ನಟ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿ ವರ್ಷ ಸಮೀಪಿಸುತ್ತಿದೆ. ಆದ್ರೆ, ರಾಜ್ಯದ ಜನರಿಂದ ಅವರ ನೆನಪು ಮಾತ್ರ ಇನ್ನೂ ದೂರ ಆಗ್ತಿಲ್ಲ. ಇಷ್ಟು ದಿನ ಜಾತ್ರೆ, ಉತ್ಸವದಲ್ಲಿ ಕಾಣಿಸುತ್ತಿದ್ದ ಅಪ್ಪು ಫೋಟೊ ಈಗ ಮಧುಮಗಳ ಜೊತೆಗೆ ನವ ವಿವಾಹಿತನ ಮನೆ ಸೇರುತ್ತಿವೆ. ಅಪ್ಪು ನೆನಪಿನ ವಿಭಿನ್ನ ಟ್ರೆಂಡ್ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಪುನೀತ್ ರಾಜ್ಕುಮಾರ್ಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿ ತೆಲಂಗಾಣದ ಅಪ್ಪು ಅಭಿಮಾನಿ ರವಿಕುಮಾರ್ 2,100 ಕಿಲೋಮೀಟರ್ ನಡೆದಿದ್ದಾರೆ. ರವಿಕುಮಾರ್, ನಿವೃತ್ತ CRPF ಇನ್ಸ್ ಪೆಕ್ಟರ್ ಆಗಿದ್ದು, 100 ದಿನಗಳಲ್ಲಿ 3,200 ಕಿಲೋಮೀಟರ್ ನಡೆಯುವ ಗುರಿ ಹೊಂದಿದ್ದಾರೆ.. ಅಪ್ಪುಗೆ ಭಾರತ ರತ್ನ ನೀಡುವಂತೆ ಪ್ರಧಾನಿ ಮೋದಿಗೂ ಪತ್ರ ಬರೆದ್ದಾರೆ..
ಹೊಸಪೇಟೆ ನಗರದ ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ದೊಡ್ಮನೆ ಹುಡ್ಗನ 7.04 ಅಡಿ ಎತ್ತರದ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನಆಂಧ್ರಪ್ರದೇಶದ ಗುಂಟೂರಿನ ತೆನಾಲಿಯಿಂದ ತರಿಸಲಾಗಿದೆ.
ಚಿಕ್ಕಪೇಟೆ ಸರ್ಕಲ್ ಬಳಿ ಪೂಜೆ ಮಾಡಲು ಹಾಕಿದ್ದ ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಗಳನ್ನು ಕಿಡಿಗೆಡಿಗಳಾದ ಕುಳ್ಳ ಅಲಿಯಾಸ್ ರೇಣುಕ ಪ್ರಸನ್ನ, ತಲೆಮಂಜ, ಅಭಿ, ಶಂಕರ್ ಅಲಿಯಾಸ್ ಲಾಲಾ ಇವರುಗಳು ಕಾಲಿನಲ್ಲಿ ತುಳಿದು ಅದನ್ನ ತೆರೆವುಗೊಳಿಸಿದ್ದಾರೆ...
ಜೇಮ್ಸ್.. ಜೇಮ್ಸ್.. ಜೇಮ್ಸ್... ಎಲ್ಲೆಲ್ಲೂ ಜೇಮ್ಸ್ನದ್ದೇ ಮಾತುಕತೆ.... ಅಪ್ಪು ಅಭಿನಯದ ಕೊನೆಯ ಸಿನಿಮಾ ರಿಲೀಸ್ ಆಗಿ ಇಂದಿಗೆ 10 ದಿನ ಕಳೆದಿದೆ. ಹತ್ತನೇ ದಿನದಂದು ಹೇಗಿದೆ ರಿಸ್ಪಾನ್ಸ್ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...
ಕುಂದಾನಗರಿ ಬೆಳಗಾವಿಯಲ್ಲಿ ಜೇಮ್ಸ್ ಅಬ್ಬರ ಜೋರಾಗಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ನಿವೃತ್ತ ಯೋಧರೊಬ್ಬರು ಸೇನಾ ಸಮವಸ್ತ್ರ ಧರಿಸಿಕೊಂಡೇ ಸಿನಿಮಾ ವೀಕ್ಷಿಸಲು ಆಗಮಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.