Filmfare Award 2022 : ನಾಳೆ ಬೆಂಗಳೂರಿನಲ್ಲಿ ʻಫಿಲ್ಮ್​ ಫೇರ್​’ ಅವಾರ್ಡ್​ ಕಾರ್ಯಕ್ರಮ, ನೀವೂ ಹೋಗಬೇಕೇ? ಹೀಗೆ ಮಾಡಿ!

Filmfare Awards South 2022 : ಕಳೆದ ವರ್ಷದಲ್ಲಿ ದಕ್ಷಿಣ ಚಲನಚಿತ್ರೋದ್ಯಮದಿಂದ ನಮ್ಮನ್ನು ರಂಜಿಸಿದ ಕೆಲವು ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವ ಸಮಯ ಇದೀಗ ಬಂದಿದೆ. 

Written by - Chetana Devarmani | Last Updated : Oct 8, 2022, 10:29 AM IST
  • ನಾಳೆ ಬೆಂಗಳೂರಿನಲ್ಲಿ ʻಫಿಲ್ಮ್​ ಫೇರ್​’ ಅವಾರ್ಡ್
  • ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಫಿಲ್ಮ್‌ ಫೇರ್‌
  • ನೀವೂ ಹೋಗಬೇಕೇ? ಹೀಗೆ ಮಾಡಿ!
Filmfare Award 2022 : ನಾಳೆ ಬೆಂಗಳೂರಿನಲ್ಲಿ ʻಫಿಲ್ಮ್​ ಫೇರ್​’ ಅವಾರ್ಡ್​ ಕಾರ್ಯಕ್ರಮ, ನೀವೂ ಹೋಗಬೇಕೇ? ಹೀಗೆ ಮಾಡಿ! title=
ಫಿಲ್ಮ್​ ಫೇರ್

Filmfare Awards South 2022 : ಕಳೆದ ವರ್ಷದಲ್ಲಿ ದಕ್ಷಿಣ ಚಲನಚಿತ್ರೋದ್ಯಮದಿಂದ ನಮ್ಮನ್ನು ರಂಜಿಸಿದ ಕೆಲವು ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವ ಸಮಯ ಇದೀಗ ಬಂದಿದೆ. ಅಕ್ಟೋಬರ್ 9 ರಂದು 7 ನೇ ಫಿಲ್ಮ್‌ ಫೇರ್ ಅವಾರ್ಡ್ಸ್ ಸೌತ್ 2022 ನಡೆಯಲಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮದಿಂದ ಭಾರತೀಯ ಚಿತ್ರರಂಗದ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಫಿಲ್ಮ್‌ ಫೇರ್ ಅವಾರ್ಡ್ಸ್ ಸೌತ್ 2022 – ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಾದ್ಯಂತ ಕಲಾತ್ಮಕ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಗುರುತಿಸಲು ಅತಿರಂಜಿತ ಪ್ರಶಸ್ತಿಗಳ ರಾತ್ರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯಲಿದೆ. 

ಇದನ್ನೂ ಓದಿ : ʼಟೈಟಲ್‌ ಇಲ್ಲದ ಪೋಸ್ಟರ್‌ ಕುತೂಹಲಕಾರಿʼ : ʼಕಾಂತಾರʼದ ದಂತಕಥೆ ಬಿಚ್ಚಿಟ್ಟ ಸಪ್ತಮಿ..!

ಭಾರತೀಯ ಸಿನಿಮಾದ ಮೋಸ್ಟ್ ಗ್ಲಾಮರಸ್ ನಟಿಯರಾದ ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್, ಕೃತಿ ಶೆಟ್ಟಿ, ಸಾನಿಯಾ ಐಯಪ್ಪನ್ ಮತ್ತು ಐಂದ್ರಿತಾ ರೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರು ಇಂಟರ್‌ನ್ಯಾಶನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಈ ಅವಾರ್ಡ್‌ ಕಾರ್ಯಕ್ರಮ ನಡೆಯಲಿದೆ. 

 

 

ಪ್ರತಿಷ್ಠಿತ ಫಿಲ್ಮ್‌ ಫೇರ್ ಅವಾರ್ಡ್ ಹಲವು ದಶಕಗಳಿಂದ ನಡೆದು ಬರುತ್ತಲೇ ಇದೆ. ಆದರೆ, ಕರ್ನಾಟಕದಲ್ಲಿ ಈ ಕಾರ್ಯಕ್ರಮ ನಡೆದಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಫಿಲ್ಮ್‌ ಫೇರ್‌ ನಡೆಯುತ್ತಿದ್ದು, ಈ ಬಗ್ಗೆ ಕಮರ್ ಫಿಲ್ಮ್​ ಫ್ಯಾಕ್ಟರಿ ತಿಳಿಸಿದೆ. 

ಇದನ್ನೂ ಓದಿ : ಚೋಳರ ಕಾಲದಲ್ಲಿ ʼಹಿಂದೂ ಧರ್ಮʼ ಎಂಬುದೇ ಇರಲಿಲ್ಲ : ಕಮಲ್‌ಹಾಸನ್‌

ನೀವೂ ಹೋಗಬೇಕೇ? ಹೀಗೆ ಮಾಡಿ!

 

 

ಈ ʻಫಿಲ್ಮ್‌ಫೇರ್ʼ ಅವಾರ್ಡ್‌ ಕಾರ್ಯಕ್ರಮಕ್ಕೆ ನೀವೂ ಸಹ ಹೋಗಬಯಸಿದರೆ, ಬುಕ್‌ ಮೈ ಶೋ ಆಪ್‌ ಮೂಲಕ ನಿಮ್ಮ ಪಾಸ್‌ ಮುಂಗಡವಾಗಿ ಕಾದಿರಿಸಿ. ಇನ್ನೂ ಹಲವಾರು ಸೌತ್‌ ಸೆಲಿಬ್ರಿಟಿಗಳು ಈ ರೆಡ್‌ ಕಾರ್ಪೆಟ್‌ ಮೇಲೆ ನಾಳೆ ಹೆಜ್ಜೆ ಹಾಕಲಿದ್ದು, ಅದನ್ನು ಕಣ್ತುಂಬಿಕೊಳ್ಳಲು ಸಿಲಿಕಾನ್‌ ಸಿಟಿಯ ಜನತೆ ಕಾತುರರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News