ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ 'ಜೇಮ್ಸ್' ನಾಯಕಿ ಪ್ರಿಯಾ ಆನಂದ್

ನವರಂಗ್ ಥಿಯೇಟರ್​ನಲ್ಲಿ 'ಜೇಮ್ಸ್'  ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ ಚಿತ್ರದ ಸಿನಿಮಾ ನಾಯಕಿ ಪ್ರಿಯಾ ಆನಂದ್ ಭಾವುಕರಾಗಿದ್ದಾರೆ .

Written by - Malathesha M | Last Updated : Mar 17, 2022, 12:25 PM IST
  • ಜಗತ್ತಿನಾದ್ಯಂತ 'ಜೇಮ್ಸ್' ರಿಲೀಸ್ ಆಗಿ ದೊಡ್ಡ ಸದ್ದು ಮಾಡುತ್ತಿದೆ
  • ಕರುನಾಡಲ್ಲಿ 'ಜೇಮ್ಸ್' ಜಾತ್ರೆಯನ್ನ ಭರ್ಜರಿಯಾಗಿ ಆಚರಿಸುತ್ತಿದ್ದಾರೆ.
  • ಸಿನಿಮಾ ನಾಯಕಿ ಪ್ರಿಯಾ ಆನಂದ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ
ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ 'ಜೇಮ್ಸ್' ನಾಯಕಿ ಪ್ರಿಯಾ ಆನಂದ್ title=
ಜಗತ್ತಿನಾದ್ಯಂತ 'ಜೇಮ್ಸ್' ರಿಲೀಸ್ ಆಗಿ ದೊಡ್ಡ ಸದ್ದು ಮಾಡುತ್ತಿದೆ

ಬೆಂಗಳೂರು : ಜಗತ್ತಿನಾದ್ಯಂತ 'ಜೇಮ್ಸ್' ರಿಲೀಸ್ ಆಗಿ ದೊಡ್ಡ ಸದ್ದು ಮಾಡುತ್ತಿದೆ (James film release). ಹಾಗೇ ಕನ್ನಡಿಗರು ಕರುನಾಡಲ್ಲಿ 'ಜೇಮ್ಸ್'  ಜಾತ್ರೆಯನ್ನ ಭರ್ಜರಿಯಾಗಿ ಆಚರಿಸುತ್ತಿದ್ದಾರೆ.  ಆದರೆ ಈ ಹೊತ್ತಲ್ಲೇ 'ಜೇಮ್ಸ್'  ಸಿನಿಮಾ ನಾಯಕಿ ಪ್ರಿಯಾ ಆನಂದ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ (Priya Anand).

ಅಂದಹಾಗೆ ನವರಂಗ್ ಥಿಯೇಟರ್​ನಲ್ಲಿ 'ಜೇಮ್ಸ್'  ಸಿನಿಮಾ (James film) ವೀಕ್ಷಣೆ ಬಳಿಕ ಮಾತನಾಡಿದ ಚಿತ್ರದ ಸಿನಿಮಾ ನಾಯಕಿ ಪ್ರಿಯಾ ಆನಂದ್ ಭಾವುಕರಾಗಿದ್ದಾರೆ (Priya Anand). ಅಲ್ಲದೆ ಕಾರಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ‌‌. ಕಳೆದ 3 ತಿಂಗಳಿಂದಲೇ 'ಜೇಮ್ಸ್'  ಸಿನಿಮಾ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಈ ಸಂಭ್ರಮಗಳ ನಡುವೆಯೂ ಅಪ್ಪು ನಮ್ಮೊಡನೆ ಇಲ್ಲದಿರುವ ನೋವು ಅಭಿಮಾನಿಗಳನ್ನ ಕಾಡುತ್ತಿದೆ (James film release).

ಇದನ್ನೂ ಓದಿ :  ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ

ಇದು ಕೇವಲ ನಾಯಕಿ ಪ್ರಿಯಾ ಆನಂದ್ ಅವರ ನೋವಲ್ಲ, ಕೋಟಿ ಕೋಟಿ ಅಭಿಮಾನಿಗಳ ನೋವು ಕೂಡ ಇದೇ ಆಗಿದೆ. ಥಿಯೇಟರ್ ನಲ್ಲಿ'ಜೇಮ್ಸ್'  ನೋಡಿ ಹೊರಗೆ ಬರುವ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ (Appu fans crying)‌. ಇದು ಸಂಭ್ರಮದ ಜೊತೆ ಅಪ್ಪು ನಮ್ಮೊಡನೆ ಇರದ ನೋವನ್ನು ಬಿಂಬಿಸುತ್ತಿದೆ. ಪುಟಾಣಿ ಮಕ್ಕಳು ಕೂಡ ಅಪ್ಪು ನೆನೆದು ಕಣ್ಣೀರು ಹಾಕುತ್ತಿದ್ದಾರೆ‌.

 

ಇದನ್ನೂ ಓದಿ :  ಜೇಮ್ಸ್ ಜಾತ್ರೆ : ಅಪ್ಪು ಕಟೌಟ್ ಮುಂದೆ 1001 ಈಡುಗಾಯಿ, ಪ್ರೇಕ್ಷಕರಿಗೆ ಚಿಕನ್ ಪಲಾವ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News