Rain Alert: ಇಂದು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಆಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ನಿಮ್ಮ ಪ್ರದೇಶದಲ್ಲಿ ಹವಾಮಾನ ಹೇಗಿರುತ್ತದೆ ಎಂದು ತಿಳಿಯಿರಿ.
ರಚ್ಚೆ ಹಿಡಿದು ಸುರಿಯುತ್ತಿದ್ದ ಮಳೆ ಇದೀಗ ಸ್ವಲ್ಪ ಮಟ್ಟಿನ ವಿರಾಮ ನೀಡಿದೆ. ಇದೀಗ ಬಿಬಿಎಂಪಿ ಉತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದವರ ಮೇಲೆ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ರಾಜ್ಯ ರಾಜಧಾನಿಗೆ ಮತ್ತೆ ಮಳೆ ಆತಂಕ ಎದುರಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನವೆಂಬರ್ ವರೆಗೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾತ್ರಿ ಇಡೀ ಸುರಿದ ಮಳೆಗೆ ಬೆಂಗಳೂರಿನ ಜನ ತತ್ತರಿಸುವಂತಾಗಿದೆ. ಯುಮಲೂರಿನಲ್ಲಿ ಮಳೆಯಿಂದ ಜನರ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ಮೇಲೆ ನಿಂತಿರುವ ನೀರು ಇನ್ನೂ ಕಡಿಮೆಯಾಗಿಲ್ಲ. ಯಮಲೂರು ಬಳಿ ಮಳೆಯಿಂದ ಜಲಪ್ರಳಯ ಸೃಷ್ಟಿಯಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳು ಟ್ರ್ಯಾಕ್ಟರ್ನಲ್ಲಿ ತೆರಳ್ತಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಅಬ್ಬರಿಸಿದ ಮಳೆರಾಯ. ರಾತ್ರಿ ಸುರಿದ ಮಳೆಗೆ ಜಲಾವೃತಗೊಂಡ ಅಗಲಕೋಟೆ ಗ್ರಾಮ. ಧರೆಗುಳಿದ ಮನೆಗಳು, ರಾತ್ರಿ ನಿದ್ದೆಗೆಟ್ಟ ಗ್ರಾಮಸ್ಥರು. ಅಗಲಕೋಟೆ ಗ್ರಾಮದಲ್ಲಿ ಐದಾರು ಮನೆಗಳಿಗೆ ಹಾನಿ.
ಬೆಂಗಳೂರಿನಲ್ಲಿ ಭಾರಿ ಮಳೆಯಾಗೋ ಮುನ್ಸೂಚನೆ ನೀಡಲಾಗಿದೆ. ಜೋರು ಗಾಳಿ, ಗುಡುಗು ಮಿಂಚಿನೊಂದಿಗೆ ಮಳೆಯಾಗೋ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಕೋಲಾರ ಜಿಲ್ಲಾಧಿಕಾರಿಗಳಿಗೆ ಅಲರ್ಟ್ ನೀಡಲಾಗಿದೆ.
ಚಾಮರಾಜಪೇಟೆಯಲ್ಲಿ ಬೃಹತ್ ಮರವೊಂದು ಉರುಳಿಬಿದ್ದಿದೆ. ಆಟದ ಮೈದಾನದ ಪಕ್ಕದಲ್ಲಿ ಆಟೋ ಮೇಲೆ ಮರ ಉರುಳಿಬಿದ್ದಿದ್ದು ಆಟೋ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ವಾರವಿಡೀ ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆಯೂ ಮಳೆ ಮುಂದುವರಿಯಲಿದೆ. ಶುಕ್ರವಾರ, ಶನಿವಾರ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿದಿನ ಗುಡುಗು ಸಹಿತ ಧಾರಾಕಾರ ಮಳೆ ಸಾಧ್ಯತೆ ಇದ್ದು ಹವಾಮಾನ ಇಲಾಖೆಯಿಂದ ಎಲ್ಲೋ ಅಲರ್ಟ್ ಘೋಷಿಸಿದೆ.
ಈ ವಾರವಿಡೀ ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆಯೂ ಮಳೆ ಮುಂದುವರಿಯಲಿದೆ. ಶುಕ್ರವಾರ, ಶನಿವಾರ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿದಿನ ಗುಡುಗು ಸಹಿತ ಧಾರಾಕಾರ ಮಳೆ ಸಾಧ್ಯತೆ ಇದ್ದು ಹವಾಮಾನ ಇಲಾಖೆಯಿಂದ ಎಲ್ಲೋ ಅಲರ್ಟ್ ಘೋಷಿಸಿದೆ.
ಉಟ್ಟ ಬಟ್ಟೆಯಲ್ಲೇ ಊರು ಬಿಟ್ಟ ಗ್ರಾಮಸ್ಥರು ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆಯ ಆರ್ಭಟ ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಭಾರೀ ಕಟ್ಟೆಚ್ಚರ
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಐದನೇ ಮತ್ತು ಅಂತಿಮ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 2-2 ರ ಸಮಬಲದೊಂದಿಗೆ ಟ್ವೆಂಟಿ-20 ಸರಣಿಯನ್ನು ಹಂಚಿಕೊಂಡಿವೆ.
ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಹಲವೆಡೆ ಧಾರಾಕಾರ ಮಳೆ ..ಗುಡುಗು, ಸಿಡಿಲಿನೊಂದಿಗೆ ಮಳೆ ಆರ್ಭಟ.. ಜನಜೀವನ ಅಸ್ತವ್ಯಸ್ತ.. ಮೆಜೆಸ್ಟಿಕ್, ಚಾಮರಾಜಪೇಟೆ, ಯಶವಂತಪುರ, ಹೆಬ್ಬಾಳ. ಇಂದಿರಾ ನಗರ, ಜಯನಗರ ಸೇರಿಂದಂತೆ ಹಲವೆಡೆ ಮಳೆ ..
3ನೇ ದಿನವೂ ಸಿಎಂ ಬೊಮ್ಮಾಯಿ ನಗರದಲ್ಲಿ ಮಳೆ ಹನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ನಗರದ ಸಾಯಿ, ನಾಗಪ್ಪ , ಪೈ 3 ಬಡವಾಣೆಗೆ ಭೇಟಿ ನೀಡಿ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ.
ಇದರ ನಡುವೆ ಹವಾಮಾನ ಇಲಾಖೆ ಮತ್ತೊಮ್ಮೆ ಮುನ್ಸೂಚನೆ ನೀಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ರಾತ್ರಿ ಇನ್ನಷ್ಟು ವರುಣನ ನರ್ತನ ಇರಲಿದೆ ಎಂದು ಮಾಹಿತಿ ನೀಡಲಾಗಿದೆ. ನಿನ್ನೆ ರಾತ್ರಿ 12ಸೆ.ಮೀ ಮಳೆಯಾಗಿತ್ತು. ಇಂದು ಸಂಜೆ ಬಳಿಕ ಶುರುವಾಗಲಿರುವ ಮಳೆ ಸರಿ ಸುಮಾರು 14ಸೆ.ಮೀ ತನಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರಾದ ಪ್ರಸಾದ್ ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.