Crime News : ಕರ್ನಾಟಕ ಅಗ್ನಿಶಾಮಕ, ತುರ್ತು ಸೇವಾ ಇಲಾಖೆಯ ಟ್ವಿಟರ್ ಖಾತೆ ಹ್ಯಾಕ್.!

ಸೈಬರ್ ಖದೀಮರು ಎಷ್ಟೊಂದು ಆ್ಯಕ್ಟೀವ್ ಆಗಿರುತ್ತಾರೆ ಎಂಬುದಕ್ಕೆ ಮತ್ತೊಂದು ದೊಡ್ಡ ಉದಾಹರಣೆ ಇದು. 

Written by - VISHWANATH HARIHARA | Edited by - Chetana Devarmani | Last Updated : Oct 3, 2022, 11:49 AM IST
  • ಕರ್ನಾಟಕ ಅಗ್ನಿಶಾಮಕ, ತುರ್ತು ಸೇವಾ ಇಲಾಖೆಯ ಟ್ವಿಟರ್ ಖಾತೆ ಹ್ಯಾಕ್
  • ಅಧಿಕೃತ ಟ್ವಿಟರ್ ಖಾತೆಯನ್ನ ಹ್ಯಾಕ್ ಮಾಡಿದ ಕಿಡಿಗೇಡಿಗಳು
  • ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು
Crime News : ಕರ್ನಾಟಕ ಅಗ್ನಿಶಾಮಕ, ತುರ್ತು ಸೇವಾ ಇಲಾಖೆಯ ಟ್ವಿಟರ್ ಖಾತೆ ಹ್ಯಾಕ್.! title=
ಟ್ವಿಟರ್ ಖಾತೆ ಹ್ಯಾಕ್

ಬೆಂಗಳೂರು : ಸೈಬರ್ ಖದೀಮರು ಎಷ್ಟೊಂದು ಆ್ಯಕ್ಟೀವ್ ಆಗಿರುತ್ತಾರೆ ಎಂಬುದಕ್ಕೆ ಮತ್ತೊಂದು ದೊಡ್ಡ ಉದಾಹರಣೆ ಇದು. ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯನ್ನ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. 

ಇದನ್ನೂ ಓದಿ : BBK 9 : ಮೊದಲ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡೆದವರು ಇವರೇ ನೋಡಿ.!

ಅಧಿಕೃತ ಪ್ರಕಟಣೆ, ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಇಲಾಖೆ ಹೊಂದಿದ್ದ ಟ್ವಿಟರ್ ಖಾತೆಯನ್ನ ಎರಡು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿದ್ದು, ಅಸಂಬದ್ಧವಾಗಿ ಸರಣಿ ಟ್ವೀಟ್ ಮಾಡಲಾಗಿದೆ. ಸದ್ಯ ಖಾತೆ ಹ್ಯಾಕ್ ಆಗಿರುವುದನ್ನ ಗಮನಿಸಿರುವ ಇಲಾಖೆಯ ಡಿಜಿಟಲ್ ಕಮ್ಯುನಿಕೇಷನ್ ತಂಡ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದು ಪರಿಶೀಲನೆ ನಡೆಸಲಾಗುತ್ತಿದೆ. 

ಇದನ್ನೂ ಓದಿ : Adipurush Movie Teaser : ಆದಿಪುರುಷ ಸಿನಿಮಾ ಟೀಸರ್ ರಿಲೀಸ್ : ಉಘೇ ಉಘೇ ಎಂದ ಫ್ಯಾನ್ಸ್

ಈ ಹಿಂದೆಯೂ ಸಹ ಸೈಬರ್ ವಂಚಕರು ಜಯನಗರ ಸಂಚಾರಿ ಪೊಲೀಸ್, ವಿವೇಕನಗರ ಪೊಲೀಸ್ ಠಾಣೆ ಸೇರಿದಂತೆ ಅನೇಕ ಅಧಿಕೃತ ಟ್ವಿಟರ್ ಖಾತೆಗಳನ್ನ ಹ್ಯಾಕ್ ಮಾಡಿ ಅಸಂಬದ್ಧ ಟ್ವೀಟ್ ಮಾಡಿರುವ ಪ್ರಕರಣಗಳು ವರದಿಯಾಗಿದ್ದವು. ಈಗ ಮತ್ತದೇ ಕೆಲಸವನ್ನು ಕಿಡಿಗೇಡಿಗಳು ಮುಂದುವರೆಸಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News