿಷಯಗಳ ಬಗ್ಗೆ ನಿರ್ಧರಿಸುತ್ತೇವೆ" ಎಂದು ಅವರು ತಿಳಿಸಿದರು.
Bihar Election Results 2020: ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಯಾರಾಗ್ತಾರೆ CM?
ಬಿಹಾರದಲ್ಲಿ ಸರ್ಕಾರದ ಮುಖ್ಯಸ್ಥರಾಗಲು ಹೊಸ ಅಭ್ಯರ್ಥಿಯ ಬಗ್ಗೆ ಬಿಜೆಪಿ ಯೋಚಿಸಬಹುದು ಎಂದು ಆ ಹೇಳಿಕೆಯು ಸೂಚಿಸುತ್ತದೆ.ಇದನ್ನೇ ಅವರು ಪ್ರಸ್ತಾಪಿಸುತ್ತಿದ್ದಾರೆಯೇ? ಎಂದು ಕೇಳಿದಾಗ, ಪ್ರವೃತ್ತಿಗಳು ಫಲಿತಾಂಶಗಳಾಗಿ ಪರಿವರ್ತನೆಗೊಂಡರೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮರಳುವ ಬಗ್ಗೆ ಬಿಜೆಪಿ ತನ್ನ ಭರವಸೆಗೆ ಅಂಟಿಕೊಳ್ಳುತ್ತದೆ ಎಂದು ವಿಜಯವರ್ಗಿಯಾ ತಿಳಿಸಿದ್ದಾರೆ.
ಈ ಬಾರಿ ಕೊರೊನಾ ಹಾಗೂ ಚಿರಾಗ್ ಪಾಸ್ವಾನ್ ಅವರಿಂದಾಗಿ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಚುನಾವಣಾ ಪ್ರಚಾರದುದ್ದಕ್ಕೂ ಚಿರಾಗ್ ಪಾಸ್ವಾನ್ ಮಾಡಿದ ನಿತೀಶ್ ವಿರೋಧಿ ಅಭಿಯಾನ ಬಿಜೆಪಿಗೆ ಲಾಭದಾಯಕವಾಗಿದೆ.