ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ

ಕುಂದಾನಗರಿ ಬೆಳಗಾವಿಯಲ್ಲಿ ಜೇಮ್ಸ್ ಅಬ್ಬರ ಜೋರಾಗಿದೆ.  ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ನಿವೃತ್ತ ಯೋಧರೊಬ್ಬರು ಸೇನಾ ಸಮವಸ್ತ್ರ  ಧರಿಸಿಕೊಂಡೇ ಸಿನಿಮಾ ವೀಕ್ಷಿಸಲು ಆಗಮಿಸಿದ್ದಾರೆ. 

Written by - Zee Kannada News Desk | Last Updated : Mar 17, 2022, 11:56 AM IST
  • ಕುಂದಾನಗರಿ ಬೆಳಗಾವಿಯಲ್ಲಿ ಜೇಮ್ಸ್ ಅಬ್ಬರ
  • ಮುಗಿಲು ಮುಟ್ಟಿದೆ ಅಭಿಮಾನಿಗಳ ಸಂಭ್ರಮ
  • ಸೇನಾ ಸಮವಸ್ತ್ರ ಧರಿಸಿಕೊಂಡೇ ಸಿನಿಮಾ ವೀಕ್ಷಿಸಲು ಬಂದ ನಿವೃತ್ತ ಯೋಧ
ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ title=
ಸೇನಾ ಸಮವಸ್ತ್ರ ಧರಿಸಿಕೊಂಡೇ ಸಿನಿಮಾ ವೀಕ್ಷಿಸಲು ಬಂದ ನಿವೃತ್ತ ಯೋಧ

ಬೆಳಗಾವಿ : ಬೆಳಗಾವಿಯಲ್ಲೂ ಜೇಮ್ಸ್ (James) ಮೇನಿಯಾ ಜೋರಾಗಿದೆ. ಬೆಳಗ್ಗೆಯಿಂದಲೇ ಅಭಿಮಾನಿಗಳ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ. ಈ ಮಧ್ಯೆ, ನಿವೃತ್ತ ಯೋಧ  ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು  ಸಿನಿಮಾ ವೀಕ್ಷಿಸಿದ್ದಾರೆ. 

ಕುಂದಾನಗರಿ ಬೆಳಗಾವಿಯಲ್ಲಿ ಜೇಮ್ಸ್ (James) ಅಬ್ಬರ ಜೋರಾಗಿದೆ.  ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ನಿವೃತ್ತ ಯೋಧರೊಬ್ಬರು ಸೇನಾ ಸಮವಸ್ತ್ರ  ಧರಿಸಿಕೊಂಡೇ ಸಿನಿಮಾ ವೀಕ್ಷಿಸಲು ಆಗಮಿಸಿದ್ದಾರೆ. ಅಪ್ಪು ಕೊನೆಯ ಚಿತ್ರ ಜೇಮ್ಸ್ ನಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ (James release) . ಈ ಹಿನ್ನೆಲೆಯಲ್ಲಿ ನಿವೃತ್ತ ಯೋಧ ವಿನಾಯಕ ಮೇದಾರ್ ಸೇನಾ ಸಮವಸ್ತ್ರದಲ್ಲಿ ಬಂದು ಚಿತ್ರ ವೀಕ್ಷಿಸಿದ್ದಾರೆ. 

ಇದನ್ನೂ ಓದಿ :  ಜೇಮ್ಸ್ ಜಾತ್ರೆ : ಅಪ್ಪು ಕಟೌಟ್ ಮುಂದೆ 1001 ಈಡುಗಾಯಿ, ಪ್ರೇಕ್ಷಕರಿಗೆ ಚಿಕನ್ ಪಲಾವ್

ಜೇಮ್ಸ್  (James release) ಅಪ್ಪು ಅವರ ಕೊನೆಯ ಸಿನಿಮಾ ಅಂತಾ ನಮಗೇನು ದುಃಖ ಇಲ್ಲ, ಪುನೀತ್ ರಾಜ್ ಕುಮಾರ್ ನಮ್ಮ ಹೃದಯದಲ್ಲಿ ಎಂದೆಂದಿಗೂ ಅಜರಾಮರ ಎಂದು ನಿವೃತ್ತ ಯೋಧ ವಿನಾಯಕ ಮೇದಾರ್ (Vinayaka Medhar) ಹೇಳಿದ್ದಾರೆ.  ಇದು ಅಪ್ಪು ಅವರ ಕೊನೆಯ ಚಿತ್ರ ಎಂದು ಯಾರು ಹೇಳಬೇಡಿ ಎಂದು ಅವರು ಮನವಿ ಮಾಡಿದ್ದಾರೆ. 

 

ಇದೆ ವೇಳೆ ಕೇಕ್ ಕಟ್ ಮಾಡುವ ಮೂಲಕ ಪುನೀತ್ ರಾಜಕುಮಾರ್ (Puneeth Rajkumar) ಹುಟ್ಟುಹಬ್ಬ ಆಚರಿಸಿದ್ದಾರೆ. 

ಇದನ್ನೂ ಓದಿ :  James Movie Release: ಕನ್ನಡಿಗರ ನಾಡಲ್ಲಿ 'ಜೇಮ್ಸ್‌' ಜಾತ್ರೆ ಶುರು..! ಹೇಗಿದೆ ಗೊತ್ತಾ ಅಪ್ಪು ಸಿನಿಮಾ ಸಂಭ್ರಮ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News