ಸಿಲಿಕಾನ್ ಸಿಟಿಯನ್ನು ಬಿಟ್ಟೂ ಬಿಡದೆ ಕಾಡ್ತಿದೆ ರಣಚಂಡಿ ಮಳೆ! ಧಾರಾಕಾರ ಮಳೆಗೆ ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದು ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಮೆಜೆಸ್ಟಿಕ್, ಕಾರ್ಪೊರೇಷನ್, ಶಾಂತಿನಗರ, ಚಾಮರಾಜಪೇಟೆ, ಟ್ರಿನಿಟಿ, MG ರೋಡ್, ಬಿಟಿಎಂ ಲೇಔಟ್, ಹೆಚ್ಎಸ್ಆರ್ ಲೇಔಟ್ ಸೇರಿದಂತೆ ಎಲ್ಲೆಡೆ ಭಾರೀ ಮಳೆಯಾಗಿದೆ..
ವೈಟ್ ಫೀಲ್ಡ್ ಮಂದಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಿದೆ.. ವೈಟ್ ಫೀಲ್ಡ್ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚರಿಸಲು ದಿನಗಣನೆ ಆರಂಭವಾಗಿದೆ. ವೈಟ್ಫೀಲ್ಡ್ ಮಾರ್ಗವಾಗಿ ನಮ್ಮಮೆಟ್ರೋ ನೂತನ ಮಾರ್ಗ ನಿರ್ಮಾಣವಾಗಿದ್ದು ಪ್ರಾಯೋಗಿಕ ಸಂಚಾರಕ್ಕೆ BMRCL ಮೆಟ್ರೋ ಬೋಗಿ ಸಿದ್ಧಪಡಿಸಿದೆ..
ಚೀನಾ ಮೂಲದ ಲೋನ್ ಆ್ಯಪ್ಗಳಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸಾಲ ಕೊಡುವ ಚೈನೀಸ್ ಲೋನ್ ಆ್ಯಪ್ಗಳ ಹಾವಳಿ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸದು ಮುಂದಾಗಿದ್ದಾರೆ. ಒಂದು ವರ್ಷದಲ್ಲಿ ಅಂದಾಜು 100 ಕೋಟಿ ಹಣ ಫ್ರೀಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಗರ್ಜಿಸಲಿದೆ.. ದಸರಾ ಹಬ್ಬ ಮುಗಿದ ಬೆನ್ನಲ್ಲೇ ಡೆಮಾಲಿಷನ್ 2.O ನಡೆಯುತ್ತಿದೆ. ಸ್ಟೇ ತಂದವರ ಮೇಲೆ ಬಿಬಿಎಂಪಿ ಬುಲ್ಡೋಜರ್ ಬ್ರಹ್ಮಾಸ್ತ್ರ ಪ್ರಯೋಗಿಸಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.